ಮಡಿಕೇರಿ, ಮಾ. ೨೦: ಮಂಗಳೂರು ರಾಷ್ಟಿçÃಯ ಹೆದ್ದಾರಿಯಲ್ಲಿ ಸಂಚರಿಸುವ ಮೀನು ಸಾಗಾಣಿಕೆ ವಾಹನಗಳಿಂದಾಗಿ ರಸ್ತೆಗೆ ಹಾನಿಯುಂಟಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಗಿದೆ.
ಹೆದ್ದಾರಿಯಲ್ಲಿ ಸಂಚರಿಸುವ ಮೀನು ಸಾಗಾಣಿಕೆ ವಾಹನಗಳಿಂದ ರಸ್ತೆಗೆ ಉಪ್ಪು ಮಿಶ್ರಿತ ಕೊಳಕು ನೀರು ಸುರಿಯುತ್ತಿದ್ದು, ಇದರಿಂದಾಗಿ ವಾಯು ಮಾಲಿನ್ಯ ಉಂಟಾಗುವದಲ್ಲದೆ, ರಸ್ತೆಯ ಗುಣಮಟ್ಟ ಕೂಡ ಹಾಳಾಗುತ್ತಿದೆ. ನೀರಿನಿಂದಾಗಿ ರಸ್ತೆಯಲ್ಲಿ ಜಾರುವದರಿಂದ ಅಪಘಾತಗಳು ಸಂಭವಿಸುತ್ತಿವೆ. ದುರ್ವಾಸನೆಯಿಂದ ಶಾಲಾ ಮಕ್ಕಳ ಆರೋಗ್ಯ ಕೆಡುತ್ತಿದೆ. ಅಲ್ಲದೆ, ದಿನನಿತ್ಯ ಸಂಚರಿಸುವ ಸ್ಥಳೀಯರ ವಾಹನಗಳು ತುಕ್ಕು ಹಿಡಿಯುತ್ತಿವೆ. ಹಾಗಾಗಿ ಐಪಿಸಿ ಸೆಕ್ಷನ್ ೪೨೫ರ ಅನ್ವಯ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮದೆ ಗ್ರಾಮದ ಜಿ.ಎ. ಇಬ್ರಾಹಿಂ ಹಾಗೂ ವಿವೇಕ್ ಎಂಬವರುಗಳು ಮನವಿ ಸಲ್ಲಿದ್ದಾರೆ.