ಮಡಿಕೇರಿ, ಸೆ. ೧೫ : ಜಿಲ್ಲೆಯ ಪವಿತ್ರ ಕ್ಷೇತ್ರವಾದ ಶ್ರೀ ತಲಕಾವೇರಿಯಲ್ಲಿ ತುಲಾ ಸಂಕ್ರಮಣದ ತೀರ್ಥೋದ್ಭವದ ಪವಿತ್ರ ಕ್ಷಣಕ್ಕೆ ಇನ್ನೇನು ಕೇವಲ ಒಂದು ತಿಂಗಳ ಅವಧಿಯಷ್ಟೆ ಬಾಕಿ ಉಳಿದಿದೆ. ಆದರೆ ತುಲಾಸಂಕ್ರಮಣದ ಜಾತ್ರೆಯ ಅಗತ್ಯ ಸಿದ್ಧತೆಗಳು ಇನ್ನೂ ಆರಂಭಗೊAಡAತೆ ಕಂಡು ಬರುತ್ತಿಲ್ಲ. ಇದೇ ತಿಂಗಳ ೨೬ರಂದು ಪತ್ತಾಯಕ್ಕೆ ಅಕ್ಕಿ ಹಾಕುವ ಕಾರ್ಯದ ಮೂಲಕ ಪ್ರಸಕ್ತ ವರ್ಷದ ಜಾತ್ರೋತ್ಸವದ ಕೈಂಕರ್ಯಗಳಿಗೆ ಚಾಲನೆ ಸಿಗಲಿದೆ.

ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಇದಾಗಿದ್ದರೂ ತಲಕಾವೇರಿ-ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಕೂಡ ಕಳೆದ ಎರಡು ವರ್ಷಗಳಿಂದ ಕಾರಣಾಂತರಗಳಿAದ ಅಸ್ತಿತ್ವದಲ್ಲಿ ಇಲ್ಲ. ಈ ಹಿಂದೆ ಸಮಿತಿ ರಚನೆ ಮಾಡಲಾಗಿತ್ತಾದರೂ ಇದನ್ನು ಧಾರ್ಮಿಕದತ್ತಿ ಇಲಾಖೆಯ ನಿಯಮಾವಳಿಯ ಪ್ರಕಾರ ರಚನೆ ಮಾಡಲಾಗಿಲ್ಲ ಎಂಬ ಆಕ್ಷೇಪ ಎದುರಾಗಿ ಇದು ಕಾನೂನಿನ ಮೆಟ್ಟಿಲನ್ನೂ ಏರಿದೆ. ಇದರ ಪರಿಣಾಮವಾಗಿ ಕಳೆದ ೨೦೨೧ರ ಫೆಬ್ರವರಿಯ ಬಳಿಕ ವ್ಯವಸ್ಥಾಪನಾ ಸಮಿತಿ ರಚನೆಗೊಂಡಿಲ್ಲ. ಈ ಕುರಿತ ಕಾನೂನಿನ ಪ್ರಕ್ರಿಯೆಗಳು ಇನ್ನೂ ಹಾಗೆಯೇ ಬಾಕಿ ಉಳಿದಿದೆ.

ಇದೀಗ ರಾಜ್ಯದಲ್ಲಿ ಹೊಸ ಸರಕಾರವೂ ರಚನೆಯಾಗಿದ್ದು, ನೂರು ದಿನಗಳ ಅಧಿಕಾರವೂ ಈಗಾಗಲೇ ಪೂರ್ಣಗೊಂಡಿದೆ. ಇದರೊಂದಿಗೆ ಪ್ರಸಕ್ತ ಈ ಕ್ಷೇತ್ರದ ಶಾಸಕರೂ ಬದಲಾವಣೆಯಾಗಿದ್ದು, ನೂತನ ಶಾಸಕರಾಗಿ ರಾಜ್ಯಮಟ್ಟದಲ್ಲಿ ಪ್ರಭಾವಿಯೂ ಆಗಿರುವ ಎ.ಎಸ್. ಪೊನ್ನಣ್ಣ ಅವರು ಆರಿಸಿ ಬಂದಿದ್ದಾರೆ.

ಪೊನ್ನಣ್ಣ ಅವರು ಶಾಸಕರಾದ ಬಳಿಕ ಇದು ಪ್ರಥಮ ತೀರ್ಥೋದ್ಭವ ವಾಗಲಿದ್ದು, ಈ ಬಾರಿಯ ಜಾತ್ರೆಯ ವ್ಯವಸ್ಥೆಗಳ ಬಗ್ಗೆ ಹಲವು ನಿರೀಕ್ಷೆಗಳೂ ಇವೆ. ಇದು ಒಂದೆಡೆಯಾದರೆ ಈ ಪವಿತ್ರ ಕ್ಷೇತ್ರವನ್ನು ಸರಕಾರ ಅಥವಾ ಸಂಬAಧಿಸಿದವರು ಕಡೆಗಣಿಸುತ್ತಿದ್ದಾರೆಯೇ ಎಂಬ ಭಾವನೆ ಭಕ್ತಾದಿಗಳಲ್ಲಿ ಮೂಡುವಂತಾಗಿದೆ. ವ್ಯವಸ್ಥಾಪನಾ ಸಮಿತಿಯ ವಿಚಾರ ಒಂದೆಡೆಯಾದರೆ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರದ ಅಭಿವೃದ್ಧಿಗೆ ಸಂಬAಧಿಸಿದ ಹಲವು ಯೋಜನೆಗಳೂ ಹಲವಾರು ಸಮಯದಿಂದ ನೆನೆಗುದಿಗೆ ಬಿದ್ದಿದೆ.

