ಮಡಿಕೇರಿ, ಸೆ. ೧೭: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮೂರನೇ ದಿನದ ಪಾದಯಾತ್ರೆ ಕಾಲೂರು ಮತ್ತು ಮುಕ್ಕೋಡ್ಲುವಿನಲ್ಲಿ ನಡೆಯಿತು.
ಕೊಡವ ಜಾಗೃತಿ ಭಾಷಣ ಮಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ೯ ಪ್ರಧಾನ ಬೇಡಿಕೆಗಳ ಕುರಿತು ಕೊಡವರು ಜಾಗೃತರಾಗಬೇಕು ಮತ್ತು ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಮುಖರಾದ ಐಲಪಂಡ ಪುಷ್ಪಾ ಪೂವಮ್ಮ, ಚೋಳಪಂಡ ಜ್ಯೋತಿ, ಕಾರೆರ ತಾರ, ಕಾರೆರ ಯಮುನ, ಕಾರೆರ ಮುತ್ತಮ್ಮ, ಕಾರೆರ ಜೋಯಪ್ಪ, ಚೋಳಪಂಡ ನಾಣಯ್ಯ, ಕಾರೆರ ಕಾಳಪ್ಪ, ಕಾರೆರ ಪಳಂಗಪ್ಪ, ಕಾರೆರ ಗಣಪತಿ, ಕಾರೆರ ತಿಮ್ಮಯ್ಯ, ಐಲಪಂಡ ಪೊನ್ನಪ್ಪ, ಐಲಪಂಡ ಮಿಟ್ಟು ಉತ್ತಪ್ಪ, ಐಲಪಂಡ ತಿಮ್ಮಯ್ಯ, ಶಾಂತೆಯAಡ ವಿ. ಕುಶಾಲಪ್ಪ, ನಾಪಂಡ ರವಿ ಕಾಳಪ್ಪ ಮತ್ತಿತರರು ಪಾದಯಾತ್ರೆ ಸಂದರ್ಭ ಹಾಜರಿದ್ದರು.
ತಾ.೧೮ ರಂದು ಬೆಳಿಗ್ಗೆ ೧೦ ಗಂಟೆಗೆ ಸೂರ್ಲಬ್ಬಿ, ಮಧ್ಯಾಹ್ನ ೨.೩೦ ಗಂಟೆಗೆ ಬಿಳಿಗೇರಿ-ಮಾದಾಪುರ ತಾ.೧೯ ರಂದು ಬೆಳಿಗ್ಗೆ ೧೦ ಗಂಟೆಗೆ ಹಾಲೇರಿ ಮತ್ತು ಸಂಜೆ ೪.೩೦ ಗಂಟೆಗೆ ಕೆದಕಲ್‌ನಲ್ಲಿ ಮೊದಲ ಹಂತದ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ.