ಮಡಿಕೇರಿ, ಮಾ. ೨೦: ಮಡಿಕೇರಿ ಸಂಪಿಗೆಕಟ್ಟೆ ಬಳಿಯ ಕನ್ನಂಡಬಾಣೆಯ ಶ್ರೀ ಭದ್ರಕಾಳಿ ಅನ್ನಪೂರ್ಣೇಶ್ವರಿ ಅಮ್ಮನವರ ಜಾತ್ರೆಯು ಶ್ರೀ ಬಿಸಿಲು ಮಾರಿಯಮ್ಮ ತಾಯಿಯ ಕೃಪೆಯಿಂದ ಶ್ರದ್ಧಾಭಕ್ತಿಯಿಂದ ಅಚರಿಸಲು ನಿಶ್ಚಯಿಸಲಾಗಿದೆ.
ತಾ.೨೨ರಂದು ಬೆಳಿಗ್ಗೆ ಸ್ಥಳ ಶುದ್ದಿ, ಬಿಂಬ ಶುದ್ಧಿ, ಗಣಪತಿ ಹೋಮ ನಂತರ ದುರ್ಗಾಹೋಮ, ನವ ಕಳಶಾಭಿಷೇಕ, ಮಹಾಪೂಜೆ ನಂತರ ಮಧ್ಯಾಹ್ನ ದೇವಿ ದರ್ಶನ, ೧ ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಆ ನಂತರ ಮುತ್ತೆöÊದೆಯರಿಗೆ ಬಾಗಿನ ಕೊಡುವ ಕಾರ್ಯಕ್ರಮವಿದೆ. ಸಂಜೆ ದುರ್ಗಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ತಾ.೨೩ರಂದು ಬೆಳಿಗ್ಗೆ ಗುಳಿಗ ಪೂಜೆ, ದೇವಿಪೂಜೆ, ದೇವಿದರ್ಶನ ನಂತರ ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ೩ ಗಂಟೆಗೆ ಭದ್ರಕಾಳಿ ಅಮ್ಮನವರಿಗೆ ಪೂಜೆ ನಡೆಸಲಾಗುವುದು. ರಾತ್ರಿ ೮.೩೦ ಗಂಟೆಯಿAದ ಅನ್ನ ಪ್ರಸಾದ ಕಾರ್ಯಕ್ರಮ ನಡೆಯಲಿದೆ.