ವೀರಾಜಪೇಟೆ, ಮೇ ೨೫: ವೀರಾಜಪೇಟೆ ಕ್ಷೇತ್ರದ ಶಾಸಕರಿಗೆ ಅಭಿವೃದ್ಧಿ ಹಿತದೃಷ್ಟಿಯಿಂದ ಸಚಿವ ಸ್ಥಾನ ನೀಡಬೇಕು. ಸಂಸ್ಕೃತಿಯೇ ಬೇರೆ ರಾಜಕೀಯವೇ ಬೇರೆ. ಈ ವಿಚಾರದಲ್ಲಿ ಪಕ್ಷಾತೀತರಾಗಿ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಕರೆ ನೀಡಿದರು.
ವೀರಾಜಪೇಟೆ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಕರೆಯಲಾಗಿದ್ದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ವಿಚಾರದಲ್ಲಿ ವಿವಿಧ ಕೊಡವ ಸಮಾಜಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಪ್ರಮುಖರ ಸಭೆಯ ನೇತೃತ್ವ ವಹಿಸಿ ಮಾತನಾಡಿ, ಪಕ್ಷ ಯಾವುದೇ ಇದ್ದರು ಶಾಸಕರಾದ ಮೇಲೆ ಅವರು ಪಕ್ಷಾತೀತರು. ಆದ್ದರಿಂದ ಕೊಡಗಿನ ಜ್ವಲಂತವಾದ ಗಂಭೀರ ಸಮಸ್ಯೆಗಳನ್ನು ನೀಗಿಸಿ ಮುನ್ನಡೆಯಲು
(ಮೊದಲ ಪುಟದಿಂದ) ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ದೊರೆಯಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ ವೀರಾಜಪೇಟೆ ಕ್ಷೇತ್ರದಲ್ಲಿ ಕೊಡವ ಜನಾಂಗದ ಪೊನ್ನಣ್ಣ ಶಾಸಕರಾಗಿದ್ದಾರೆ. ಜಮ್ಮಾ ಸಮಸ್ಯೆ ಬಗ್ಗೆ ಮಸೂದೆಗೆ ರಾಷ್ಟçಪತಿ ಸಹಿ ಹಾಕಿದ್ದರು ಎಂಟು ವರ್ಷ ಕಳೆದರು ಜಾರಿಯಾಗದೆ ಸಮಸ್ಯೆ ಹಾಗೇ ಇದೆ. ಕೋವಿ ಸಮಸ್ಯೆ ಇದೆ. ಪೊನ್ನಂಪೇಟೆಯ ಕ್ರೀಡಾ ಶಾಲೆಯಲ್ಲಿ ಕೊಡಗಿನ ಮಕ್ಕಳು ಅವಕಾಶ ವಂಚಿತರಾಗುತ್ತಿದ್ದಾರೆ. ಇದು ಸೇರಿದಂತೆ ಇನ್ನು ಹಲವು ಗಂಭೀರ ಸಮಸ್ಯೆ ಇದೆ. ಇದಕ್ಕೆ ನಮಗೆ ಸಮರ್ಥವಾದ ಸಚಿವರು ಬೇಕು. ಈ ನಿಟ್ಟಿನಲ್ಲಿ ಅಖಿಲ ಕೊಡವ ಸಮಾಜ ನೇತೃತ್ವದಲ್ಲಿ ಪಕ್ಷಾತೀತವಾಗಿ ಸಚಿವ ಸ್ಥಾನಕ್ಕೆ ಆಗ್ರಹಿಸಬೇಕು ಹಾಗೂ ಅಗತ್ಯವಾದರೆೆ ಎಲ್ಲಾರು ಸೇರಿ ಹೋರಾಟ ನಡೆಸಬೇಕಿದೆ ಎಂದರು.
