ಮಡಿಕೇರಿ, ಮೇ ೨೫: ಚೆನೈನ ಕೇಂದ್ರೀಯ ಪಿಂಚಣಿ ಕಾರ್ಯಾಲಯದ ವತಿಯಿಂದ ನಗರದ ಮೈತ್ರಿ ಪೊಲೀಸ್ ಭವನದಲ್ಲಿ ತಾ. ೩೦ ಮತ್ತು ೩೧ ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೪.೩೦ ಗಂಟೆವರೆಗೆ ‘ಸ್ಪರ್ಶ ಔಟ್ರೀಚ್’ ಸಮಾರಂಭ (ಸ್ಪರ್ಶ್ಗೆ ವರ್ಗಾಯಿಸಲ್ಪಟ್ಟ ಮಿಲಿಟರಿ ಪಿಂಚಣಿ ಪಡೆಯುವ ಮಾಜಿ ಸೈನಿಕರು-ಕುಟುಂಬ ಪಿಂಚಣಿದಾರರ ಕುಂದುಕೊರತೆ ನಿವಾರಣಾ ಕಾರ್ಯಕ್ರಮ) ನಡೆಯಲಿದೆ.
ಸ್ಪರ್ಶ್ಗೆ ಸೇರಿಸಲಾದ ಸಶಸ್ತç ಪಡೆಗಳ ನಿವೃತ್ತ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರು ತಮ್ಮ ವಾರ್ಷಿಕ ಜೀವನ ಪ್ರಮಾಣ ನೀಡುವಲ್ಲಿ ಹಾಗೂ ಇತರೆ ಕುಂದುಕೊರತೆಗಳು ಏನಾದರೂ ಇದ್ದಲ್ಲಿ ಈ ಕಾರ್ಯಕ್ರಮಕ್ಕೆ ತಮ್ಮ ಪಿಂಚಣಿ ದಾಖಲೆಗಳು, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ಹಾಜರಾಗಿ ತಮ್ಮ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕ ಬಾಲಸುಬ್ರಮಣ್ಯಂ ಕೋರಿದ್ದಾರೆ.