ಚೆಟ್ಟಳ್ಳಿ, ಮಾ. ೨೦: ಚೆನ್ನೆöÊನಲ್ಲಿ ನಡೆದ ಇಂಡಿಯನ್ ನ್ಯಾಷನಲ್‌ನ ಸೌತ್ ಇಂಡಿಯಾ ರ‍್ಯಾಲಿಯ ಜಿಪ್ಸಿಕ್ಲಾಸ್‌ನಲ್ಲಿ ಕೊಡಗಿನ ಪೊನ್ನಂಪೇಟೆಯ ಕೊಕ್ಕೇಂಗಡ ದರ್ಶನ್ ನಾಚಪ್ಪ (ಡ್ರೆöÊವರ್) ಹಾಗೂ ಮೇಕೇರಿರ ಅಭಿನವ್ ಗಣಪತಿ (ಕೋಡ್ರೆöÊವರ್) ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ.ತಾ.೧೬ರಿಂದ ತಾ.೧೯ರವರೆಗೆ ಚೆನ್ನೆöÊನಲ್ಲಿ ನಡೆದ ರ‍್ಯಾಲಿಯಲ್ಲಿ ರಾಷ್ಟç ಹಾಗೂ ಅಂತರರಾಷ್ಟಿçÃಯ ಮಟ್ಟದ ೬೦ ನುರಿತ ರ‍್ಯಾಲಿ ಪಟುಗಳು ಭಾಗವಹಿಸಿದ್ದರು.

ಜಿಪ್ಸಿಕ್ಲಾಸ್‌ನಲ್ಲಿ ಕೊಡಗಿನ ಪೊನ್ನಂಪೇಟೆಯ ಕೊಕ್ಕೇಂಗಡ ದರ್ಶನ್ ನಾಚಪ್ಪ (ಡ್ರೆöÊವರ್) ಹಾಗೂ ಮೇಕೇರಿರ ಅಭಿನವ್ ಗಣಪತಿ (ಕೋಡ್ರೆöÊವರ್) ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ. ದರ್ಶನ್ ನಾಚಪ್ಪ ಹಾಗೂ ಅಭಿನವ್ ಗಣಪತಿ ಈ ಹಿಂದೆ ನಡೆದ ಐಎನ್‌ಆರ್‌ಎನ್‌ಸಿ ರ‍್ಯಾಲಿ ಹಲವು ಆಟೋಕ್ರಾಸ್ ನಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ್ದಾರೆ.

ಇವರಲ್ಲದೆ ಕೊಡಗಿನ ರ‍್ಯಾಲಿಪಟು ಗಳಾದ ಜಿಪ್ಸಿ ಕ್ಯಾಟಗರಿಯಲ್ಲಿ ಮೇಕೆರಿರ ಕಾರ್ಯಪ್ಪ, ಐಎನ್‌ಆರ್‌ಸಿ -೪ ರಲ್ಲಿ ಅಭಿರೈ, ಬೆಲಿನೋ ಆರ್ ಎಸ್ ಟರ್ಬೋದಲ್ಲಿ ಅಮ್ಮತ್ತಿಯ ಕೊಂಗAಡ ಗಗನ್ ಕರುಂಬಯ್ಯ, ಐಎನ್‌ಆರ್‌ಸಿ -೨ರಲ್ಲಿ ವೀರಾಜಪೇಟೆಯ ಸುನಿಲ್ ಕಬೀರ್ ವಿಡ್ಬೂö್ಯ ಪೋಲೋದಲ್ಲಿ ವಿವಿಧ ಹಂತದಲ್ಲಿ ಭಾಗವಹಿಸಿದ್ದರು. ಐಎನ್‌ಆರ್‌ಸಿ ರ‍್ಯಾಲಿಯಲ್ಲಿ ಕೊಡಗಿನಿಂದ ಭಾಗವಹಿಸಿದ ಎಲ್ಲಾ ವಾಹನವನ್ನು ಚೆಪ್ಪುಡಿರ ಮಾಚು ಮಾಚಯ್ಯ ಸಿದ್ದಗೊಳಿಸಿದ್ದು, ರ‍್ಯಾಲಿ ಸಂದರ್ಭ ವಾಹನಗಳ ತಾಂತ್ರಿಕ ನಿರ್ವಹಣೆಯ ಜವಾಬ್ದಾರಿ ವಹಿಸಿದ್ದರು. -ಕರುಣ್ ಕಾಳಯ್ಯ