ಸುಂಟಿಕೊಪ್ಪ, ಮೇ ೨೫: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೨೫ನೇ ವರ್ಷದ ಡಿ.ಶಿವಪ್ಪ ಸ್ಮಾರಕ ಬೆಳ್ಳಿ ಮಹೋತ್ಸವದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯ ಗುರುವಾರ ನಡೆದ ಪಂದ್ಯದಲ್ಲಿ ಕ್ಯಾಲಿಕಟ್ ಎಫ್.ಸಿ ಮತ್ತು ಅಮಿಗೋಸ್ ಎಫ್.ಸಿ ಮಲಪುರಂ ತಂಡಗಳು ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದವು.
ಕ್ಯಾಲಿಕಟ್ ಎಫ್.ಸಿ ಹಾಗೂ ಮಿಡ್ ಸಿಟಿ ಸುಂಟಿಕೊಪ್ಪ ನಡೆದ ಮೊದಲ ಪಂದ್ಯದ ಮೊದಲಾರ್ಧದಲ್ಲಿ ಎರಡು ತಂಡಗಳು ಪ್ರಾರಂಭದಿAದಲೂ ಸಮಬಲ ಹೋರಾಟ ನಡೆಸಿದವು. ಈ ಮಧ್ಯೆ ಕ್ಯಾಲಿಕಟ್ ತಂಡ ನವಾಸ್ ಮಿಡ್ಸಿಟಿ ತಂಡದ ವಿರುದ್ಧ ೧೨ ನಿಮಿಷದಲ್ಲಿ ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ನಂತರ ಯಾರೂ ಗೋಲು ಗಳಿಸದೆ ಇದರಿಂದ ಕ್ಯಾಲಿಕಟ್ ತಂಡ ಒಂದು ಗೋಲಿನ ಮನ್ನಡೆ ಸಾಧಿಸಿತು.
ಪಂದ್ಯದ ದ್ವಿತೀಯಾರ್ದದಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಮಿಡ್ಸಿಟಿ ತಂಡ ಎದುರಾಳಿಗೆ ಗೋಲು ಹೊಡೆಯಲು ಅವಕಾಶ ನೀಡದೆ ಪೈಪೋಟಿಯಿಂದ ಆಟವಾಡಿದ ಸಂದರ್ಭ ಕ್ಯಾಲಿಕಟ್ ತಂಡದ ಅಬೀದ್ ಕೈಗೆ ಚೆಂಡು ತಾಗಿದ ಕಾರಣ ತೀರ್ಪುಗಾರರು ಪೆನಾಲ್ಟಿ ನೀಡಿದ ಕಾರಣ ಈ ಅವಕಾಶ ಬಳಸಿಕೊಂಡ ಮಿಡ್ಸಿಟಿ ತಂಡದ ಪಾಂಡ್ಯನ್ ೨೧ನೇ ನಿಮಿಷದಲ್ಲಿ ಗೋಲು ಗಳಿಸಿದ ಕಾರಣ ಪಂದ್ಯ ಸಮಬಲ ಪಡೆಯಿತು. ಉಭಯ ತಂಡಗಳು ಗೋಲು ಗಳಿಸದ ಕಾರಣ ಟ್ರೆöÊಬ್ರೇಕರ್ನಲ್ಲಿ ೪-೩ ಗೋಲುಗಳಿಂದ ಕ್ಯಾಲಿಕಟ್ ಎಫ್.ಸಿ ತಂಡ ಜಯದ ನಗೆ ಬೀರಿತು.
ಎರಡನೇ ಪಂದ್ಯವು ಈಗಲ್ ಎಫ್.ಸಿ ಬೆಂಗಳೂರು ಮತ್ತು ಅಮಿಗೋಸ್ ಎಫ್.ಸಿ ಮಲಪುರಂ. ತಂಡಗಳ ನಡುವೆ ನಡೆಯಿತು. ತಂಡಗಳು ಹೊಂದಾಣಿಕೆ ಹಾಗೂ ಸಮಬಲದ ಆಟವಾಡಿದರಿಂದ ಆಟದ ಕೊನೆಯವರೆಗೂ ಎರಡು ತಂಡ ಗೋಲು ಗಳಿಸದ ಕಾರಣ ಟ್ರೆöÊಬ್ರೇಕರರ್ನಲ್ಲಿ ೪-೧ ಗೋಲುಗಳಿಂದ ಅಮಿಗೋಸ್ ಎಫ್.ಸಿ ಮಲಪುರಂ. ಮುಂದಿನ ಹಂತಕ್ಕೆ ತಲುಪಿತು. ಪಂದ್ಯವನ್ನು ಸಂತ ಅಂತೋಣಿ ದೇವಾಲಯದ ಯಾಜಕರಾದ ಚಾರ್ಲಸ್ ಉದ್ಘಾಟಿಸಿದರು. ಈ ಸಂದರ್ಭ ಬ್ಲೂಬಾಯ್ಸ್ ಯೂತ್ ಕ್ಲಬ್ ಸಂಚಾಲಕ ಟಿ.ವಿ.ಪ್ರಸನ್ನ. ನಿರ್ದೇಶಕ ಹಮೀದ್. ಪಂಚಾಯಿತಿ ಸದಸ್ಯರಾದ ರಫೀಕ್ ಇತರರು ಹಾಜರಿದ್ದರು.