ಮಡಿಕೇರಿ, ಮಾ. ೨೦: ಮಹಿಳೆಯೋರ್ವರು ನಾಪತ್ತೆಯಾಗಿರುವ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಠಾಣಾ ವ್ಯಾಪ್ತಿಯ ಹೊಸ್ಕೇರಿ ಗ್ರಾಮದ ಶಾಸ್ತಿç ನಗರದ ನಿವಾಸಿ ಚಂದ್ರ ಎಂಬವರ ಪತ್ನಿ ಚಿಮ್ಮಿ (೪೮) ಅವರು ತಾ.೯ರಂದು ಮನೆಯಿಂದ ಹೊರಗೆಂದು ತೆರಳಿದವರು ಈತನಕ ಹಿಂತಿರುಗಿಲ್ಲ ಎಂದು ಅವರ ಪುತ್ರ ಶಶಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ಗ್ರಾಮಾಂತರ ಠಾಣೆ (೨೨೮೭೭೭) ಅಥವಾ ಪೊಲೀಸ್ ಅಧೀಕ್ಷಕರ ಕಚೇರಿ (೨೨೯೦೦೦)ಗೆ ತಿಳಿಸುವಂತೆ ಪೊಲೀಸ್ ಪ್ರಕಟಣೆ ಕೋರಿದೆ.