ಮಡಿಕೇರಿ, ಸೆ. ೧೫: ಕಾಲೇಜಿಗೆ ತೆರಳಿದ್ದ ಅಪ್ರಾಪ್ತೆ ಬಾಲಕಿಯರಿಬ್ಬರನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆಯಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯೊಬ್ಬಳನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಕೆಯ ಆರೋಗ್ಯ ಸ್ಥಿತಿ ಚೇತರಿಕೆ ಕಾಣುತ್ತಿದೆ.
ಮೂರ್ನಾಡಿನ ಅಹಮ್ಮದ್ ಮುಜಾಮಿನ್, ಅಬ್ದುಲ್ ಸಮ್ಮದ್, ಮಹಮ್ಮದ್ ಇರ್ಷಾದ್ ಹಾಗೂ ತಫ್ಸರ್ ಅವರುಗಳನ್ನು ಮೈಸೂರಿನಿಂದ ಬಂಧಿಸಿ ಮಡಿಕೇರಿಗೆ ಕರೆತಂದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಮಡಿಕೇರಿ ತಾಲೂಕಿನ ಗ್ರಾಮವೊಂದರಲ್ಲಿರುವ ಕಾಲೇಜಿಗೆ ಬಾಲಕಿಯರು ತೆರಳಿದ ಸಂದರ್ಭ ಕಾರಿನಲ್ಲಿ ಹೋದ ಮುಜಾಮಿನ್ ಹಾಗೂ ಸಮ್ಮದ್ ಅಪ್ರಾಪ್ತೆಯರನ್ನು ಅಪಹರಿಸಿಕೊಂಡು ಮಡಿಕೇರಿ ರಸ್ತೆ ಮೂಲಕ ಹಾಕತ್ತೂರು ಮಾರ್ಗವಾಗಿ ಮರಗೋಡಿಗೆ ತೆರಳಿದ್ದಾರೆ.
(ಮೊದಲ ಪುಟದಿಂದ) ಮರಗೋಡಿನಲ್ಲಿದ್ದ ಇವರಿಬ್ಬರ ಸ್ನೇಹಿತರಾದ ಇರ್ಷಾದ್ ಹಾಗೂ ತಫ್ಸರ್ ತಮ್ಮ ಬೈಕ್‌ನ್ನು ಮರಗೋಡಿನಲ್ಲಿ ನಿಲ್ಲಿಸಿ ಕಾರು ಹತ್ತಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಮಗಳು ನಾಪತ್ತೆಯಾದ ಕುರಿತು ಬಾಲಕಿಯೊಬ್ಬಳ ತಂದೆ ನೀಡಿದ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ ಸಂದರ್ಭ ಪೊಲೀಸರು ಹುಡುಕುತ್ತಿರುವ ವಿಚಾರ ಸ್ನೇಹಿತರ ಮೂಲಕ ಆರೋಪಿಗಳಿಗೆ ತಿಳಿದು ಗುಡ್ಡೆಹೊಸೂರಿನಲ್ಲಿಯೇ ಬಾಲಕಿಯರನ್ನು ಬಿಟ್ಟು ಮೈಸೂರಿಗೆ ಕಾರಿನಲ್ಲಿ ಹೋಗಿದ್ದಾರೆ. ನಂತರ ಬಾಲಕಿಯರನ್ನು ರಕ್ಷಿಸಿ ಅವರವರ ಮನೆಗೆ ಕರೆತರಲಾಗಿದೆ. ಬಾಲಕಿಯರನ್ನು ಅಪಹರಿಸಿದ ಆರೋಪಿಗಳು ಅನುಚಿತವಾಗಿ ವರ್ತಿಸಿದ್ದು, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಘಟನೆಯಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ಒಬ್ಬಾಕೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಆಕೆಯ ಆರೋಗ್ಯ ಸ್ಥಿತಿ ಚೇತರಿಕೆ ಕಂಡಿದೆ.
ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪಹರಣ, ಲೈಂಗಿಕ ಕಿರುಕುಳ ಹಾಗೂ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಬಿಗಿ ಭದ್ರತೆ
ಘಟನೆ ನಡೆದ ಮೂರ್ನಾಡಿನಲ್ಲಿ ಪೊಲೀಸರು ಬಿಗಿಭದ್ರತೆ ವಹಿಸಿದ್ದಾರೆ. ಯಾವುದೇ ಘರ್ಷಣೆ ಸೃಷ್ಟಿಯಾಗದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.
೩ ಡಿಎಆರ್ ತುಕಡಿ ಹಾಗೂ ಪೊಲೀಸ್ ಪಹರೆಯನ್ನು ಕಾಲೇಜು ಆವರಣ, ಯುವತಿಯರ ಮನೆಗಳು ಸೇರಿದಂತೆ ಗ್ರಾಮದ ಸುತ್ತಮುತ್ತ ಹಾಕಿ ಕಣ್ಗಾವಲಿಡಲಾಗಿದೆ.