ಮಡಿಕೇರಿ, ಮೇ ೨೫ :ಈ ಬಾರಿಯ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಿ ಆಶೀರ್ವಾದ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವದೆ ಪಕ್ಷ, ಜಾತಿ, ಮತ ಬೇಧ ಭಾವವಿಲ್ಲದೆ ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಗುಣಮಟ್ಟದ ರಾಜಕಾರಣದೊಂದಿಗೆ ಉತ್ತಮ ಆಡಳಿತ ನೀಡುವ ಗುರಿ ಹೊಂದಿರುವದಾಗಿ ನೂತನವಾಗಿ ಆಯ್ಕೆಯಾಗಿರುವ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.
ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಇಲ್ಲಿನ ಪತ್ರಿಕಾಭವನದಲ್ಲಿ ಏರ್ಪಡಿಸಲಾಗಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೋವಿಡ್ ಸಂದರ್ಭದಿAದ ತಾನು ಮಾಡಿದ ಕೆಲಸ ಕಾರ್ಯಗಳ ಮೇಲೆ ಜನರಿಗಿದ್ದ ಒಲವು ಹಾಗೂ ಕಾಂಗ್ರೆಸ್ ಬೆಂಬಲಿತ ಮತಗಳಿಂದಾಗಿ ಗೆಲುವು ಸಾಧಿಸಬಹುದೆಂಬ ಲೆಕ್ಕಾಚಾರದಲ್ಲಿ ಪಕ್ಷದಿಂದ ಟಿಕೆಟ್ ನೀಡಲಾಗಿತ್ತು. ನಂತರದಲ್ಲಿ ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರು, ಜಾತ್ಯತೀತ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಭಾರತೀಯ ಜನತಾ ಪಕ್ಷದ ಹಲವಾರು
(ಮೊದಲ ಪುಟದಿಂದ) ಮಂದಿ ಅಭಿಮಾನದಿಂದ ಮತ ಚಲಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಯಾರೂ ಕೂಡ ನೇರವಾಗಿ ತಮ್ಮ ಸಮಸ್ಯೆಗಳನ್ನು ಮುಂದಿಡಬಹುದು. ಬೇಧ ಭಾವವಿಲ್ಲದೆ ಎಲ್ಲರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುವದಾಗಿ ಹೇಳಿದರು.
ಸಮತೋಲನ ಮುಖ್ಯ
ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಆಡಳಿತ-ವಿರೋಧ ಪಕ್ಷಗಳಿರಬೇಕು. ಅಭಿವೃದ್ಧಿ ಕೆಲಸಗಳಾಗಬೇಕಾದರೆ ಆಡಳಿತ ಪಕ್ಷದೊಂದಿಗೆ ವಿರೋಧ ಪಕ್ಷಗಳು ಸಮತೋಲನದಿಂದ ಹೋಗಬೇಕು. ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ ಚುನಾವಣೆ ನಡೆಯಬೇಕು. ಆದರೆ, ಆಡಳಿತದಲ್ಲಿದ್ದಾಗ ವಿಪಕ್ಷವನ್ನು ನಿರ್ನಾಮ ಮಾಡುತ್ತೇವೆ ಎಂಬ ಮಾತುಗಳನ್ನು ಆಡುವದು ಸಮಂಜಸವಲ್ಲ. ಕೊಡಗು ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂಬ ಹೇಳಿಕೆಯಲ್ಲಿ ಸರ್ವಾಧಿಕಾರ ಅಡಗಿತ್ತು. ಅದಕ್ಕೆ ಜನರು ಉತ್ತರ ಕೊಟ್ಟಿದ್ದಾರೆ. ಇಂತಹ ರಾಜಕಾರಣವನ್ನು ಮಾಧ್ಯಮದವರು ಪ್ರಬಲವಾಗಿ ವಿರೋಧಿಸಬೇಕೆಂದು ಪೊನ್ನಣ್ಣ ಹೇಳಿದರು.
