ಶ್ರೀಮಂಗಲ, ಮಾ. ೨೦: ಪೊನ್ನಂಪೇಟೆ ತಾಲೂಕು ಬೆಳ್ಳೂರು-ಹರಿಹರ ಗ್ರಾಮದ ಬಾಚೀರ ಕುಟುಂಬದಿAದ ಹರಿಹರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಏಪ್ರಿಲ್ ೧ ರಿಂದ ೯ ರವರೆಗೆ ನಡೆಯುವ ಕೊಡವ ಕೌಟುಂಬಿಕ ಬಾಚೀರ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಟೈಸ್ ಬಿಡುಗಡೆ ಮಾಡಲಾಯಿತು.

ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಯ ಅಧ್ಯಕ್ಷರಾದ ಬಾಚೀರ ಎನ್.ಕಾರ್ಯಪ್ಪ, ಬಾಚೀರ ಕುಟುಂಬ ಅಧ್ಯಕ್ಷ ಸುಜಾ ಉತ್ತಯ್ಯ, ಸಂಚಾಲಕ ರಾಜ ಉತ್ತಪ್ಪ ನೇತೃತ್ವದಲ್ಲಿ ಟೈಸ್ ಬಿಡುಗಡೆ ನಡೆಯಿತು.

ಈ ಬಗ್ಗೆ ಕುಟುಂಬ ಅಧ್ಯಕ್ಷರಾದ ಸುಜಾ ಉತ್ತಯ್ಯ ಮತ್ತು ಪಂದ್ಯಾವಳಿ ಅಧ್ಯಕ್ಷರಾದ ಕಾಶಿ ಕಾರ್ಯಪ್ಪ ಅವರು ವಿವರಣೆ ನೀಡಿ, ಪಂದ್ಯಾವಳಿಗೆ ಮೊದಲು ನೋಂದಾಯಿಸುವ ೬೪ ತಂಡಗಳಿಗೆ ಮಾತ್ರ ಆದ್ಯತೆ ನೀಡಲು ನಿರ್ಧರಿಸಲಾಗಿತ್ತು, ಅದರಂತೆ ೬೪ ತಂಡ ನೋಂದಣಿ ಆಗಿದೆ. ಪಂದ್ಯಾವಳಿಯ ವಿನ್ನರ್ಸ್ ತಂಡಕ್ಕೆ ರೂ.೫೦ ಸಾವಿರ ಮತ್ತು ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ ೩೦ ಸಾವಿರ ಮತ್ತು ಟ್ರೋಫಿ, ಮೂರನೇ ಸ್ಥಾನ ಪಡೆಯುವ ತಂಡಕ್ಕೆ ರೂ.೨೦ ಸಾವಿರ ಮತ್ತು ಟ್ರೋಫಿ ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಿದರು.

ಎಲ್ಲಾ ಪಂದ್ಯಾವಳಿಗೆ ಮ್ಯಾನ್ ಆಫ್ ದಿ ಮ್ಯಾಚ್, ಪಂದ್ಯಾವಳಿಯಲ್ಲಿ ಮ್ಯಾನ್ ಆಫ್ ದಿ ಸೀರಿಸ್, ಬೆಸ್ಟ್ ಫೀಲ್ಡರ್, ಬೆಸ್ಟ್ ಬ್ಯಾಟ್ಸ್ಮ್ಯಾನ್ ಪ್ರಶಸ್ತಿಯನ್ನು ನೀಡಲಾಗುವುದು. ಕಳೆದ ವರ್ಷ ಹರಿಹರ ಗ್ರಾಮದ ಮನ್ನೇರ ಕುಟುಂಬ ಇದೇ ಮೈದಾನದಲ್ಲಿ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿತ್ತು. ಇದೀಗ ೨ನೇ ವರ್ಷದ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಏಪ್ರಿಲ್ ೧Àರಂದು ಉದ್ಘಾಟನಾ ಪಂದ್ಯವನ್ನು ಮಹಿಳಾ ತಂಡಗಳ ನಡುವೆ ಆಯೋಜಿಸಲಾಗಿದೆ. ಟಿ.ಶೆಟ್ಟಿಗೇರಿಯ ಸಂಭ್ರಮ ಮಹಿಳಾ ಸಾಂಸ್ಕೃತಿಕ ಸಂಘ ಹಾಗೂ ಶ್ರೀಮಂಗಲ ಕೊಡವ ಸಮಾಜದ ಪೊಮ್ಮಕ್ಕಡ ಕೂಟ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಚೆಟ್ಟಳ್ಳಿಯ ಜೋಮಾಲೆ ಪೊಮ್ಮಕ್ಕಡ ಕೂಟ ತಂಡದೊAದಿಗೆ ಏಪ್ರಿಲ್ ೯ ರಂದು ಪಂದ್ಯ ನಡೆಯಲಿದೆ. ವಿಜೇತ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನವಿದೆ ಎಂದು ತಿಳಿಸಿದರು.

ಪಂದ್ಯಾವಳಿ ಉದ್ಘಾಟನೆಯನ್ನು ಏಪ್ರಿಲ್ ೧ ರಂದು ಪೂರ್ವಾಹ್ನ ೯ ಗಂಟೆಗೆ ಹಿರಿಯರಾದ ಮುಕ್ಕಾಟಿರ ಶಂಭು ಕಾರ್ಯಪ್ಪ ನೆರವೇರಿಸುವರು. ಕ್ರೀಡಾಪಟು ತೀತಿರ ಸೋಮಣ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಮಾಜಿ ಅಥ್ಲೆಟ್ ತೀತಮಾಡ ಅರ್ಜುನ್ ದೇವಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಅವರು ಪಂದ್ಯಾವಳಿಯ ಯಶಸ್ವಿಗೆ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.

ಈ ಸಂದರ್ಭ ಪಂದ್ಯಾವಳಿ ಕಾರ್ಯದರ್ಶಿ ದಾದು ದೇವಯ್ಯ, ಕುಟುಂಬದ ಸಂಪತ್, ಅಶ್ವಿನಿ ಸಂಪತ್, ಪ್ರದೀಪ್ ಕುಶಾಲಪ್ಪ, ನಿರನ್ ನಾಣಯ್ಯ, ಮೋಹನ್ ಲೋಕೇಶ್, ಜಸ್ಮಿ, ಸ್ವಾಗತ್ ಸೋಮಣ್ಣ, ಅಮನ್ ಸುಬ್ಬಯ್ಯ, ಜಿಮ್ಮಿ ಉತ್ತಪ್ಪ, ಶಾಶ್ವತ್ ಮೊಣ್ಣಪ್ಪ, ಆಂಚಲ್ ತಂಗಮ್ಮ ಹಾಜರಿದ್ದರು.