ನಾಪೋಕ್ಲು, ಮಾ. ೨೦: ನಾಪೋಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಎರಡನೇ ದಿನದ ಪಂದ್ಯಾಟದಲ್ಲಿ ನಾಪಂಡ, ಪೊನ್ನೋಲತಂಡ, ವಾಟೇರಿರ, ನಾಗಂಡ, ಮದ್ರಿರ, ತಿರೋಡಿರ, ಅಪ್ಪಾರಂಡ, ತಂಬುಕುತ್ತಿರ, ಮೂಡೆರ, ಕಾಂಗಿರ, ನಂಬುಡಮಾಡ, ಪುಲಿಯಂಡ, ಪಟ್ಟಮಾಡ, ಐಚಂಡ, ಕಂಜಿತAಡ, ಕುಂಚೆಟ್ಟಿರ, ಚೊಟ್ಟೆರ, ಕೇತಿರ, ಮಾದಂಡ, ಕೋದಂಡ, ಆಲೆಮಾಡ, ಅಪ್ಪುಮಣಿಯಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಮೈದಾನ ೧ರ ಮುಂಡAಡ ಮತ್ತು ನಾಪಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ನಾಪಂಡ ತಂಡವು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಕುಟ್ಟಂಡ (ಅಮ್ಮತ್ತಿ) ಮತ್ತು ಪೊನ್ನೋಲತಂಡ ತಂಡಗಳ ನಡುವಿನ ಪಂದ್ಯದಲ್ಲಿ ಪೊನ್ನೋಲತಂಡ ತಂಡವು ಕುಟ್ಟಂಡ ತಂಡವನ್ನು ೬-೪ ಗೋಲಿನ ಅಂತರದಿAದ ಪರಾಭವಗೊಳಿಸಿತು. ವಾಟೇರಿರ ಮತ್ತು ನಂದಿನೆರವAಡ ತಂಡಗಳ ನಡುವಿನ ಪಂದ್ಯದಲ್ಲಿ ವಾಟೇರಿರ ತಂಡವು ನಂದಿನೆರವAಡ ತಂಡವನ್ನು ೪-೦ ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ನಾಗಂಡ ಮತ್ತು ಕುಪ್ಪಂಡ ತಂಡಗಳ ನಡುವಿನ ಪಂದ್ಯದಲ್ಲಿ ನಾಗಂಡ ತಂಡವು ಕುಪ್ಪಂಡ ತಂಡವನ್ನು ೧-೦ ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಮದ್ರಿರ ಮತ್ತು ಪಾಲೇಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮದ್ರಿರ ತಂಡವು ಪಾಲೇಂಗಡ ತಂಡವನ್ನು ೩-೦ ಗೋಲುಗಳ ಅಂತರದಿAದ ಮಣಿಸಿತು. ತಿರೋಡಿರ ಮತ್ತು ಮುಳ್ಳಂಡ ತಂಡಗಳ ನಡುವಿನ ಪಂದ್ಯದಲ್ಲಿ ತಿರೋಡಿರ ತಂಡವು ಮುಂದಿನ ಸುತ್ತಿಗೆ ಪ್ರವೇಶಿಸಿತು. ಬಯವಂಡ ಮತ್ತು ಅಪ್ಪಾರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಪ್ಪಾರಂಡ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ತಂಬುಕುತ್ತಿರ ಮತ್ತು ಬಾದುಮಂಡ ತಂಡಗಳ ನಡುವಿನ ಪಂದ್ಯದಲ್ಲಿ ತಂಬುಕುತ್ತಿರ ತಂಡವು ಬಾದುಮಂಡ ತಂಡವನ್ನು ೨-೦ ಗೋಲುಗಳಿಂದ ಮಣಿಸಿ ಮುನ್ನುಗ್ಗಿತು.

ಮೈದಾನ ೨ರಲ್ಲಿ ನಡೆದ ಕಾಳೆಯಂಡ ಮತ್ತು ಮೂಡೆರ ತಂಡಗಳ ನಡುವಿನ ಪಂದ್ಯದಲ್ಲಿ ಮೂಡೆರ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಕಾಂಗಿರ ಮತ್ತು ನಿಡುಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಂಗಿರ ತಂಡವು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ನಂಬುಡಮಾಡ ಮತ್ತು ಪುತ್ತರೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಂಬುಡಮಾಡ ತಂಡವು ಮುನ್ನಡೆಯಿತು. ಓಡಿಯಂಡ ಮತ್ತು ಪುಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಪುಲಿಯಂಡ ತಂಡವು ಓಡಿಯಂಡ ತಂಡವನ್ನು ೬-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಅಯ್ಯನೆರವಂಡ ಮತ್ತು ಪಟ್ಟಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಪಟ್ಟಮಾಡ ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಐಚಂಡ ಮತ್ತು ಗೌಡಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಐಚಂಡ ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಕಂಜಿತAಡ ಮತ್ತು ಚೋಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಂಜಿತAಡ ತಂಡವು ಚೋಕಂಡ ತಂಡವನ್ನು ಟೈಬ್ರೇಕರ್‌ನ ೪-೩ ಗೋಲುಗಳ ಅಂತರದಿAದ ಮಣಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.

ಮೈದಾನ ೩ರಲ್ಲಿ ನಡೆದ ಕೈಬುಲಿರ ಮತ್ತು ಕುಂಚೆಟ್ಟಿರ ತಂಡಗಳ ನಡುವಿನ ಮೊದಲ ಸೆಣೆಸಾಟದಲ್ಲಿ ಕುಂಚೆಟ್ಟಿರ ತಂಡವು ಕೈಬುಲಿರ ತಂಡವನ್ನು ೪-೦ ಗೋಲುಗಳ ಅಂತರದಿAದ ಮಣಿಸಿ ಮುನ್ನುಗ್ಗಿತು. ಬಟ್ಟಿರ ಮತ್ತು ಚೊಟ್ಟೆರ ತಂಡಗಳ ನಡುವಿನ ಪಂದ್ಯದಲ್ಲಿ ಚೊಟ್ಟೆರ ತಂಡವು ಬಟ್ಟಿರ ತಂಡವನ್ನು ೫-೪ ಗೋಲುಗಳ ಅಂತರದಿAದ ಸೋಲಿಸಿತು. ಕೇತಿರ ಮತ್ತು ಮಾಣಿಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೇತಿರ ತಂಡವು ಮಾಣಿಪಂಡ ತಂಡವನ್ನು ೫-೪ ಗೋಲುಗಳ ಅಂತರದಿAದ ಮಣಿಸಿತು. ಮಾದಂಡ ಮತ್ತು ಚೆರಿಯಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾದಂಡ ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಆದೇಂಗಡ ಮತ್ತು ಕೋದಂಡ ತಂಡಗಳ ನಡುವೆ ನಡೆದ ಸೆಣೆಸಾಟದಲ್ಲಿ ಕೋದಂಡ ತಂಡವು ಆದೇಂಗಡ ತಂಡವನ್ನು ೫-೦