ಕೆಳಮಟ್ಟದ ರಾಜಕಾರಣ ಸಲ್ಲದು
ಚುನಾವಣಾ ಪ್ರಚಾರ ಸಂದರ್ಭದಲ್ಲಿ ತನ್ನ ಮೆಲೆ ಸಾಕಷ್ಟು ವೈಯಕ್ತಿಕ ಟೀಕೆಗಳನ್ನು ಮಾಡಲಾಗಿತ್ತು. ಕೀಳು ಮಟ್ಟದ ಪ್ರಚಾರ ಮಾಡಲಾಗಿತ್ತು. ಆದರೆ ತಾನು ಎಲ್ಲಿಯೂ ಯಾವದೇ ವ್ಯಕ್ತಿಯ, ಪಕ್ಷದ ಹೆಸರನ್ನು ಕೂಡ ಪ್ರಸ್ತಾಪ ಮಾಡಿಲ್ಲ. ನಮ್ಮನ್ನು ಏಕೆ ಆಯ್ಕೆ ಮಾಡಬೇಕು, ಯಾವ ಆಧಾರದಲ್ಲಿ ಜಾರಿಯಾಗುವ ಸಾಧ್ಯತೆಯಿರುವದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಭ್ರಷ್ಟಾಚಾರಕ್ಕೆ ಕಡಿವಾಣ
ಈ ಹಿಂದೆ ಕೈಗೊಳ್ಳಲಾಗಿರುವ ಬಹಳಷ್ಟು ಕಾಮಗಾರಿಗಳಲ್ಲಿ ಭ್ರಷ್ಟಾಚಾರಗಳಾಗಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಸರಕಾರ ಸೂಚಿಸಿದೆ. ಇದು ಸರಕಾರದ ನಿಲುವಾಗಿದೆ. ಬಹುತೇಕ ಕಾಮಗಾರಿಗಳಿಗೆ ಯಾವದೇ ಟೆಂಡರ್‌ಗಳಾಗಿಲ್ಲ. ಅಧಿಕಾರಿಗಳು, ಅಭಿಯಂತರರು, ಗುತ್ತಿಗೆದಾರರು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ದೂರುಗಳಿವೆ. ಈ ಬಗ್ಗೆ ಪರಿಶೀಲನೆ ಮಾಡಬೆಕಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನಾ ಸಭೆ ಕರೆಯಲಾಗಿದೆ. ಯಾವದೇ ಕಾರಣಕ್ಕೂ ಹಣ ದುರ್ಬಳಕೆ ಮಾಡಲು ಬಿಡುವದಿಲ್ಲ. ಪಾರದರ್ಶಕತೆಯಿಂದ ಕೆಲಸಗಳಾಗಬೇಕಿದೆ. ಭ್ರಷ್ಟಾಚಾರ ಹಾಗೂ ಮಧ್ಯವರ್ತಿಗಳಿಗೆ ಕಡಿವಾಣ ಹಾಕಲಾಗುವದು. ಜನರ ದುಡ್ಡು ಏನಾಗಿದೆ ಎಂಬದನ್ನು ಕಳೆದ ಐದು ವರ್ಷಗಳಿಂದ ನೋಡುತ್ತಿದ್ದೇವೆ. ಸಮಸ್ಯೆಯನ್ನು ಶೀಘ್ರ ಪರಿಹರಿಸುವದಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತÀರಿಸಿದರು.
