ಶನಿವಾರಸಂತೆ, ಸೆ. ೧೬: ಸಮೀಪದ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ತಲಗದ್ದೆ ಗ್ರಾಮದ ರೈತ ಎಂ.ಡಿ.ಕುAಜಪ್ಪ (೬೮) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕುಂಜಪ್ಪ ಪತ್ನಿ ಹಾಗೂ ಪುತ್ರ, ಸೊಸೆಯೊಂದಿಗೆ ವಾಸಿಸುತ್ತಿದ್ದು ಕಳೆದ ೧೦ ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದರು. ಸರಿಯಾದ ಆದಾಯವಿಲ್ಲದೆ ಸಾಲಬಾಧೆಗೆ ಒಳಗಾಗಿದ್ದರು ಎನ್ನಲಾಗಿದೆ. ತಾ.೧೨ ರಂದು ಬೆಳಿಗ್ಗೆ ತೋಟಕ್ಕೆ ತೆರಳಿದ್ದ ಕುಂಜಪ್ಪ ಸಂಜೆಯಾದರೂ ಮನೆಗೆ ವಾಪಸ್ಸು ಬಾರದ್ದರಿಂದ ಪುತ್ರ ತೀರ್ಥಕುಮಾರ್ ಹಾಗೂ ಅಕ್ಕಪಕ್ಕದವರು ಸೇರಿಕೊಂಡು ಹುಡುಕಾಡಿದಾಗ ಪಂಚಾಯಿತಿಯ ಬಾವಿ ಕಟ್ಟೆಯಲ್ಲಿ ಕುಂಜಪ್ಪ ಅವರ ಶರ್ಟ್ ಮತ್ತು ಟಾರ್ಚ್ ಪತ್ತೆಯಾಗಿದ್ದು, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬAದಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.