ಈ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆಯ ಮೂಲಕ ರೂ. ಒಂದು ಕೋಟಿ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆಂದು ನೀಡಲಾಗಿದ್ದು, ಇದರ ಸದ್ಬಳಕೆ ಯಾಗಿಲ್ಲ. ಇದರಲ್ಲಿ ತಲಕಾವೇರಿಯಲ್ಲಿ ಭಂಡಾರ ಮನೆಯನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು, ಇದು ಎರಡು ವರ್ಷಗಳಿಂದ ಕಾರ್ಯಗತವಾಗಿಲ್ಲ. ಇದರೊಂದಿಗೆ ಭಾಗಮಂಡಲದಲ್ಲಿ ರೂ. ೮೦ ಲಕ್ಷ ವೆಚ್ಚದಲ್ಲಿ ನೂತನ ಅತಿಥಿ ಗೃಹ ನಿರ್ಮಾಣದ

(ಮೊದಲ ಪುಟದಿಂದ) ಯೋಜನೆಯನ್ನು ರೂಪಿಸಲಾಗಿದ್ದರೂ ಈ ಕೆಲಸವೂ ಇಲ್ಲಿಯ ತನಕ ಆರಂಭಗೊAಡAತಿಲ್ಲ.

ಇದೀಗ ಪ್ರಸಕ್ತ ವರ್ಷದ ತುಲಾಸಂಕ್ರಮಣ ಜಾತ್ರೆ ಸನ್ನಿಹಿತವಾಗುತ್ತಿದ್ದು ರಸ್ತೆಗಳ ಅಭಿವೃದ್ಧಿ ಸುಣ್ಣಬಣ್ಣ ಬಳಿಯುವುದು, ನಾಮಫಲಕ ಅಳವಡಿಕೆ, ವಿದ್ಯುತ್ ವ್ಯವಸ್ಥೆ, ಸ್ವಚ್ಛತೆ ಮತ್ತಿತರ ಹಲವಾರು ಕೆಲಸ ಕಾರ್ಯಗಳ ಸಿದ್ಧತೆಗಳು ನಡೆಯಬೇಕಿದೆ. ಜಿಲ್ಲಾಡಳಿತವಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಈ ಬಾರಿಯ ಜಾತ್ರೋತ್ಸವದ ಕುರಿತಾದ ಪೂರ್ವಭಾವಿ ಸಭೆಯನ್ನು ಇನ್ನೂ ನಿಗದಿ ಪಡಿಸಿಲ್ಲ. ಈ ಬಗ್ಗೆ ಕ್ಷೇತ್ರದ ನೂತನ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ.

ವ್ಯವಸ್ಥಾಪನಾ ಸಮಿತಿಗೆ ಸಂಬAಧಿಸಿದAತೆ ಕಾನೂನಿನ ಕಾರಣದಿಂದಾಗಿ ಇದು ತಡೆಹಿಡಿಯಲ್ಪಟ್ಟಿದೆ. ಆದರೆ, ಈ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆ ಮೂಲಕ ಬಂದಿರುವ ರೂ. ಒಂದು ಕೋಟಿ ಸೇರಿದಂತೆ ಭಾಗಮಂಡಲದಲ್ಲಿನ ಅತಿಥಿ ಗೃಹ ನಿರ್ಮಾಣದ ರೂ. ೮೦ ಲಕ್ಷ ಜಿಲ್ಲಾಡಳಿತದ ಬಳಿಯಿದ್ದರೂ ಈ ಬಗ್ಗೆ ಈ ತನಕವೂ ಆಸಕ್ತಿ ವಹಿಸದಿರುವುದನ್ನು ಪ್ರಶ್ನಿಸುವಂತಾಗಿದೆ ಎಂದು ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.

ಸದ್ಯದ ಮಟ್ಟಿಗೆ ಈ ಬಾರಿಯ ತೀರ್ಥೋದ್ಭವಕ್ಕೆ ಸಂಬAಧಿಸಿದAತೆ ಅಗತ್ಯ ಕ್ರಮಕೈಗೊಳ್ಳಲು ಸಿದ್ಧತೆ ನಡೆಸಲು ಭಾಗಮಂಡಲ ಗ್ರಾಮ ಪಂಚಾಯಿತಿ ಮಾತ್ರ ಕಳೆದೆರೆಡು ದಿನಗಳ ಹಿಂದೆ ನಡೆಸಿರುವ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.