ಎA.ಹೆಚ್. ಮುಹಮ್ಮದ್
ವೀರಾಜಪೇಟೆ, ಸೆ. ೧೫: ಹಬ್ಬಗಳು ಪರಸ್ಪರ ಸಂಬAಧ ಬೆಳೆಸುವ ಕೊಂಡಿಗಳಾಗಬೇಕೇ ಹೊರತು ಸಂಘರ್ಷಕ್ಕೆ ದಾರಿಯಾಗಬಾರದು ಎಂದು ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಎಂ.ಹೆಚ್. ಮುಹಮ್ಮದ್ ಕುಂಞÂ ಹೇಳಿದರು.
ವೀರಾಜಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಆಯೋಜಿಸಿದ್ದ “ಹಬ್ಬಗಳು ಮತ್ತು ಸಹೋದರತೆ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿ, ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಆತ್ಮವಿಶ್ವಾಸ ಮತ್ತು ಆತ್ಮಗೌರವವನ್ನು ಹೆಚ್ಚಿಸಿಕೊಳ್ಳಬೇಕು. ಸಮಾಜವನ್ನು ಹೆಚ್ಚಾಗಿ ಪ್ರೀತಿಸಲು ಜನರಿಗೆ ನೆರವಾಗುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ದಯಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಬ್ಬಗಳು ಮನುಷ್ಯನ ದೈನಂದಿನ ಬದುಕಿನೊಂದಿಗೆ ಅವಿನಾಭಾವ ಸಂಬAಧವನ್ನು ಇಟ್ಟುಕೊಂಡಿವೆ. ಹಬ್ಬಗಳು ಪ್ರೀತಿಯ ಮತ್ತು ಸಹಬಾಳ್ವೆಯ ಸಂದೇಶವನ್ನು ನೆನಪಿಸುತ್ತವೆ. ಹಬ್ಬಾಚರಣೆಗಳ ಮೂಲಕ ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಬೇಕು ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕೆ. ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಆರ್. ರಘುರಾಜ್ ಸ್ವಾಗತಿಸಿದರು. ಸದ್ಭಾವನಾ ಮಂಚ್ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹೆಮಾನ್ ವಂದಿಸಿದರು. ವಿದ್ಯಾರ್ಥಿ ಅಜಿತ್ ನಿರೂಪಿಸಿದರು. ಕೀರ್ತನ ಪ್ರಾರ್ಥನೆ ನೆರವೇರಿಸಿದರು.