ಮಡಿಕೇರಿ, ಮಾ. ೧೯: ರಾಜ್ಯ ಸರಕಾರ ಅಧೀನದ ಕರ್ನಾಟಕ ರಾಜ್ಯ ಸುರಕ್ಷತಾ ಸಂಸ್ಥೆ ವತಿಯಿಂದ ಕೊಡಮಾಡುವ ಸುರಕ್ಷತಾ ಪ್ರಶಸ್ತಿಯನ್ನು ಹೊಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೆöÊವೇಟ್ ಲಿಮಿಟೆಡ್ ಸಂಸ್ಥೆಯ ಹೆಚ್.ಆರ್. ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂಲತಃ ಸುಂಟಿಕೊಪ್ಪದ ವಿನೋದ್ ಜಿ.ಬಿ. ಅವರು ಪಡೆದುಕೊಂಡರು.

ಬೆಂಗಳೂರಿನಲ್ಲಿ ೫೨ನೇ ರಾಷ್ಟಿçÃಯ ಸುರಕ್ಷತಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಕಾರ್ಯನಿರ್ವಹಣೆಯಲ್ಲಿ ಸಾಧನೆ ತೋರಿರುವ ಹಿನ್ನೆಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು ಸುಂಟಿಕೊಪ್ಪದ ಗುಡ್ಡೆಮನೆ ಬಾಬು ಹಾಗೂ ರಾಣಿ ದಂಪತಿ ಪುತ್ರ.