ಮಡಿಕೇರಿ, ಸೆ. ೧೫: ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಡಿಕೇರಿ, ನೆಹರೂ ಯುವ ಕೇಂದ್ರ ಕೊಡಗು, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಕಾವೇರಿ ಕಲಾವೃಂದ, ಮಡಿಕೇರಿ ಹಾಗೂ ಹೊದ್ದೂರು ಕಬಡಕೇರಿ ಯುವಕ ಸಂಘದ ಆಶ್ರಯದಲ್ಲಿ ೪೮ನೇ ವರ್ಷದ ಕೈಲುಮುಹೂರ್ತ ಹಬ್ಬದ ಗ್ರಾಮೀಣ ಕ್ರೀಡಾಕೂಟ ನಡೆಯಿತು.
ಸಂಘದ ಆಟದ ಮೈದಾನದಲ್ಲಿ ನಡೆಸಲಾದ ಗ್ರಾಮೀಣ ಕ್ರೀಡಾಕೂಟವನ್ನು ಮೈಸೂರು ಶಾಖೆ ಎಲ್‌ಐಸಿ ಪ್ರತಿನಿಧಿ ಮೇಕಂಡ ಗಪ್ಪು ಸೋಮಯ್ಯ ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಚಾಲನೆ ನೀಡಿದರು.
ವಿವಿಧ ಕ್ರೀಡಾ ಕಾರ್ಯಕ್ರಮಗಳು ನಡೆದ ಬಳಿಕ ಸಂಜೆ ಜರುಗಿದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವಕ ಸಂಘದ ಅಧ್ಯಕ್ಷ ಚೆಟ್ಟಿಮಾಡ ಎಸ್. ಬಾಲಕೃಷ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ. ಹಂಸ, ಉಪಾಧ್ಯಕ್ಷೆ ಅನುರಾಧ, ಸದಸ್ಯ ಎಂ.ಬಿ. ಹಮೀದ್, ಸೋಮವಾರಪೇಟೆ ತಾಲೂಕು ಹೋಂಸ್ಟೇ ಮಾಲೀಕರ ಸಂಘ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಚೆಟ್ಟಿಮಾಡ ಕೆ. ರೋಹಿತ್, ದವಸ ಭಂಡಾರ ಅಧ್ಯಕ್ಷೆ ತೆಕ್ಕಡೆ ಎಲ್. ರಾಜೇಶ್ವರಿ, ಸದಸ್ಯೆ ಎ.ಪಿ. ಭಾಗ್ಯಶ್ರೀ, ಅಮ್ಮಣಂಡ ಪಟ್ಟು ಸೋಮಣ್ಣ, ಹೊಸೋಕ್ಲು ರಾಜ, ಬೆಂಗಳೂರಿನ ಉದ್ಯಮಿ ಸಂಪAಗಿ ರಾಂ ಹಾಜರಿದ್ದರು.
ಸಂಘದ ಕಾರ್ಯದರ್ಶಿ ಮೇಕಂಡ ದೊರೆ ತಮ್ಮಯ್ಯ ಸ್ವಾಗತಿಸಿ, ಸರಸು ಸುಬ್ರಮಣಿ ಪ್ರಾರ್ಥಿಸಿದರು. ಸದಸ್ಯ ಚೆಟ್ಟಿಮಾಡ ಲೋಕೇಶ್ ವಂದಿಸಿದರು. ಕೂಡಂಡ ಸಾಬ ಸುಬ್ರಮಣಿ ನಿರೂಪಿಸಿದರು.
ಕ್ರೀಡಾಕೂಟವನ್ನು ಸದಸ್ಯರುಗಳಾದ ಚೆಟ್ಟಿಮಾಡ ದಿವಿ, ಪುರುಷೋತ್ತಮ, ಟಿಪ್ಪು ಮಂದಣ್ಣ, ಮೇಕಂಡ ಗಣೇಶ್, ಸುನಿಲ್, ಪೆಮ್ಮಯ್ಯ, ಕುಶಾಲಪ್ಪ, ನವೀನ್, ಬೆಳ್ಯಪ್ಪ, ಪುಟ್ಟಣ್ಣ, ಬಷೀರ್, ಸತೀಶ್, ಅಶ್ರಫ್, ಕೋರನ ರವಿ ರಾಘವೇಂದ್ರ ನಡೆಸಿಕೊಟ್ಟರು. ಅತಿಥಿ ಗಣ್ಯರು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.