ಪರಿಸರ ರಕ್ಷಣೆಯೊಂದಿಗೆ ಪರಿಹಾರ
ವೀರಾಜಪೇಟೆಯಲ್ಲಿ ಬೆಟ್ಟ ಪ್ರದೇಶಗಳಲ್ಲಿ ಹಲವಾರು ಮಂದಿ ನೆಲೆ ನಿಂತಿದ್ದಾರೆ. ಇದೊಂದು ಜಠಿಲ ಸಮಸ್ಯೆಯಾಗಿದ್ದು, ಪರಿಹಾರ ಸುಲಭವಲ್ಲ. ಆ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಹಲವರಲ್ಲಿ ದಾಖಲೆಗಳ ಕೊರತೆ ಇರುವದು ಕಂಡು ಬಂದಿದೆ. ಅರಣ್ಯ ಪ್ರದೇಶವಾಗಿರುವದರಿಂದ ಹಕ್ಕುಪತ್ರಗಳಿಲ್ಲ. ಅನಧಿಕೃತ ಕ್ಲಬ್‌ಗಳು ಕಾರ್ಯಾಚರಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಪೊನ್ನಣ್ಣ ಅವರು. ಹಲವಷ್ಟು ಕಾನೂನು ಬಾಹಿರ ಚಟುವಟಿಕೆಗಳಿವೆ. ಪೊಲೀಸರಿಗೆ ಗೊತ್ತಿದ್ದರೂ ತಡೆಯುವದಿಲ್ಲ. ಅಧಿಕೃತವಾಗಿ ನಡೆಸುತ್ತಿರುವ ಕ್ಲಬ್‌ಗಳ ಮೇಲೆ ದಾಳಿ ಮಾಡುತ್ತಾರೆ, ಅನಧಿಕೃತವಾದವುಗಳನ್ನು ತಡೆಯುವದಿಲ್ಲ. ಇನ್ನು ಮುಂದಕ್ಕೆ ಇದಕ್ಕೆ ಅವಕಾಶ ನೀಡುವದಿಲ್ಲ. ಇಂತಹವುಗಳಿಗೆ ರಕ್ಷಣೆಯನ್ನು ತನ್ನಿಂದ ನಿರೀಕ್ಷಿಸುವದೇ ಬೇಡ. ಕಡಿವಾಣ ಹಾಕಲಾಗುವದೆಂದು ಪೊನ್ನಣ್ಣ ಎಚ್ಚರಿಸಿದರು.
ಅಗೌರವ ತರುವ ಕೆಲಸ
ಕೊಡಗು ಜಿಲ್ಲೆ ಸಂಸ್ಕೃತಿ, ಸೌಜನ್ಯತೆಯಿಂದಾಗಿ ರಾಷ್ಟçಮಟ್ಟದಲ್ಲಿ ಗುರುತಿಸಿಕೊಂಡಿರುವ ಜಿಲ್ಲೆಯಾಗಿದೆ. ಅಂತಹ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿಯವರ ಮೇಲೆ ಮೊಟ್ಟೆ ಎಸೆಯಲಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದೀಗ ಅವರು, ಗೆದ್ದು ಬಂದಿದ್ದಾರೆ, ಘಟನೆಯನ್ನೇ ಮನಸಿನಲ್ಲಿ ಇರಿಸಿಕೊಂಡರೆ ಏನಾಗಬಹುದು? ಪ್ರತಿಭಟನೆ ಮಾಡುವದು ಪ್ರಜೆಗಳ ಹಕ್ಕು, ಆದರೆ ಅದು ಆತಂಕ ತರುವ ರೀತಿಯಲ್ಲಿ ಇರಬಾರದು. ಇಲ್ಲಿ ಎಸೆದವರ ಬಗ್ಗೆ ಏನೂ ಇಲ್ಲ, ಗಲಾಟೆ ಮಾಡಿಸಿದವರು ತಮ್ಮ ಘನತೆ, ಗೌರವ ಉಳಿಸಿಕೊಳ್ಳಲಿಲ್ಲ. ಆಯ್ಕೆ ಮಾಡಿ ಕಳುಹಿಸಿದ್ದ ಜನತೆ ಇಟ್ಟಿದ್ದ ಗೌರವವನ್ನು ಉಳಿಸಿಕೊಳ್ಳಲಾಗಿಲ್ಲ ಎಂದು ಸೂಚ್ಯವಾಗಿ ಕುಟುಕಿದರು. ಘಟನೆಯಲ್ಲಿ ಮೊಕದ್ದಮೆ ಎದುರಿಸುವವರು ಯುವಕರು, ನಾಯಕರುಗಳಲ್ಲ, ಯುವಕರನ್ನು ಅಪರಾಧಿತ್ವದ ಕಡೆ ಕೊಂಡೊಯ್ಯುವ ಬದಲಿಗೆ ಅವರನ್ನು ಸದೃಢರನ್ನಾಗಿ ಬೆಳೆಸುವತ್ತ ಮುನ್ನಡೆಸಬೇಕು, ಯುವಕರನ್ನು ಅಪರಾಧಿಗಳನ್ನಾಗಿ ಮಾಡಿ ಅಧಿಕಾರ ಹಿಡಿಯುವದು ಸರಿಯಲ್ಲವೆಂದು ಹೇಳಿದರು.
