ಮಡಿಕೇರಿ, ಮಾ. ೨೦: ಅರೆ ಸೇನಾಪಡೆ ನಿವೃತ್ತ (ಮಾಜಿ) ಯೋಧರ ಸಮಾವೇಶವು ತಾ. ೨೩ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ನಡೆಯಲಿದೆ.

ಮಾಜಿ ಅಡ್ವೊಕೇಟ್ ಜನರಲ್ ಎಸ್.ಎಸ್. ಪೊನ್ನಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ, ಫೀಲ್ಡ್ ಮಾರ್ಷಲ್ ಕೊಡವ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗುರುಮನೆ-೧೨ ಹಾಲಿ ಅಧ್ಯಕ್ಷರು, ಉದ್ಯಮಿ ದೇಯಂಡ ಜಯಾ ಚಂಗಪ್ಪ ಇತರರು ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗೆ ಕಾರ್ಯದರ್ಶಿ ಮೊ. ೯೪೮೧೦೫೭೮೬೮ ನ್ನು ಸಂಪರ್ಕಿಸಬಹುದು.