ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹೈಕೋರ್ಟ್ ಅಸ್ತು
ಹುಬ್ಬಳ್ಳಿ, ಸೆ. ೧೫: ಹುಬ್ಬಳ್ಳಿಯ ವಿವಾದಿತ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗಣೇಶ ಚತುರ್ಥಿ ಹಬ್ಬ ಆಚರಣೆ ವಿರೋಧಿಸಿ ಅಂಜುಮನ್-ಎ-ಇಸ್ಲಾA ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ಶುಕ್ರವಾರ ವಜಾಗೊಳಿಸಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಿ ನಿರ್ಣಯ ಅಂಗೀಕರಿಸಿರುವುದನ್ನು ವಿರೋಧಿಸಿ ಅಂಜುಮನ್-ಎ-ಇಸ್ಲಾA ಹೈಕೋರ್ಟ್ಗೆ ಮನವಿ ಸಲ್ಲಿಸಿತ್ತು. ಅಂಜುಮನ್-ಎ-ಇಸ್ಲಾA ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್, ಮೈದಾನವು ಹುಬ್ಬಳ್ಳಿ-ಧಾರವಾಡ ನಗರಸಭೆಯ ಆಸ್ತಿಯಾಗಿದ್ದು, ಅವರು ಬಯಸಿದವರಿಗೆ ಭೂಮಿಯನ್ನು ನೀಡಬಹುದು ಎಂದು ಹೇಳಿದೆ.
ಖಾಸಗಿ ವೀಡಿಯೋ ಲೀಕ್ ಮಾಡುವ ಬೆದರಿಕೆ; ಇಬ್ಬರ ಬಂಧನ
ಬೆAಗಳೂರು, ಸೆ. ೧೫: ಪ್ರೇಮಿಗಳ ಖಾಸಗಿ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡುವುದಾಗಿ ಬ್ಲಾಕ್ಮೇಲ್ ಮಾಡಿ ೧ ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಇಬ್ಬರು ಆರೋಪಿಗಳನ್ನು ಚಂದ್ರ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರನ್ನು ನಯನಾ ಮತ್ತು ಕಿರಣ್ ಎಂದು ಗುರುತಿಸಲಾಗಿದೆ. ಆರೋಪಿ ನಯನಾ ಸಂತ್ರಸ್ತ ಯುವತಿಯ ಸಂಬAಧಿಯಾಗಿದ್ದಳು. ಆರೋಪಿಗಳು ಕೆಂಗೇರಿ ಮುಖ್ಯರಸ್ತೆಯ ಕೆಂಚನಾಪುರದಲ್ಲಿ ಹೊಟೇಲ್ ನಡೆಸುತ್ತಿದ್ದರು. ಈ ವೇಳೆ ಆರೋಪಿಗಳು ಜೋಡಿಯನ್ನು ಹೊಟೇಲ್ ಕೊಠಡಿಯಲ್ಲಿ ಒಂದಿಷ್ಟು ಸಮಯ ಕಳೆಯುವಂತೆ ಪ್ರೋತ್ಸಾಹಿಸುತ್ತಿದ್ದರು. ರೂಮಿನಲ್ಲಿ ರಹಸ್ಯವಾಗಿ ಕ್ಯಾಮೆರಾ ಇಟ್ಟು, ಇಬ್ಬರ ಖಾಸಗಿ ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಅದನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಯುವತಿಗೆ ಕಿರಣ್ ವಾಟ್ಸ್ಆ್ಯಪ್ ಮಾಡಿದ್ದ. ನಂತರ ಫೋಟೋ, ವೀಡಿಯೋ ತಕ್ಷಣ ಡಿಲೀಟ್ ಮಾಡಿದ್ದ. ನಂತರ ಕರೆ ಮಾಡಿ ಒಂದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ದೂರು ದಾಖಲಿಸಿಕೊಂಡ ಪೊಲೀಸರು ನಯನ ಹಾಗೂ ಕಿರಣ್ನನ್ನು ಬಂಧಿಸಿದ್ದಾರೆ.
ರಾಮಚರಿತ ಮಾನಸವನ್ನು ಸೈನೈಡ್ಗೆ ಹೋಲಿಸಿದ ಬಿಹಾರ ಸಚಿವ!