ದಿನಕ್ಕೊಂದು ಅಪಪ್ರಚಾರ
ಜಮ್ಮಾ ಬಾಣೆ ಸಮಸ್ಯೆ ಪರಿಹಾರದಲ್ಲಿ ಎ.ಕೆ. ಸುಬ್ಬಯ್ಯ ಅವರ ಕೊಡುಗೆ ಬಹಳಷ್ಟಿದೆ. ಜಿಲ್ಲೆಯ ಎಲ್ಲ ಬೆಳೆಗಾರರು, ಜಮ್ಮಾ ಜಾಗ ಹೊಂದಿರುವವರು ಅಬಾರಿಯಾಗಿರಬೇಕು. ಅದರ ಅರಿವಿದ್ದರೂ ಚುನಾವಣೆ ಸಂದರ್ಭದಲ್ಲಿ ಅವರ ಬಗ್ಗೆ ಟೀಕೆ ಮಾಡಿದ್ದಾರೆ. ಕೀಳು ಮಟ್ಟದ ಭಾಷೆ ಪ್ರಯೋಗ ಮಾಡಿದ್ದಾರೆ. ಇದನ್ನು ಜನರ ಗಮನಕ್ಕೆ ತಂದಿದ್ದೇವೆ. ಅರಿವಿರದ ಯುವಕರಿಗೆ ಮಾಹಿತಿ ನೀಡಿದ್ದೇವೆ. ಮರದ ಹಕ್ಕು, ಬರಪೊಳೆ ಹೋರಾಟದಲ್ಲೂ ಅವರ ಕೊಡುಗೆ ಇದೆ. ಆದರೂ ಅವರ ಬಗ್ಗೆ ಚುನಾವಣಾ ಸಂದರ್ಭದಲ್ಲಿ ಪ್ರಸ್ತಾಪ ಮಾಡುವದು ಎಷ್ಟು ಪ್ರಸ್ತುತ ಎಂಬ ಕಾರಣಕ್ಕಾಗಿ ನಾವು ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ನಮ್ಮ ಹೋರಾಟವಾಗಿತ್ತು. ಆದರೂ ಪ್ರತಿನಿತ್ಯ ಏನಾದರೊಂದು ಹೊಸ ಅಪಪ್ರಚಾರಗಳನ್ನು ಸೃಷ್ಟಿ ಮಾಡುತ್ತಿದ್ದರು. ನೋಡ ನೋಡುತ್ತಾ ಇದು ಬೇರೆ ಯಾರೋ ಪೊನ್ನಣ್ಣನ ಬಗ್ಗೆ ಇರಬಹುದೇನೋ ಎಂದನಿಸುವAತಾಗಿತ್ತು ಎಂದು ಹಾಸ್ಯದೊಂದಿಗೆ ವಿಪಕ್ಷ ಮಾಡಿದ ಅಪಪ್ರಚಾರಗಳ ಬಗ್ಗೆ ನಗುತ್ತಾ ಹೇಳಿದರು.
ನಿಷೇಧ ಸುಲಭವಲ್ಲ
ಧರ್ಮದ ಆಧಾರದಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಗಳ ನಿಷೇಧ ಮಾಡುವದು ಅಷ್ಟೊಂದು ಸುಲಭವಲ್ಲ. ನಿಷೇಧ ಮಾಡಲು ಸಂವಿಧಾನ, ಕಾನೂನಿನಲ್ಲಿ ಏನು ಹಕ್ಕಿದೆ ಎಂಬದನ್ನು ಪರಿಗಣಿಸಬೇಕಾಗುತ್ತದೆ. ಆದರೆ, ಸಮಾಜಘಾತುಕ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಆಧಾರಗಳಿದ್ದಲ್ಲಿ ಅಂತಹ ಸಂಘಟನೆಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಶಾಸಕರು ಉತ್ತರಿಸಿದರು.
