ಸಿದ್ದಾಪುರ, ಸೆ. ೧೬: ಕಾಡಾನೆಗಳು ದಾಂಧಲೆ ನಡೆಸಿ ಭತ್ತದ ಕೃಷಿ ಧ್ವಂಸಗೊಳಿಸಿರುವ ಘಟನೆ ಸಮೀಪದ ಕರಡಿಗೋಡು ಗ್ರಾಮದ ಮುಲ್ಲೆತ್ತೋಡು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಕರಡಿಗೋಡು ಗ್ರಾಮದ ಕೃಷಿಕರಾದ ಡಿ.ಎಲ್. ಲಕ್ಷö್ಮಣ ದಯಾನಂದ ರಾಜ ಎಂಬವರಿಗೆ ಸೇರಿದ ಭತ್ತದ ಕೃಷಿ ಮಾಡಿದ ಗದ್ದೆಗಳಿಗೆ ರಾತ್ರಿ ಸಮಯದಲ್ಲಿ ೫ ಕಾಡಾನೆಗಳು ದಾಳಿ ಮಾಡಿ ಭತ್ತದ ಸಸಿಮಡಿಗಳನ್ನು ತಿಂದು ತುಳಿದು ನಷ್ಟ ಉಂಟು ಮಾಡಿವೆ.
ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಕರಡಿಗೋಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಾಡಾನೆಗಳು ಕಾಫಿ ತೋಟದೊಳಗೆ ಬೀಡುಬಿಟ್ಟಿದ್ದು, ಕಾರ್ಮಿಕರು ಹಾಗೂ ಗ್ರಾಮಸ್ಥರು ಆತಂಕದಿAದ ದಿನದೂಡುವಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.