ಗೋಣಿಕೊಪ್ಪಲು, ಮೇ ೨೫: ತರಾವರಿ ವೇಷ ತೊಟ್ಟ ಪುರುಷರು, ತಮಟೆ, ಡ್ರಂ ಸದ್ದಿಗೆ ಕುಣಿಯುತ್ತಿರುವ ವೇಷಧಾರಿಗಳು, ಎದುರು ಸಿಕ್ಕವರಿಗೆ ಬೈಗುಳದ ಸುರಿಮಳೆ, ಆದರೂ ಕೋಪಗೊಳ್ಳದ ಜನ..! ದಕ್ಷಿಣ ಕೊಡಗಿನಲ್ಲಿ ಕಾಡು ಮಕ್ಕಳ ಬೇಡು ಹಬ್ಬದ ಸಂಭ್ರಮ.
ಕೊಡಗಿನ ಬುಡಕಟ್ಟು ಜನರ ಪ್ರಮುಖ ಧಾರ್ಮಿಕ ಉತ್ಸವವಾದ ಬೇಡು ಹಬ್ಬ ಅತ್ಯಂತ ವಿಜೃಂಭಣೆ ಯಿಂದ ನಡೆಯಿತು. ಅಶ್ಲೀಲ ಬೈಗುಳವೇ ಪ್ರಾರ್ಥನೆ ಯಾಗಿರುವ ಆದಿವಾಸಿಗಳ ವಿಭಿನ್ನ ಆಚರಣೆಯ ಕುಂಡೆ ಹಬ್ಬ ಎಂದೆ ಖ್ಯಾತಿ ಪಡೆದ ಬೇಡು ಹಬ್ಬದಲ್ಲಿ ಸಾವಿರಾರು ಮಂದಿ ವಿವಿಧ ವೇಷ ಧರಿಸುವ ಮೂಲಕ ಆದಿವಾಸಿಗಳು ದಕ್ಷಿಣ ಕೊಡಗಿನಲ್ಲಿ ಸಂಭ್ರಮಕ್ಕೆ ಕಾರಣರಾದರು.
ಜಿಲ್ಲೆಯ ಬೂದಿತಿಟ್ಟು, ಮಾಲ್ದಾರೆ, ಪಂಚವಳ್ಳಿ, ಹನಗೋಡು, ಮಾಸ್ತಿಗುಡಿ, ವೀರನಹೊಸಳ್ಳಿ ನಾಗಾಪುರ ಸೇರಿದಂತೆ ವಿವಿಧ ಭಾಗಗಳಿಂದ ವೇಷ ಧರಿಸಿಕೊಂಡು ಬಂದಿದ್ದ ಸಾವಿರಾರು ಗಿರಿಜನರು ಕೈಗೆ ಸಿಕ್ಕಿದ ವಸ್ತುಗಳನ್ನೇ ತಾಳಮೇಳ ಮಾಡಿಕೊಂಡು ವೇಷ ಧರಿಸಿ ಕುಣಿದು ಕುಪ್ಪಳಿಸಿದರು. ಅಶ್ಲೀಲ ಬೈಗುಳ, ಸೂರೆ ಬುರುಡೆಯ ಶಬ್ದ ಗೋಣಿಕೊಪ್ಪ ಪಟ್ಟಣ ಸೇರಿದಂತೆ ತಿತಿಮತಿ, ಪೊನ್ನಂಪೇಟೆ, ಪಾಲಿಬೆಟ್ಟ, ಬಾಳೆಲೆ, ಮಾಯಮುಡಿ, ವೀರಾಜಪೇಟೆ, ಸಿದ್ದಾಪುರ, ಕುಶಾಲನಗರ, ಭಾಗಗಳಲ್ಲಿಯೂ ಕುಂಡೆ ಹಬ್ಬ ಕಾಡುಮಕ್ಕಳ ನೃತ್ಯ, ಬೈಗುಳದೊಂದಿಗೆ ಸಂಭ್ರಮವಾಗಿತ್ತು. ಈ ಬಾರಿ ವಿಶೇಷವಾಗಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವೇಷಧಾರಿಗಳು ಕಂಡುಬAದರು.