ಕೊಡವ ಅಭಿವೃದ್ಧಿ ನಿಗಮ, ಸುಸಜ್ಜಿತ ಆಸ್ಪತ್ರೆ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ವಸತಿ ರಹಿತರಿಗೆ ಮನೆಗಳ ನಿರ್ಮಾಣ, ಭಾಗಮಂಡಲ ಮೇಲ್ಸೇತುವೆ ಸೇರಿದಂತೆ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಇದೇ ಸಂದರ್ಭದಲ್ಲಿ ಹೇಳಿದರು.
ಸನ್ಮಾನ
ಇದೇ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ವತಿಯಿಂದ ನೂತನ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರೆಸ್ ಕ್ಲಬ್ ಬೆಳ್ಳಿಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಉಳ್ಳಿಯಡ ಪೂವಯ್ಯ, ಗೌರವ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಕಾರ್ಯದರ್ಶಿ ಅನು ಕಾರ್ಯಪ್ಪ, ಟಿಪ್ಪು ಜಯಂತಿ ಬಿಡುವದಿಲ್ಲ..!
ಟಿಪ್ಪು ಸುಲ್ತಾನ್ ಮರಣ ಹೊಂದಿ ಸಾವಿರ ವರ್ಷಗಳಾಗಿವೆ, ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ನಿಷೇಧವಾಗಿದೆ. ಮುಸಲ್ಮಾನರು ಯಾರೂ ಟಿಪ್ಪು ಜಯಂತಿ ಬೇಕೆಂದು ಕೇಳುತ್ತಿಲ್ಲ, ಅದೊಂದು ಮುಗಿದು ಹೋದ ಅಧ್ಯಾಯವೆಂದು ಸ್ಪಷ್ಟನೆ ನೀಡಲಾಗಿದೆ. ಆದರೂ ಬಿಜೆಪಿಯವರು ಟಿಪ್ಪು ಜಯಂತಿಯನ್ನು ಬಿಡುತ್ತಿಲ್ಲ, ಬಿಟ್ಟರೆ ಅವರು ಸತ್ತೋಗುತ್ತಾರೆ., ಇದೀಗ ಜನ ಸರಿಯಾದ ತೀರ್ಮಾನ ಮಾಡಿದ್ದಾರೆ ಎಂದು ಶಾಸಕ ಪೊನ್ನಣ್ಣ ಮಾರ್ಮಿಕವಾಗಿ ನುಡಿದರು.ನನ್ನ ಭಾಷೆಯಿಂದ ನನ್ನ ಗುರುತಿಸಿದರು..!
ಅಡ್ಡಂಡ ಕಾರ್ಯಪ್ಪ ಅವರು ಚುನಾವಣೆ ಸಂದರ್ಭದಲ್ಲಿ ಆಡಿದ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿದ ಪೊನ್ನಣ್ಣ ಅವರು, ‘ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡುವವನು ನಾನಲ್ಲ, ಹಾಗೇ ಮಾತನಾಡುವವನು ಶಾಸಕನಾಗಲು ಅರ್ಹನಲ್ಲ, ಆತನಿಂದ ಸಮಾಜದ ಬಗ್ಗೆ ಮಾತನಾಡಲಾಗುವದಿಲ್ಲ; ಅಭಿವೃದ್ಧಿ ಪರ ಚಿಂತನೆ ಸಾಧ್ಯವಿಲ್ಲ. ಚುನಾವಣೆ ಸಂದರ್ಭ ಮೂರು ಜನ ಸೇರಿ ನನ್ನ ಬೈದರು., ಅವರ ಭಾಷೆ ಪ್ರಯೋಗದಿಂದ ಜನರಿಗೆ ಅವರ ಪರಿಚಯವಾಗಿದೆ. ನನ್ನ ಭಾಷೆಯಿಂದ ಜನರು ನನ್ನನ್ನು ಗುರುತಿಸಿದ್ದಾರೆ. ಪೊನ್ನಣ್ಣನನ್ನು ಬೈದರೆ ನಾಯಕತ್ವ ಸಿಗಬಹುದು, ತಮ್ಮ ಬೇಳೆ ಬೇಯಿಸಿಕೊಳ್ಳಬಹುದೆಂಬ ಚಿಂತನೆಯಿAದ ಬೈದರು’ ಎಂದು ಸಾವಧಾನದಿಂದಲೇ ಹೇಳಿದರು.ಕಂದಾಯ ಜಾಗವಾದರೆ ಪರಿಹರಿಸಬಹುದು. ಇಲ್ಲಿನ ಪರಿಸ್ಥಿತಿ ಬಗ್ಗೆ ತಜ್ಞರೊಡನೆ ಸಮಾಲೋಚನೆ ಮಾಡಿ ಪರಿಸರ ರಕ್ಷಣೆಯೊಂದಿಗೆ ಪರಿಹಾರ ಕಲ್ಪಿಸಬೇಕಾಗಿದೆ ಎಂದು ಹೇಳಿದರು. ಸಿದ್ದಾಪುರ ಪಂಚಾಯಿತಿಯ ಕಸದ ಸಮಸ್ಯೆ ಸೇರಿದಂತೆ ಜಿಲ್ಲಾದ್ಯಂತ ಕಸದ ಸಮಸ್ಯೆ ಇದೆ. ಸಮಸ್ಯೆ ಪರಿಹಾರಕ್ಕೆ ಜಿಲ್ಲೆಯಲ್ಲಿ ಯಾವದೇ ಸರಿಯಾದ ವೈಜ್ಞಾನಿಕ ನೀತಿ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಕಾನೂನಾತ್ಮಕವಾಗಿ ಕೈಗೊಳ್ಳಬಹುದಾದ ಪರಿಹಾರದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಭೆಯಲ್ಲಿ ಚರ್ಚಿಸಲಾಗುವದು ಎಂದರು. ವನ್ಯ ಪ್ರಾಣಿ ಮಾನವ ಸಂಘರ್ಷಕ್ಕೆ ಸಂಬAಧಿಸಿದAತೆಯೂ ತಜ್ಞರೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುವದು. ಸಮಸ್ಯೆ ಪರಿಹಾರ ಸಂಬAಧ ಅಧಿಕಾರದ ನೆರವು ಹಾಗೂ ಅನುದಾನ ಒದಗಿಸುವಲ್ಲಿ ಪ್ರಯತ್ನಿಸಲಾಗುವದೆಂದು ಪ್ರಶ್ನೆಗೆ ಉತ್ತರಿಸಿದರು.
ಅಕ್ರಮಕ್ಕೆ ಕಡಿವಾಣ
ವೀರಾಜಪೇಟೆ ಕ್ಷೇತ್ರದಲ್ಲಿ ಮಾದಕ ವಸ್ತು ಸೇವನೆ, ಅಕ್ರಮ ದಂಧೆ, ಪ್ರೆಸ್ ಕ್ಲಬ್ ಅಧ್ಯಕ್ಷ ಎ.ಆರ್. ಕುಟ್ಟಪ್ಪ, ಇದ್ದರು. ಪ್ರೆಸ್‌ಕ್ಲಬ್ ಸಹಕಾರ್ಯದರ್ಶಿ ಪ್ರಜ್ಞಾ ರಾಜೇಂದ್ರ ಪ್ರಾರ್ಥಿಸಿದರೆ, ನಿರ್ದೇಶಕ ಕುಡಿಯರ ದಿವಾಕರ ಸ್ವಾಗತಿಸಿದರು. ಕಾರ್ಯದರ್ಶಿ ರೆಜಿತ್‌ಕುಮಾರ್ ನಿರೂಪಿಸಿದರೆ, ನಿರ್ದೇಶಕ ಸುನಿಲ್ ಪೊನ್ನೆಟ್ಟಿ ವಂದಿಸಿದರು.