ವೀರಾಜಪೇಟೆ, ಸೆ. ೧೫: ಮೃತ ವ್ಯಕ್ತಿಯೊಬ್ಬರ ಶವ ಪರೀಕ್ಷೆಯನ್ನು ಶೀಘ್ರವಾಗಿ ಮಾಡಲು ಹೆಚ್ಚಿನ ಹಣ ನೀಡುವಂತೆ ಸರ್ಕಾರಿ ವೈದ್ಯರೊಬ್ಬ ಬೇಡಿಕೆಯಿಟ್ಟರು. ಈ ವೈದ್ಯರು ಹಣ ಪಡೆದುಕೊಂಡಿರುವ ವೀಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಶಾಸಕರು ವೈದ್ಯರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಇದೀಗ ಆದೇಶ ಮಾಡಿದ್ದಾರೆ.
ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಮೂಳೆ ತಜ್ಞರಾಗಿ ಸುಮಾರು ೧೪ ವರ್ಷಗಳಿಂದ ಸೇವೆಯಲ್ಲಿರುವ ಡಾ. ಶ್ರೀನಿವಾಸ್ ಮೂರ್ತಿ ಮತ್ತು ಇಬ್ಬರು ಸಿಬ್ಬಂದಿ ಮೃತ ಹೊಂದಿರುವ ಶವ ಪರೀಕ್ಷೆ ಮಾಡಲು ಲಂಚದ ಬೇಡಿಕೆಯಿಟ್ಟು. ಸಂಬAಧಿಕರಿAದ ಹಣ ಪಡೆದುಕೊಂಡ ಆರೋಪಕ್ಕೆ ಒಳಗಾಗಿದ್ದಾರೆ.
ಘಟನೆಯ ವಿವರ: ತಾ. ೧೪ ರಂದು ಸ್ವತಃ ವಾಸ ಸ್ಥಳ ಗುಂಡ್ಲುಪೇಟೆವರಾಗಿದ್ದ ಹಾಲಿ ವಾಸ ಗೊಣಿಕೊಪ್ಪಲು ರ್ವತ್ತೊಕ್ಲು ಗ್ರಾಮದ ನಿವಾಸಿಯಾಗಿರುವ ಗೊವಿಂದಾಚಾರಿ ಪ್ರಾಯ ೬೨ ವರ್ಷ ಅವರು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವ್ಯಕ್ತಿಯನ್ನು ಸಂಬAಧಿಕರು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮಡಿಕೇರಿಗೆ ಕೊಂಡೊಯ್ಯು ವಂತೆ ಹೇಳಿದ್ದಾರೆ. ೧೦೮ ತುರ್ತು ಚಿಕಿತ್ಸಾ ವಾಹನದಲ್ಲಿ ಗೋಣಿಕೊಪ್ಪಲು ವಿನಿಂದ ಮಡಿಕೇರಿಗೆ ತೆರಳುವ ಮಾರ್ಗದ ಮಧ್ಯೆ ಅಂದರೆ (ಬಿಟ್ಟಂಗಾಲ) ಬಳಿ ವಿಷ ಸೇವನೆ ಮಾಡಿದ ವ್ಯಕ್ತಿ ಮರಣ ಹೊಂದಿದ್ದಾರೆ. ಇದು ತಿಳಿದ ಸಂಬAಧಿಕರು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ದಾಖಲಿಸಿದ್ದಾರೆ. ಅಂದು ಸಂಜೆ ಮರಣೋತ್ತರ ಪರೀಕ್ಷೆ ಮಾಡುವಂತೆ ವೈದ್ಯರಾದ ಡಾ. ಶ್ರೀನಿವಾಸ್ ಮೂರ್ತಿ ಅವರಲ್ಲಿ ಪುತ್ರ ಚೇತನ್ ಕೋರಿದರು. ‘‘ವೈದ್ಯರು ನೋಡಿ ಇದು ಪೊಲೀಸ್ ಕೇಸು ಕಾನೂನು ನಿಬಂಧನೆಗಳು ಸಾಕಷ್ಟಿವೆ; ಇಂದು ಆಗುವುದಿಲ್ಲ ನಾಳೆ ಬನ್ನಿ ಎಂದು ಹೇಳುತ್ತಾರೆ.’’ ಚೇತನ್ ಅವರಿಗೆ ದಿಕ್ಕು ತೋರದಾಗಿದೆ. ಸ್ನೇಹಿತರ ಬಳಿ ಮಾತನಾಡಿಕೊಂಡು ವೈದ್ಯರ ಬಳಿ ಬಂದಿದ್ದಾರೆ. ವೈದ್ಯರು ಮುಂದುವರೆದು ಮರಣೋತ್ತರ ಪರೀಕ್ಷೆ ಮಾಡಲು ಲಂಚದ ಬೇಡಿಕೆಯಿಟ್ಟಿದ್ದಾರೆ. ಚೇತನ್ ಅವರು ರೂ. ೨೦೦೦ ಗಳನ್ನು ನೀಡಲು ಒಪ್ಪಿಕೊಂಡು ಹಣ ನೀಡಿದ್ದಾರೆ. ಇದಕ್ಕೆ ಒಪ್ಪದ ವೈದ್ಯರು ಹೆಚ್ಚಿಗೆ ಹಣದ ಮೊತ್ತಕ್ಕೆ ಬೇಡಿಕೆ ನೀಡಿದ್ದಾರೆ, ಚೇತನ್ ಅವರು ನಾವುಗಳು ಬಡವ ಕುಟುಂಬದವರು ಸರ್ ನಮ್ಮ ಬಳಿ ಹಣದ ಕೊರತೆಯಿದೆ ಸ್ನೇಹಿತರ ಬಳಿಯಿಂದ ಸಂಗ್ರಹಿಸಿ ನೀಡುತ್ತೇವೆ. ಶವ ಪರೀಕ್ಷೆ ಮುಂದಾಗಿ ಎಂದು ಮನವಿ ಮಾಡಿದ್ದಾರೆ, ಆದರೆ ವೈದ್ಯರು ಹೆಚ್ಚಿಗೆ ೧೦೦೦ ರೂ. ಪಡೆದು ಕೊಂಡಿದ್ದಾರೆ. ನಂತರದಲ್ಲಿ ಮರಣೋತ್ತರ ಪರೀಕ್ಷೆ ಮಾಡುವ ಸಿಬ್ಬಂದಿಗಳಿಗೂ ಏನಾದರು ನೀಡಬೇಕು ಎಂದು ಬೇಡಿಕೆ ಒಡ್ಡಿದ್ದಾರೆ. ಆಗಲಿ ಎಂದು ಒಪ್ಪಿಕೊಂಡ ಚೇತನ್ ಮತ್ತು ಸ್ನೇಹಿತರು ಮುಂದುವರೆದಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಶವ ಪರೀಕ್ಷೆ