ಯುವಕರು ಕೈಗೆ ಸಿಕ್ಕಿದ ಹಳೆಯ ಟಿಣ್, ಪ್ಲಾಸ್ಟಿಕ್ ಡ್ರಮ್, ಒಡೆದ ಪ್ಲಾಸ್ಟಿಕ್ ಬಿಂದಿಗೆ, ಬಕೆಟ್‌ಗಳನ್ನು ವಾದ್ಯ ಪರಿಕರಗಳಾಗಿ ಪರಿವರ್ತಿಸಿ ಅದನ್ನು ಬಡೆಯುತ್ತ ಹೆಜ್ಜೆ ಹಾಕುತ್ತ ಪಾದಚಾರಿಗಳ ಬಳಿ, ಅಂಗಡಿ, ಮನೆಗಳಿಗೆ ತೆರಳಿ ಹಣ, ದವಸ, ಧಾನ್ಯವನ್ನು ಬೇಡಿದರು.
ಕಾಡಿನಲ್ಲಿ ವಾಸವಿರುವ ಆದಿವಾಸಿಗಳು ತನ್ನ ವೇಷ ಭೂಷಣವನ್ನು ಕಾಡಿನಲ್ಲಿ ಪ್ರಾಕೃತಿಕವಾಗಿ ಸಿಗುವ ವಸ್ತುಗಳಿಂದಲೇ ವಿಭಿನ್ನವಾಗಿ ಶೃಂಗರಿಸಿಕೊAಡು ಸಂಭ್ರಮಿಸುತ್ತಾರೆ. ಆದರೆ, ಇಂದು ತಾಂತ್ರಿಕವಾಗಿ ಮುಂದುವರೆದಿರುವ ಕಾರಣ ಕಾಲಕ್ಕೆ ತಕ್ಕಂತೆ ರಾಷ್ಟç ಹಾಗೂ ಅಂರ‍್ರಾಷ್ಟಿçÃಯ ಮಟ್ಟದ ವ್ಯಕ್ತಿಗಳಾಗಿ ವೇಷಭೂಷಣ ಮಾಡಿಕೊಂಡು ಜನರಿಂದ ಬೇಗ ಆಕರ್ಷಿತ ರಾಗುತ್ತಿದ್ದದ್ದು, ಕಂಡುಬAತು.
ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿಯಿAದ ಹಿಡಿದು ಜಿಲ್ಲೆಯ ತಿತಿಮತಿ ದೇವರಪುರವರೆಗೂ ರಾಜ್ಯ ಹೆದ್ದಾರಿಯಲ್ಲಿ ಕುಂಡೆ ಹಬ್ಬದ ವೇಷಧಾರಿಗಳೇ ಕಂಡುಬAದರು. ಹಲವೆಡೆ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ಅಡ್ಡಗಟ್ಟಿ ಕುಣಿಯುತ್ತಾ ಹಣ ಬೇಡಿದರು. ಅವರು ಹಣಕೊಟ್ಟರೂ ಬೈಯುತ್ತಿದ್ದರು. ಕೊಡದಿದ್ದರೂ ಬೈಯುತ್ತಿದ್ದರು. ವೇಷಧಾರಿಗಳು ಎಷ್ಟೇ ಬೈದರು ಯಾರೂ ಸಿಟ್ಟು ಮಾಡಿಕೊಳ್ಳುವುದಿಲ್ಲ. ಹೀಗಾಗಿ ಇದಕ್ಕೆ ಬೈಗುಳದ ಹಬ್ಬವೆಂದೆ ಪ್ರತೀತಿ ಪಡೆದುಕೊಂಡಿದೆ.
ವೇಷಧಾರಿ ಗಿರಿಜನರು ಬೈಯ್ಯುವುದು ದೇವರಿಗೆ ಎಂಬುದು ಸ್ಥಳೀಯರಿಗೆ ಗೊತ್ತಿದೆ. ಹೀಗಾಗಿ ಈ ಹಬ್ಬದ ಆಚರಣೆ ವೇಳೆ ಗಿರಿಜನರು ಬೈಯ್ಯುವುದು ಕಂಡು ನಸುನಕ್ಕು ಮುಂದಕ್ಕೆ ಹೋಗುತ್ತಿದ್ದರು.
ಹರಕೆ ಪೂರೈಸಿದ ವೇಷಧಾರಿಗಳು
ದೇವರಪುರದ ಶ್ರೀ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದ ಅಂಗಳದಲ್ಲಿ ವೇಷಧಾರಿಗಳು ಸೊಪ್ಪು, ಹರಿದ ಬಟ್ಟೆ, ಸ್ತಿçà ರೂಪಧಾರಿಗಳು, ದೇವರ ಅವತಾರ, ತುಂಡುಡುಗೆ, ವಿಭಿನ್ನ ಶೈಲಿಯಲ್ಲಿ ಆದಿವಾಸಿಗಳು ಡೋಲು ಬಾರಿಸುವುದ ರೊಂದಿಗೆ ನೃತ್ಯ
(ಮೊದಲ ಪುಟದಿಂದ) ಮಾಡಿ ಹರಕೆ ಪೂರೈಸಿದರು. ಮಧ್ಯಾಹ್ನ ೩ ಗಂಟೆ ವೇಳೆಗೆ ಭದ್ರಕಾಳಿ ದೇವಸ್ಥಾನದ ಭಂಡಾರ ತಕ್ಕರಾದ ಸಣ್ಣುವಂಡ ಕುಟುಂಬಸ್ಥರು ಧಾರ್ಮಿಕ ಕಾರ್ಯಕ್ಕೆ ಮುನ್ನುಡಿ ಇಟ್ಟರು. ಮನೆಯಪಂಡ ಅಯ್ಯಪ್ಪ ಹಾಗೂ ಚೆಕ್ಕೇರ ಅಯ್ಯಪ್ಪ ಕೃತಕ ಕುದುರೆ ತೆಗೆದು ದೇವಸ್ಥಾನದ ಬಳಿ ಬಂದು ಪೂಜೆ ಪುರಸ್ಕಾರ ನೆರವೇರಿಸಿದರು.
ವೇಷಧಾರಿಗಳು ಸೇರಿ ದೇವರ ಸನ್ನಿಧಿಯಲ್ಲಿ ಹಾಡುತ್ತಾ, ಕುಣಿಯುತ್ತಾ ತಮ್ಮ ಹರಕೆಯನ್ನು ಸಲ್ಲಿಸಿದರು. ಈ ಸಂದರ್ಭ ಸಾವಿರಾರು ಜನರು ದೂರದ ಊರಿನಿಂದ ಬಂದು ಸೇರಿದ್ದರು. ಇದಕ್ಕೂ ಮೊದಲು ಅಲ್ಲಿನ ಅಂಬಲದಿAದ ಭದ್ರಕಾಳಿ ದೇವರು ವ್ಯಕ್ತಿಯ ಮೈ ಮೇಲೆ ಬಂದು ಹಬ್ಬದಲ್ಲಿ ಪಾಲ್ಗೊಂಡಿತು. ಇದರೊಂದಿಗೆ ಪಣಿಕ ಜನಾಂಗದ ಇಬ್ಬರು ವ್ಯಕ್ತಿಯರು ದೇವರ ಮೊಗವನ್ನು ತೆಗೆದುಕೊಂಡು ಕುದುರೆಯೊಂದಿಗೆ ಅಯ್ಯಪ್ಪ ದೇವಸ್ಥಾನದತ್ತ ತೆರಳಿದರು. ವನವಾಸಿ ಕಲ್ಯಾಣ ಸಮಿತಿ ವತಿಯಿಂದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಗ್ರಾಮ ವ್ಯಾಪ್ತಿಯ ಕೊಡವ ಕುಟುಂಬಗಳು ಆಚರಣೆಗೆ ಪೂರಕ ಸಹಕಾರ ನೀಡಿದವು.
ಸಂಜೆಯಾದ ಬಳಿಕ ಗಿರಿಜನರು ತಾವು ಎರಡು ದಿನಗಳ ಕಾಲ ಬೇಡಿದ್ದ ಹಣದಲ್ಲಿ ಸ್ವಲ್ಪಭಾಗವನ್ನು ಭದ್ರಕಾಳಿ ದೇವಸ್ಥಾನದ ಹುಂಡಿಗೆ ಹಾಕಿ ಬೈಯ್ದದ್ದು ತಪ್ಪಾಯಿತ್ತು. ಕ್ಷಮಿಸು ಎಂದು ದೇವರ ಬಳಿ ಕ್ಷಮೆ ಕೋರಿದರು.
ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ವಹಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಹಲವು ಸಂಘ ಸಂಸ್ಥೆಗಳು ಅನ್ನದಾನ ನಡೆಸಿದವು.
ಹೆಚ್.ಕೆ.ಜಗದೀಶ್/ಎನ್.ಎನ್.ದಿನೇಶ್