ಸೋಮವಾರಪೇಟೆ, ಮೇ ೨೫: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಅವಧಿ ಪೂರ್ಣ ಗೊಂಡ ಹಿನ್ನೆಲೆ ಪಂಚಾ ಯಿತಿಗೆ ಆಡಳಿತಾಧಿ ಕಾರಿಯನ್ನು ನೇಮಿಸಿ ಸರ್ಕಾರದ ಪೌರಾಡಳಿತ ನಿರ್ದೇಶ ನಾಲಯ ಆದೇಶ ಹೊರಡಿಸಿದೆ.

ಮುಂದಿನ ಮೀಸಲಾತಿ ನಿಗದಿಯಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗುವವರೆಗೆ ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಈವರೆಗೆ ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದವರ ಅವಧಿ ಮೇ ೮ಕ್ಕೆ ಅಂತ್ಯಗೊAಡಿದ್ದು, ಮೇ ೫ರಿಂದಲೇ ಜಾರಿಗೆ ಬರುವಂತೆ ಈ ಆದೇಶ ಮಾಡಲಾಗಿದೆ.