ಕೊಡವ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಪೂವಯ್ಯ ಮಾತನಾಡಿ ಈ ಬಾರಿ ಆಯ್ಕೆಯಾದ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಲೇಬೇಕು. ನಮ್ಮ ಕೊಡಗಿನ ಗಂಭೀರ ಸಮಸ್ಯೆಗಳು ಪರಿಹಾರ ಕಾಣಬೇಕಾದರೆ ಈಗಿನ ಶಾಸಕರಿಗೆ ಮಂತ್ರಿ ಸ್ಥಾನ ದೊರೆಯಬೇಕು. ಜಿಲ್ಲೆಗೆ ಬಂದು ಹೋಗುವ ಉಸ್ತುವಾರಿಗಳು ಬೇಡ. ನಮ್ಮದೆ ಸಚಿವರು ಉಸ್ತುವಾರಿ ಇದ್ದರೆ ಆಡಳಿತ ಸುಗಮವಾಗಿ ಉತ್ತಮವಾಗಿ ಜಿಲ್ಲೆಯಲ್ಲಿ ಸಾಗುತ್ತದೆ. ಆದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಖಿಲ ಕೊಡವ ಸಮಾಜ ನೇತೃತ್ವದಲ್ಲಿ ನಿಯೋಗದೊಂದಿಗೆ ತೆರಳಿ ಭೇಟಿಯಾಗಿ ಬೇಡಿಕೆ ಸಲ್ಲಿಸುವಂತೆ ಸಲಹೆ ನೀಡಿದರು.
ಜಬ್ಬೂಮಿ ಸಂಘಟನೆ ಸಂಚಾಲಕ ರಾಜೀವ್ ಬೋಪಯ್ಯ, ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ, ಖಜಾಂಚಿ ಮಂಡೇಪAಡ ಸುಗುಣ ಮುತ್ತಣ್ಣ, ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಅಖಿಲ ಕೊಡವ ಸಮಾಜದ ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟಿರ ಪ್ರವೀಣ್, ವೀರಾಜಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಶಂಕರಿ ಪೊನ್ನಪ್ಪ ಮುಂತಾದವರು ಮಾತನಾಡಿದರು.
ಸಭೆಯಲ್ಲಿ ಕೊಡಗು ಇಕೋ ಸಂಘಟನೆಯ ಕೊಕ್ಕಲೇರ ಮಂಜು ಚಿಣ್ಣಪ್ಪ, ಕೊಡವ ರೈಡರ್ಸ್ ಕ್ಲಬ್ನ ಅಜ್ಜಿಕುಟ್ಟಿರ ಸುಬ್ಬಯ್ಯ ಮುಂತಾದ ಪ್ರಮುಖರು ವಿವಿಧ ಕೊಡವ ಸಮಾಜದ ಪ್ರತಿನಿಧಿಗಳು, ಸಂಘ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.
ಕನೆಕ್ಟಿಂಗ್ ಕೊಡವಾಸ್ ಆಗ್ರಹ
ವೀರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಆಗ್ರಹಿಸಿದೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಂಪುಟ ಸಚಿವ ಸ್ಥಾನ ನೀಡಬೇಕೆಂದು, ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ಸಂಚಾಲಕ ಶಾಂತೆಯAಡ ನಿರನ್ ನಾಚಪ್ಪ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಕೊಡವರು ಹಾಗೂ ಕೊಡವ ಭಾಷಿಕರು ಎದುರಿಸುತ್ತಿರುವ ಸಾಮಾಜಿಕ ಮತ್ತು ರಾಜಕೀಯ ಹಿನ್ನಡೆ, ಜಿಲ್ಲೆಯ ಸಮಗ್ರ ಅಭಿವೃದ್ದಿಯ ಪೂರಕ ಪರಿಕಲ್ಪನೆ ಹೊಂದಿದ್ದಾರೆ. ಪ್ರತೀ ಸರ್ಕಾರದಲ್ಲೂ ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ ಎಂಬ ಕೊರಗು ಕೊಡವರಿಗಿದ್ದು, ಕಳೆದೆರಡು ದಶಕಗಳಿಂದ ಗೆಲ್ಲಲು ಸಾಧ್ಯವೇ ಇಲ್ಲ ಎಂಬAತಿದ್ದ ವೀರಾಜಪೇಟೆ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯ ದೃಷ್ಟಿಯಿಂದ ಆಯ್ಕೆಯಾಗಿದ್ದಾರೆ. ಎಐಸಿಸಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೆಪಿಸಿಸಿ ಪ್ರಮುಖರನ್ನು ಒತ್ತಾಯಿಸಿದ್ದಾರೆ.