ನ್ಯಾ. ಸಂತೋಷ್ ಕೊಠಾರಿ
ವೀರಾಜಪೇಟೆ, ಸೆ. ೧೫: ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಕಡಿಮೆ ಆದರು ಸಮಾಜಕ್ಕಾಗಿ ಅವರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ವೀರಾಜಪೇಟೆ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಸಂತೋಷ್ ಕೊಠಾರಿ ಅಭಿಪ್ರಾಯಪಟ್ಟರು.
ವೀರಾಜಪೇಟೆ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ರಾಷ್ಟಿçÃಯ ಪೌಷ್ಟಿಕಾಂಶ ದಿನಾಚರಣೆಯ ಅಂಗವಾಗಿ ಪುರಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿದಿನ ಒಂದೊAದು ದಿನಾಚರಣೆಗಳು ನಡೆಯುತ್ತವೆ. ಸರ್ಕಾರ ಯಾವ ಕಾರಣಕ್ಕಾಗಿ ದಿನಾಚರಣೆಗಳನ್ನು ನಡೆಸುತ್ತಾರೆ ಎಂಬುವುದರ ಮಹತ್ವವನ್ನು ನಾವು ಅರಿತುಕೊಳ್ಳಬೇಕು.
ಪೌಷ್ಟಿಕಾಂಶ ಎನ್ನುವುದು ತಾಯಿ ಗರ್ಭದಿಂದಲೇ ಪ್ರಾರಂಭವಾಗುತ್ತದೆ. ಒಂದು ಹೆಂಗಸು ಗರ್ಭಿಣಿ ಆದ ಬಳಿಕ ಯಾವ ತರದ ಪೌಷ್ಟಿಕಾಂಶಗಳನ್ನು ತೆಗದುಕೊಳ್ಳಬೇಕೆಂದು ವೈದ್ಯರ ಬಳಿ ಸಲಹೆ ಪಡೆದುಕೊಂಡು ಅವರ ಸಲಹೆಯಂತೆ ನಡೆದುಕೊಳ್ಳಬೇಕು. ಕೆಲವೊಮ್ಮ ಪೌಷ್ಟಿಕಾಂಶದ ಕೊರತೆಯಿಂದ ಮಗುವಿನಲ್ಲಿ ಅಂಗವಿಕಲತೆ ಕಾಡುತ್ತದೆ. ಹಸಿವು ಎಂದಾಕ್ಷಣ ಹೊಟ್ಟೆ ತುಂಬಾ ಆಹಾರವನ್ನು ಸೇವಿಸುವುದಲ್ಲ. ಯಾವ ತರಹದ ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ಗರ್ಭಿಣಿ ಸ್ತಿçÃಯರಿಗೆ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಅಧಿಕಾರಿ ಕೆ.ಆರ್. ರಾಜೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಅಪರ ಸಿವಿಲ್ ನ್ಯಾಯಾಧೀಶರಾದ ಪ್ರದೀಪ್ ಪೂತದಾರ್, ಸಹಾಯಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಅಧಿಕಾರಿ ರೀತಾ, ಪುರಸಭೆ ಮುಖ್ಯಾಧಿಕಾರಿ ಚಂದ್ರಶೇಖರ್, ತಾಲೂಕು ವೈದ್ಯಾಧಿಕಾರಿ ಡಾ. ಪ್ರಜ್ವಲ್, ಅಂಗನವಾಡಿ ಕಾರ್ಯಕರ್ತೆಯರ ಅಧ್ಯಕ್ಷೆ ಶೀಲಾ ಮತ್ತಿತರರು ಉಪಸ್ಥಿತರಿದ್ದರು.