ವೀರಾಜಪೇಟೆ, ಸೆ. ೧೫ : ಪುರಾತನ ಇತಿಹಾಸ ಪ್ರಸಿದ್ಧ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ತಾ. ೧೮ ರಿಂದ ೨೭ರ ವರೆಗೆ ಅದ್ಧೂರಿಯಾಗಿ ಗೌರಿಗಣೇಶ ಉತ್ಸವವನ್ನು ಆಚರಿಸಲಾಗುವುದು ಎಂದು ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ವಕೀಲ ಎನ್.ಜಿ. ಕಾಮತ್ ಹೇಳಿದರು.

ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೧೭೯೨ ರಲ್ಲಿ ದೊಡ್ಡವೀರರಾಜೇಂದ್ರ ಸ್ಥಾಪಿಸಿದ ಬಸವೇಶ್ವರ ದೇವಾಲಯದಲ್ಲಿ ಅಂದಿನಿAದ ಇಂದಿನವರೆಗೆ ಗೌರಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪಕೃತಿ ವಿಕೋಪ ಮತ್ತು ಕೊರೊನಾದಿಂದ ಸರ್ಕಾರದ ನಿಬಂಧನೆಗಳಿAದಾಗಿ ಕಳೆದ ಮೂರು ವರ್ಷಗಳಿಂದ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಿಲ್ಲ. ಈ ಬಾರಿ ೮ ದಿನಗಳ ಕಾಲ ನಡೆಯುವ ಹಬ್ಬದಲ್ಲಿ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.

ಕಾರ್ಯದರ್ಶಿ ಸಂಪತ್ ಕುಮಾರ್ ಮಾತನಾಡಿ, ೮ ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಾಸಕರುಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಮಂಡೇಪAಡ ಸುಜಾ ಕುಶಾಲಪ್ಪ, ಮಡಿಕೇರಿ ಶಾಸಕ ಡಾ. ಮಂಥರ್‌ಗೌಡ, ಹೆಚ್. ವಿಶ್ವಾನಾಥ್ ಅವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದÀಲ್ಲಿ ಕರ್ನಾಟಕ ಶಾಸ್ತಿçÃಯ ಸಂಗೀತದ ಉಳಿವಿಗಾಗಿ ಶ್ರಮಿಸುತ್ತಿರುವ ಸ್ವರಾರ್ಣವ ಸಂಗೀತ ಟ್ರಸ್ಟ್ನ ಬಿ.ಎಸ್. ದಿಲಿಕುಮಾರ್ ಅವರಿಗೆ ಸಂಗೀತ ಕಲಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಅಲ್ಲದೆ ಕಾಂತಾರ ಚಿತ್ರದ ವರಾಹ ರೂಪಂ ಹಾಡು ರಚಿಸಿದ ಸಾಹಿತಿ ಶಶಿರಾಜ್ ಕಾವೂರು ಅವರಿಗೆ ಬಸವ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುವದು ಎಂದು ಹೇಳಿದರು.

ಖಜಾಂಚಿ ನರೇಂದ್ರ ಕಾಮತ್ ಮಾತನಾಡಿ ಸ್ವಾತಂತ್ರö್ಯ ಪೂರ್ವದಿಂದಲೇ ನಡೆದುಕೊಂಡು ಬಂದಿರುವ ಸಂಪ್ರದಾಯದAತೆ ತಾ. ೧೮ ರಂದು ದೇಶದ ಗೌರಮ್ಮನಿಗೆ ಶಾಸ್ತೊçÃಕ್ತರವಾಗಿ ಪೂಜೆ ಸಲ್ಲಿಸಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಯಾವುದೇ ಜಾತಿ, ಮತ, ಭೇದ ಇಲ್ಲದೆ ಮುತೈದೆಯರು ಗೌರಮ್ಮನಿಗೆ ಪೂಜೆ ಸಲ್ಲಿಸುವ ಪ್ರತೀತಿ ಇದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಎ.ಎನ್. ಪುಷ್ಪರಾಜ್, ಸಮಿತಿ ಸದಸ್ಯ ರಾಜೇಂದ್ರ ಕಾಮತ್ ಉಪಸ್ಥಿತರಿದ್ದರು.