ಸುಂಟಿಕೊಪ್ಪ, ಸೆ. ೧೬: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕುಮಟ್ಟದ ಚೆಸ್ ಪಂದ್ಯಾಟದ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯೆ ಶ್ರೀಲತಾ ವಹಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸಮಚಿತ್ತದಿಂದ ಸ್ವೀಕರಿಸುವುದು ಕ್ರೀಡಾ ಚಟುವಟುಕೆಗಳ ಯಶಸ್ಸಿಗೆ ಕಾರಣವಾಗುತ್ತದೆ. ಕ್ರೀಡೆಯಲ್ಲಿ ಗೆಲುವು ಮುಖ್ಯವೇ ಆದರೂ ಕ್ರೀಡೆಯಲ್ಲಿ ಭಾಗವಹಿಸುವುದು ಅದಕ್ಕಿಂತ ಮುಖ್ಯವಾಗಿರುತ್ತದೆ ಎಂದರು.
ನಿಕಟಪೂರ್ವ ಪ್ರಾಚಾರ್ಯ ಪಿ.ಎಸ್. ಜಾನ್ ಅವರು ಚೆಸ್ ಕ್ರೀಡೆಯಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಿದರು. ತಾಲೂಕು ಮಟ್ಟದಿಂದ ಜಿಲ್ಲಾಮಟ್ಟಕ್ಕೆ, ಬಾಲಕರ ವಿಭಾಗದಲ್ಲಿ ಗರಗಂದೂರು ಮೊರಾರ್ಜಿ ದೇಸಾಯಿ ಕಾಲೇಜಿನ ವಿದ್ಯಾರ್ಥಿ ವಿಶ್ವಸ್ ಎಸ್.ಎನ್. ಮತ್ತು ಜೀವನ್ ಹೆಚ್.ಆರ್., ಕೂಡಿಗೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ತರುಣ್ ಮತ್ತು ರಾಹುಲ್ರಾಜ್ ಕೆ.ಆರ್., ಎನ್.ಎಸ್. ಸೋಮವಾರಪೇಟೆ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿ ದಿವಿನ್ ಎಂ., ಬಾಲಕಿಯರ ವಿಭಾಗದಲ್ಲಿ ಸೋಮವಾರಪೇಟೆ ಸಂತ ಜೋಸೆಫರ ಕಾಲೇಜಿನ ವಿದ್ಯಾರ್ಥಿನಿ ತನುಶ್ರೀ ಬಿ.ಬಿ. ಮತ್ತು ನೀತಾ ಕೆ.ಆರ್., ಬಸವನಹಳ್ಳಿ ಮೊರಾರ್ಜಿ ದೇಸಾಯಿ ಕಾಲೇಜಿನ ವಿದ್ಯಾರ್ಥಿನಿ ಪೂಜಾ ಎನ್.ಎಸ್., ಸೋಮವಾರಪೇಟೆ ಬಿ.ಟಿ.ಸಿ.ಜಿ. ಕಾಲೇಜಿನ ವಿದ್ಯಾರ್ಥಿನಿ ಪುಷ್ಪಾಂಜಲಿ ಎ.ಎಂ., ಗರಗಂದೂರು ಮೊರಾರ್ಜಿ ದೇಸಾಯಿ ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಹೆಚ್.ವಿ. ಇವರುಗಳು ಆಯ್ಕೆಯಾಗಿದ್ದಾರೆ.