(ಮೊದಲ ಪುಟದಿಂದ) ಮಾಡದೆ ಸುಮ್ಮನಿದ್ದು ಕೊನೆಯ ಹಂತದಲ್ಲಿ ‘ಡೀಲ್’ ಕುದುರಿದ ನಂತರ ವೈದ್ಯರು ಶವ ಪರೀಕ್ಷೆಗೆ ಮುಂದಾಗಿದ್ದಾರೆ. (ವೈದ್ಯರ ಕೊಠಡಿಯಲ್ಲಿ ನಡೆದಿರುವ ಎಲ್ಲಾ ಘಟನೆಗಳನ್ನು ಚೇತನ್ ಅವರ ಸ್ನೇಹಿತರೊಬ್ಬರು ಗೌಪ್ಯವಾಗಿ ತಮ್ಮ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದ್ದಾರೆ) ಸುಮಾರು ರಾತ್ರಿ ೭ ಗಂಟೆಗೆ ಶವ ಪರೀಕ್ಷೆ ಮಾಡಿ ಇನ್ನೂ ಶವಾಗಾರದಲ್ಲಿ ಅಮಾಯಕರಿಗೆ ನರಕಯಾತನೆ ತರಿಸಿದೆ. ಅಮಾಯಕರು ಎಂದು ತಿಳಿದಿದ್ದರೂ ‘‘ಶವ ಪರೀಕ್ಷೆಗೆ ವೈದ್ಯರಿಗೆ ಲಂಚ ನೀಡಿದ್ದೀರಿ ನಮಗೂ ನೀಡಿ’’ ಎಂದು ಪರೀಕ್ಷೆ ಮಾಡಿದ ಎರಡು ಸಿಬ್ಬಂದಿಗಳು ಧ್ವನಿಯೆತ್ತಿದ್ದಾರೆ. ಮೃತ ವ್ಯಕ್ತಿಯ ಸಂಬAಧಿಕರು ತಲಾ ೫೦೦ ರೂ. ನಂತೆ ಸಿಬ್ಬಂದಿಗಳಿಗೆ ನೀಡಿದ್ದಾರೆ. ಪಡೆದಿರುವ ಹಣವನ್ನು ಶವದ ಮೇಲೆ ಎಸೆದಿದ್ದಾರೆ. ಇನ್ನೂ ಹೆಚ್ಚಿಗೆ ಹಣ ನೀಡಿದಲ್ಲಿ ಮಾತ್ರ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಬಿಡುತ್ತೇವೆ ಎಂದು ದಪÀðದಿಂದ ಹೇಳಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಏನು ಮಾಡುವುದು ಎಂದು ತೋಚದೆ ಮೃತನ ಕಡೆಯವರು ಹೆಚ್ಚಿನ ಹಣ ಪಾವತಿ ಮಾಡಿ ಪಾರ್ಥಿವ ಶರೀರವನ್ನು ಪಡೆದುಕೊಂಡಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯ ವೈದ್ಯರ ಲಂಚಾವತಾರದ ಪ್ರಕರಣ ವೀಡಿಯೋ ವೀಕ್ಷಿಸಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಶವ ಪರೀಕ್ಷೆಗಾಗಿ ಲಂಚದ ಬೇಡಿಕೆ ಮಾಡುವುದು ಕಾನೂನು ಉಲ್ಲಂಘಿಸುವ ಕೃತ್ಯ ಇವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಅರೋಗ್ಯಾಧಿಕಾರಿ ಡಾ. ಸತೀಶ್ ಕುಮಾರ್ ಅವರು ಡಾ. ಶ್ರೀನಿವಾಸ್ ಮೂರ್ತಿ ಅವರಿಗೆ ಈ ವಿಚಾರ ಸಂಬAಧ ಸೂಕ್ತ ಸಮಜಾಯಿಷಿಕೆ ನೀಡಲು ೧೨ ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಈ ವಿಚಾರ ರಾಜ್ಯದ ಆರೋಗ್ಯ ಇಲಾಖೆಯ ಆಯುಕ್ತರ ಗಮನಕ್ಕೂ ಬಂದಿದ್ದು, ತಕ್ಷಣ ಈ ಕುರಿತು ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಸ್ಪಷ್ಟ ಸಾಕ್ಷö್ಯ ಇರುವುದರಿಂದ ಈ ಪ್ರಕರಣದಲ್ಲಿ ಖಂಡಿತವಾಗಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದರು. -ಕಿಶೋರ್ ಕುಮಾರ್ ಶೆಟ್ಟಿ