ಮಡಿಕೇರಿ, ಮಾ. ೨೦: ಗೋಣಿಕೊಪ್ಪ ಶ್ರೀ ಉಮಾಮಹೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ಪಾರ್ವತಿ ದೇವಿಯ ಉತ್ಸವ ತಾ.೨೨ರಿಂದ ತಾ. ೨೫ರವರೆಗೆ ನಡೆಯಲಿದೆ.

ತಾ. ೨೨ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ೮ ಗಂಟೆಗೆ ಮಹಾಗಣಪತಿ ಹೋಮ, ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ, ರಾತ್ರಿ ೭ ಗಂಟೆಗೆ ದೀಪಾರಾಧನೆ, ೭.೩೦ಕ್ಕೆ ೫ ಸುತ್ತು ತೊಚಂಬಲಿ, ೮ ಗಂಟೆಗೆ ಮಹಾಮಂಗಳಾರತಿ.

ತಾ. ೨೩ರಂದು ಬೆಳಿಗ್ಗೆ ೫ ಗಂಟೆಗೆ ೫ ಸುತ್ತು ಇರುಬಳಕು, ೧೦ ಗಂಟೆಗೆ ದುರ್ಗಾಹೋಮ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಅನ್ನದಾನ, ರಾತ್ರಿ ೭ ಗಂಟೆಗೆ ೯ ದೇವರ ನೃತ್ಯ ಪ್ರದಕ್ಷಿಣಿ, ೮ ಗಂಟೆಗೆ ಸಾಮೂಹಿಕ ವಸಂತ ಪೂಜೆ, ೮.೩೦ಕ್ಕೆ ಮಹಾಮಂಗಳಾರತಿ, ಅನ್ನದಾನ ನಡೆಯಲಿದೆ.

ತಾ.೨೪ರಂದು ಬೆಳಿಗ್ಗೆ ೧೦ ಗಂಟೆಗೆ ಸಾಮೂಹಿಕ ಪಂಚಾಮೃತ ಅಭಿಷೇಕ ಮತ್ತು ಷೋಡಶಾಭಿಷೇಕ, ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ, ಅನ್ನದಾನ, ರಾತ್ರಿ ೭ ಗಂಟೆಗೆ ದೇವಸ್ಥಾನದ ಕೆರೆಯಲ್ಲಿ ಅವಭೃತ ಸ್ನಾನ, ೮ ಗಂಟೆಗೆ ೧೧ ಸುತ್ತು ದೇವರ ನೃತ್ಯ ಪ್ರದಕ್ಷಿಣೆ, ಅನ್ನದಾನ ಹಾಗೂ ತಾ. ೨೫ರಂದು ಬೆಳಿಗ್ಗೆ ೧೦ ಗಂಟೆಗೆ ಕಲಷಾಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಮಂತ್ರಾಕ್ಷತೆ ನಡೆಯಲಿದೆ.