ಪಾಟ್ನಾ, ಸೆ. ೧೫: ಸನಾತನ ಧರ್ಮದ ಬಗ್ಗೆ ಡಿಎಂಕೆ ಹೇಳಿಕೆ ಚರ್ಚೆಗೆ ಗುರಿಯಾಗಿರುವ ಬೆನ್ನಲ್ಲೇ, ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್ ಅವರ ಹೇಳಿಕೆ ಮತ್ತೊಂದು ವಿವಾದ ಹುಟ್ಟಿಸಿದೆ. ರಾಮಚರಿತ ಮಾನಸದಂತಹ ಗ್ರಂಥಗಳಲ್ಲಿ "ಪೊಟ್ಯಾಸಿಯಮ್ ಸೈನೈಡ್"ಗೆ ಹೋಲಿಸುವಷ್ಟು ಹಾನಿಕಾರಕ ಅಂಶಗಳನ್ನು ಹೊಂದಿದೆ ಎಂದು ಸಚಿವರು ವಿವಾದಿತ ಹೇಳಿಕೆ ನೀಡಿದ್ದಾರೆ. ಆರ್ಜೆಡಿ ನಾಯಕನ ಈ ಹೇಳಿಕೆಯ ವೀಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ. ಇದು ನನ್ನ ದೃಷ್ಟಿಕೋನವಲ್ಲ, ಆದರೆ ಶ್ರೇಷ್ಠ ಹಿಂದಿ ಬರಹಗಾರ ನಾಗಾರ್ಜುನ, ಸಮಾಜವಾದಿ ಚಿಂತಕ ರಾಮ್ ಮನೋಹರ್ ಲೋಹಿಯಾ ಅವರೂ ಸಹ ರಾಮಚರಿತ ಮಾನಸದಲ್ಲಿ ಹಲವಾರು ಪ್ರತಿಗಾಮಿ ಆಲೋಚನೆಗಳಿವೆ ಎಂದು ಹೇಳಿದ್ದಾರೆಂದು ಸಚಿವರು ಪ್ರತಿಪಾದಿಸಿದ್ದಾರೆ. ಇದೇ ವೇಳೆ ಗ್ರಂಥಗಳಲ್ಲಿ ಹಲವಾರು ಉತ್ತಮ ಚಿಂತನೆಗಳಿದೆ ಎಂದು ಹೇಳಿದ್ದಾರೆ. ಶಿಕ್ಷಣ ಸಚಿವರು ಸಂತ ರವಿದಾಸ್ ಮತ್ತು ಸ್ವಾಮಿ ವಿವೇಕಾನಂದರAತಹ ಪ್ರಗತಿಪರ ವ್ಯಕ್ತಿಗಳನ್ನು ಒಳಗೊಂಡಿರುವ ಶ್ರೇಷ್ಠ ಸನಾತನ ಧರ್ಮವನ್ನು ಅವಮಾನಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಮಾತುಗಳ ಬಗ್ಗೆ ಏಕೆ ಮೌನವಾಗಿದ್ದಾರೆ ಎಂಬುದು ನಮಗೆ ತಿಳಿಯಬೇಕಿದೆ" ಎಂದು ಬಿಜೆಪಿ ಮಾಧ್ಯಮ ಸಮಿತಿಯ ನೀರಜ್ ಕುಮಾರ್ ಆಗ್ರಹಿಸಿದ್ದಾರೆ.
ಕ್ರೂಸರ್ ಲಾರಿಗೆ ಡಿಕ್ಕಿ: ಐವರು ಸಾವು, ೧೧ ಮಂದಿಗೆ ಗಾಯ
ಅನ್ನಮಯ, ಸೆ. ೧೫: ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ತಿರುಪತಿಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಕ್ರೂಸರ್ ಶುಕ್ರವಾರ ಬೆಳಿಗ್ಗೆ ಲಾರಿಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಹನ್ನೊಂದು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಮೃತರಲ್ಲಿ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರಿದ್ದಾರೆ ಎಂದು ಹೇಳಿದ್ದಾರೆ. ಗಾಯಾಳುಗಳ ಪೈಕಿ ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ. ಅವರನ್ನು ತಿರುಪತಿ ರೂವಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೆಥಂಪಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ನಾಗಬಾಬು ತಿಳಿಸಿದ್ದಾರೆ.
ನುಹ್ ಹಿಂಸಾಚಾರ ಪ್ರಕರಣ: ಶಾಸಕ ಮಮ್ಮನ್ ಖಾನ್ ಬಂಧನ
ಚAಡೀಗಡ, ಸೆ. ೧೫: ಜುಲೈ ೩೧ರಂದು ಹರಿಯಾಣದ ನುಹ್ನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಕೋಮು ಘರ್ಷಣೆಯ ನಂತರ ದಾಖಲಿಸಲಾದ ಎಫ್ಐಆರ್ನಲ್ಲಿ ಆರೋಪಿ ಎಂದು ಹೆಸರಿಸಲಾಗಿದ್ದ ಫಿರೋಜ್ಪುರ ಜಿರ್ಕಾ ಕ್ಷೇತ್ರದ ಶಾಸಕರನ್ನು ನಿನ್ನೆ ತಡರಾತ್ರಿ ಬಂಧಿಸಲಾಗಿದೆ. ಫಿರೋಜ್ಪುರ ಜಿರ್ಖಾದ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಖ್ಯಸ್ಥ ಸತೀಶ್ ಕುಮಾರ್ ಇದನ್ನು ಬಂಧನ ಖಚಿತಪಡಿಸಿದ್ದಾರೆ. ನುಹ್ ಕ್ಷೇತ್ರದ ಕಾಂಗ್ರೆಸ್ನ ಹಿರಿಯ ಶಾಸಕ ಅಫ್ತಾಬ್ ಅಹ್ಮದ್ ಕೂಡ ಖಾನ್ ಬಂಧನವನ್ನು ಖಚಿತಪಡಿಸಿದ್ದಾರೆ. ನೂಹ್ ಹಿಂಸಾಚಾರದ ನಂತರ ದಾಖಲಿಸಲಾದ ಎಫ್ಐಆರ್ನಲ್ಲಿ ಖಾನ್ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ ಎಂದು ಹರಿಯಾಣ ಸರ್ಕಾರ ಗುರುವಾರ ಹೈಕೋರ್ಟ್ಗೆ ತಿಳಿಸಿತ್ತು, ಆರೋಪಕ್ಕೆ ಸಂಬAಧಿಸಿದAತೆ ಪೊಲೀಸರ ಬಳಿ ಫೋನ್ ಕರೆ ದಾಖಲೆಗಳು ಮತ್ತು ಇತರ ಪುರಾವೆಗಳಿವೆ ಎಂದು ಹೇಳಿತು. ಜುಲೈ ೩೧ ರಂದು ನೂಹ್ನಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದ ಮೆರವಣಿಗೆಯ ಮೇಲೆ ಗುಂಪೊAದು ದಾಳಿ ನಡೆಸಿತ್ತು. ದಾಳಿಯ ಸಮಯದಲ್ಲಿ ಆರು ಜನರು ಸಾವಿಗೀಡಾಗಿದ್ದರು.