ಕರಿಕೆ, ಸೆ. ೧೬: ಇಲ್ಲಿನ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಕಾಲದ ಆಡಳಿತ ಮಂಡಳಿಯ ಹನ್ನೆರಡು ನಿರ್ದೇಶಕರ ಆಯ್ಕೆಯ ಚುನಾವಣೆ ಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ಹನ್ನೆರೆಡು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಚುನಾವಣಾ ಅಧಿಕಾರಿಯಾಗಿ ಸಂದೀಪ್ ಮತ್ತು ಸಂಘದ ಕಾರ್ಯನಿರ್ವಹಣಾಧಿಕಾರಿ ಎನ್.ಸಿ. ಗಂಗಾಧರ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ದೇವರಾಜ್ ಬೇಕಲ್, ಕುದುಪಜೆ ಜಗದೀಶ್, ಕಟ್ಟಕೋಡಿ ಸುಬ್ರಮಣ್ಯ, ಸೋಣಂಗೇರಿ ಜಯಂತ, ಬಿ.ಕೆ. ಪುರುಷೋತ್ತಮ, ವಿನೋದ್ ಪಿ.ಟಿ., ರೆಲ್ಸನ್ ಎಂ.ಎA., ಶ್ರೀನಿವಾಸ್, ಜೀವನ್, ಸರಸ್ವತಿ ಕುದುಪಜೆ, ಧನ್ಯಶ್ರೀ ಕುಮಾರ್, ಹಕಿಂ ಗೆಲುವು ಸಾಧಿಸಿದರು. ಫಲಿತಾಂಶದ ನಂತರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವದ ಆಚರಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್, ಸಹಕಾರ ಸಂಘದ ಹಾಲಿ ಅಧ್ಯಕ್ಷ ಬೇಕಲ್ ಶರಣ್ ಕುಮಾರ್ ಹಾಜರಿದ್ದರು. ಭಾಗಮಂಡಲ ಠಾಣಾಧಿಕಾರಿ ಶೋಭಾ ಲಮಾಣಿ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.