ಮಡಿಕೇರಿ, ಮಾ. ೨೦: ಭಾರತದ ಖ್ಯಾತ ಟೆನ್ನಿಸ್ ಆಟಗಾರ ಕೊಡಗಿನವರಾದ ಮಚ್ಚಂಡ ರೋಹನ್ ಬೋಪಣ್ಣ ಅವರು ಪ್ರತಿಷ್ಠಿತ ಅಮೇರಿಕಾದ ಇಂಡಿಯನ್ ವೇಲ್ಸ್ ಎ.ಟಿ.ಪಿ. ಮಾಸ್ಟರ್ಸ್-೧೦೦೦ ಟೂರ್ನಿಯಲ್ಲಿ ಜಯಗಳಿಸಿದ್ದಾರೆ. ಈ ಚಾಂಪಿಯನ್ ಆಗುವ ಮೂಲಕ ರೋಹನ್ ಎಟಿಪಿ ಮಾಸ್ಟರ್ಸ್ ೧೦೦೦ ಪಟ್ಟ ಗಳಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ೪೩ ವರ್ಷದವರಾದ ಕೊಡಗಿನ ಮಾದಾಪುರದವರಾದ ರೋಹನ್ ತಮ್ಮ ಜೊತೆಗಾರ ಆಸ್ಟೆçÃಲಿಯಾದ ೩೫ ವರ್ಷ ಪ್ರಾಯದ ಮ್ಯಾಟ್ ಎಟೈನ್ ಜೊತೆಗೂಡಿ ಪುರುಷರ ಡಬಲ್ಸ್ನಲ್ಲಿ ಸಾಧನೆ ತೋರಿದ್ದಾರೆ. ಇವರು ಫೈನಲ್ಸ್ನಲ್ಲಿ ೬-೩, ೨-೬, ೧೦-೮ ಸೆಟ್‌ಗಳಿಂದ ಅಗ್ರ ಶ್ರೇಯಾಂಕಿತ ನೆದರ್‌ಲ್ಯಾಂಡ್‌ನ ವೆಸ್ಲಿ ಕೂಲ್ಹೋಪ್ ಹಾಗೂ ಬ್ರಿಟನ್‌ನ ನೀಲ್ ಸ್ಕುಪ್‌ಸ್ಕಿ ಅವರುಗಳ ವಿರುದ್ಧ ಜಯಗಳಿಸಿದ್ದಾರೆ. ಈ ಗೆಲುವಿನ ಮೂಲಕ ಮಾಜಿ ನಂ.೩ ಆಗಿದ್ದ ರೋಹನ್ ನಾಲ್ಕು ಸ್ಥಾನ ಬಡ್ತಿಯೊಂದಿಗೆ ಎಟಿಪಿ ಡಬಲ್ಸ್ ರ‍್ಯಾಂಕಿAಗ್‌ನಲ್ಲಿ ೧೧ನೇ ಸ್ಥಾನಕ್ಕೆ ಏರಿದ್ದಾರೆ. ಈ ಹಿಂದೆ ರೋಹನ್ ೫ ಮಾಸ್ಟರ್ಸ್ ೧೦೦೦ ಪಂದ್ಯದಲ್ಲಿ ಜಯಗಳಿಸಿದ್ದಾರೆ.