ವಿಜೇತರ ವಿವರ: ಅಂಗನವಾಡಿ ಮಕ್ಕಳ ಓಟದ ಸ್ಪರ್ಧೆಯಲ್ಲಿ ಆಯಾ (ಪ್ರ), ಹರ್ಷ (ದ್ವಿ), ಧನ್ವಿ ಬಿ.ಎಸ್ (ತೃ), ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಲಕ್ಷೀತ (ಪ್ರ), ಹರ್ಷ (ದ್ವಿ), ಆದ್ಯ (ತೃ), ೨ ಕಾಲು ಕಟ್ಟಿ ಕುಪ್ಪಳಿಸುವ ಸ್ಪರ್ಧೆಯಲ್ಲಿ ಬಿ.ಎಂ. ಹಮೀದ್ (ಪ್ರ), ಚೆಟ್ಟಿಮಾಡ ಮೊನೀಶ್ (ದ್ವಿ).
ವಯಸ್ಕರ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಐತಪ್ಪ ಬಿ.ಕೆ. (ಪ್ರ), ರಘುನಾಥ್ (ದ್ವಿ), ಮೇಕಂಡ ಬೋಪಯ್ಯ (ತೃ), ವಯಸ್ಕ ಮಹಿಳಾ ವಿಭಾಗ ಚೆಟ್ಟಿಮಾಡ ಶ್ಯಾಮಲ (ಪ್ರ), ಮೇಕಂಡ ಯಶೋಧ(ದ್ವಿ), ಚೆಟ್ಟಿಮಾಡ ಕಮಲ (ತೃ), ಪ್ರೌಢಶಾಲಾ ಬಾಲಕರ ಸ್ಪರ್ಧೆಯಲ್ಲಿ ಸ್ಪಂದನ್ (ಪ್ರ), ಆದಿತ್ಯ (ದ್ವಿ), ಲಿತಿನ್ ಸಿ. (ತೃ), ಬಾಲಕಿಯರ ವಿಭಾಗದಲ್ಲಿ ಚೆಟ್ಟಿಮಾಡ ಚರಿಷ್ಮಾ (ಪ್ರ), ತನುಷ ಹೆಚ್.ಬಿ (ದ್ವಿ).
೭೫ ಮೀ. ಪ್ರಾಥಮಿಕ ಶಾಲಾ ಬಾಲಕರಿಗೆ ಗಗನ್ ಗಣಪತಿ (ಪ್ರ), ಅನ್ಸಿಪ್ (ದ್ವಿ), ಬಾಲಕಿಯರ ವಿಭಾಗದಲ್ಲಿ ನಿಲೀಶಾ ಗಿರೀಶ್ ಕೂಡಂಡ (ಪ್ರ), ವೈಷ್ಣವಿ ಕೆ.ಕೆ (ದ್ವಿ). ಭಾರದ ಕಲ್ಲು ಎಸೆಯುವ ಸ್ಪರ್ಧೆ ಪುರುಷರ ವಿಭಾಗದಲ್ಲಿ ಅನಿಲ್ (ಪ್ರ), ಗಿರೀಶ್ ಕೆ.ಇ(ದ್ವಿ), ಮಹಿಳೆಯರ ವಿಭಾಗದಲ್ಲಿ ಅನ್ನಪೂರ್ಣ (ಪ್ರ), ಕುಸುಮ (ದ್ವಿ). ಹಗ್ಗ ಎಳೆಯುವ ಸ್ಪರ್ಧೆ ಪುರುಷರ ವಿಭಾಗದಲ್ಲಿ ಎ.ಜೆ. ಫ್ರೆಂಡ್ಸ್ ಎ (ಪ್ರ), ಬಿ (ದ್ವಿ), ಮಹಿಳೆಯರ ವಿಭಾಗ ಕಬಡಕೇರಿ ಫ್ರೆಂಡ್ಸ್ (ಪ್ರ), ಚೆಟ್ಟಮಾಡ ಫ್ರೆಂಡ್ಸ್ ಹೊದ್ದೂರು (ದ್ವಿ).
ಸಾಂಪ್ರದಾಯಿಕ ವಾಲಗ ಕುಣಿತದಲ್ಲಿ ನಂದೀಶ್ (ಪ್ರ), ಸುಶ್ಮಿತಾ ಚೆಟ್ಟಿಮಾಡ (ದ್ವಿ), ರಚಿತಾ ನಾಣಯ್ಯ (ತೃ).
೧೫೦೦ ಮೀ. ಓಟದ ಸ್ಪರ್ಧೆಯಲ್ಲಿ ಸಾನಿಫ್ (ಪ್ರ), ಮೇಕಂಡ ಸುಜಿತ್ (ದ್ವಿ), ಚೆಟ್ಟಿಮಾಡ ಮೊನಿಷ್ (ತೃ).