ಕೂಡಿಗೆ, ಮಾ. ೨೦: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ಕುಡಿಯುವ ನೀರಿನ ವ್ಯವಸ್ಥೆಗೆ ಹಾಗೂ ದನಕರುಗಳಿಗೆ ಕುಡಿಯುವ ನೀರಿಗಾಗಿ ಕೆರೆಕಟ್ಟೆಗಳನ್ನು ತುಂಬಿಸುವ ಉದ್ದೇಶದಿಂದ ಅಣೆಕಟ್ಟೆಯಿಂದ ನಾಲೆ ಮತ್ತು ನದಿಗೆ ಇಂದಿನಿAದ ನೀರನ್ನು ಹರಿಸಲಾಗುತ್ತಿದೆ.

ಅಣೆಕಟ್ಟೆಯಿಂದ ನಾಲೆಗೆ ೪೦೦ ಕ್ಯೂಸೆಕ್ಸ್, ನದಿಗೆ ೨೦೦ ಕ್ಯೂಸೆಕ್ಸ್ ಹರಿಸಲಾಗುವುದು. ಅಚ್ಚುಕಟ್ಟು ಪ್ರದೇಶದ ರೈತರ ಹಾಗೂ ಜನಪ್ರತಿನಿಧಿಗಳ ಮನವಿ ಮೇರೆಗೆ ನೀರನ್ನು ಅಣೆಕಟ್ಟೆಯಿಂದ ೫ ದಿನಗಳವರೆಗೆ ಹರಿಸಲಾಗುವುದು ಎಂದು ಅಧೀಕ್ಷಕ ಅಭಿಯಂತರ ಕೆ.ಕೆ. ರಘುಪತಿ ತಿಳಿಸಿದ್ದಾರೆ.