ಮಡಿಕೇರಿ, ಸೆ. ೧೬: ಐತಿಹಾಸಿಕ ನಾಡಹಬ್ಬ ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಉತ್ಸವಕ್ಕೆ ಅನುದಾನ ಸಂಬAಧ ಸರ್ಕಾರದ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎಸ್. ನಾಗರತ್ನ ಅವರು ಹೊರಡಿಸಿರುವ ಟಿಪ್ಪಣಿಯೊಂದು ‘ಶಕ್ತಿ’ಗೆ ಲಭ್ಯವಾಗಿದ್ದು, ಅದರಲ್ಲಿ ಕೊಡಗು ಉಸ್ತುವಾರಿ ಸಚಿವರು ದಸರಾಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಸಲ್ಲಿಸಿದ ಪತ್ರದ ಹಿನ್ನೆಲೆಯಲ್ಲಿ ಮಡಿಕೇರಿಗೆ ರೂ. ೭೫ ಲಕ್ಷ, ಗೋಣಿಕೊಪ್ಪಲುವಿಗೆ ರೂ. ೫೦ ಲಕ್ಷಗಳನ್ನು ಲೆಕ್ಕ ಶೀರ್ಷಿಕೆ ‘‘೨೨೦೫-೦೦-೧೦೨-೪-೦೧ ಓಚಿಣioಟಿಚಿಟ & Sಣಚಿಣe & ಆisಣಡಿiಛಿಣ ಈesಣivಚಿಟs ೧೦೩ ಉಡಿಚಿಟಿಣs iಟಿ-ಂiಜ-ಉeಟಿeಡಿಚಿಟ’’ ಅಡಿ ಒದಗಿಸಿರುವ ಅನುದಾನದಿಂದ ಬಿಡುಗಡೆ ಮಾಡುವಂತೆ ಆಡಳಿತ ಇಲಾಖೆಗೆ ತಿಳಿಸಲಾಗಿದೆ.