ಭಾಗಮAಡಲ, ಸೆ. ೧೬: ಅನಾರೋಗ್ಯದಿಂದ ನಿಧನರಾದ ಬೆಂಗಳೂರಿನಲ್ಲಿ ಮಿಲಿಟರಿ ಎಂಇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಜಿತಿನ್ ಅವರ ಅಂತ್ಯಕ್ರಿಯೆ ಇಂದು ನೆರವೇರಿತು.
ಕಳೆದ ೧೧ ವರ್ಷಗಳಿಂದ ನಾಯಕ್ ಆಗಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಭಾಗಮಂಡಲ ಸಣ್ಣಪುಲಿಕೋಟುವಿನ ಉದಿಯನ ಜಿತಿನ್ ಪ್ಯಾರಾಚೂಟ್ ತರಬೇತಿ ಸಂದರ್ಭ ಬಿದ್ದು ಕಿಡ್ನಿಗೆ ತೊಂದರೆ ಯಾಗಿ ಚಿಕಿತ್ಸೆಯನ್ನು ಪಡೆದಿದ್ದ ರಾದರೂ ತರಬೇತಿ ಮುಕ್ತಾಯ ಹಂತದ ಕೊನೆಯ ಓಟದ ಸಂದರ್ಭ ಸಮಸ್ಯೆ ಉಲ್ಬಣಿಸಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿ ರೆಳೆದಿದ್ದರು.
ನಿನ್ನೆ ಸಂಜೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಆಂಬುಲೆನ್ಸ್ನಲ್ಲಿ ೨೭ ಮಂದಿ ಯೋಧರೊಂದಿಗೆ ಇಂದು ಬೆಳಿಗ್ಗೆ ಮೂರು ಗಂಟೆ ವೇಳೆಗೆ ಮೃತ ದೇಹ ಮನೆ ತಲುಪಿತು. ಬೆಳಿಗ್ಗೆ ೯ ಗಂಟೆಯಿAದ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ, ಗ್ರಾ. ಪಂ.
(ಮೊದಲ ಪುಟದಿಂದ) ಅಧ್ಯಕ್ಷೆ ಪುಷ್ಪ, ಭಾಗಮಂಡಲ ಗ್ರಾಮ ಪಂಚಾಯಿತಿ ಸದಸ್ಯರಾದ ಹೊಸೂರು ಸತೀಶ್ ಕುಮಾರ್, ಕುಯ್ಯಮುಡಿ ರಂಜು, ದಂಡಿನ ಜಯಂತ್ ಅಂತಿಮ ನಮನ ಸಲ್ಲಿಸಿದರು. ಜಿಲ್ಲಾಡಳಿತದ ಪರವಾಗಿ ತಹಶೀಲ್ದಾರ್ ಪ್ರವೀಣ್ ಕುಮಾರ್, ಆರ್ ಐ ಅನೂಪ್ ಸಭಾಸ್ಟಿನ್, ಭಾಗಮಂಡಲ ಠಾಣಾಧಿಕಾರಿ ಶೋಭಾ ಲಮಾಣಿ ಗೌರವ ಸಲ್ಲಿಸಿದರು. ಬಳಿಕ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮೂರು ಬಾರಿ ಕುಶಾಲತೋಪು ಹಾರಿಸಿ ಅಂತಿಮ ನಮನ ಸಲ್ಲಿಸ ಲಾಯಿತು. ಪಾರ್ಥಿವ ಶರೀರ ದೊಂದಿಗೆ ಆಗಮಿಸಿದ್ದ ಸೇನಾಧಿಕಾರಿ ಗಳು ಗೌರವ ನಮನ ಸಲ್ಲಿಸಿದರು. ಬಳಿಕ ಗೌಡ ಸಂಪ್ರ ದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಪಾರ್ಥಿವ ಶರೀರದ ಜೊತೆಯಲ್ಲಿ ಆಗಮಿಸಿದ್ದ ಸೇನಾಧಿಕಾರಿಗಳು ಪತ್ನಿ ವನಿತಾ ಅವರಿಗೆ ರಾಷ್ಟçಧ್ವಜವನ್ನು ಹಸ್ತಾಂತರಿಸಿದರು. ಬಳಿಕ ಗೌರವ ಸಲ್ಲಿಸಿ, ಅಗ್ನಿಸ್ಪರ್ಶ ಮಾಡುವುದ ರೊಂದಿಗೆ ಜಿತಿನ್ ದೇಹ ಪಂಚ ಭೂತಗಳಲ್ಲಿ ಲೀನವಾಯಿತು. ಕಳೆದ ಹಲವು ವರ್ಷಗಳಿಂದ ಜಿತಿನ್ ಜೊತೆಯಲ್ಲಿದ್ದ ಸಿದ್ದಪ್ಪ ಅಂತಿಮ ನಮನ ಸಲ್ಲಿಸುವುದರೊಂದಿಗೆ ಕಣ್ಣೀರಿಟ್ಟರು. ಈ ಸಂದರ್ಭ ನೆರೆದಿದ್ದ ವರೆಲ್ಲರೂ ಭಾವುಕರಾದರು. ಏಳೇಳು ಜನ್ಮಕ್ಕೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸು; ನಿನ್ನ ಜೊತೆಯಲ್ಲಿ ನಾನಿರುವೆ ಎಂದು ಹೇಳುತ್ತಾ ಪತ್ನಿ ವನಿತಾ ಜತಿನ್ ಭಾವಚಿತ್ರವನ್ನು ಎದೆಗೆ ಅಪ್ಪಿಕೊಂಡು ರೋಧಿಸಿದರು. ತಾಯಿ ದಮಯಂತಿ, ತಂದೆ ಕಾಳಪ್ಪ, ಮಗ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಇನ್ಯಾರು ನಮ್ಮನ್ನು ನೋಡಿ ಕೊಳ್ಳುವವರು ಎಂದು ಅಳುತ್ತಿದ್ದ. ಎಲ್ಲರ ಮನಕಲಕುವಂತಿತ್ತು.
ಮೃತದೇಹವನ್ನು ತರುವ ವೇಳೆ ಗಡಿಭಾಗದ ಕುಶಾಲನಗರದಲ್ಲಿ ಮಾಜಿ ಸೈನಿಕರು ಪಾರ್ಥಿವ ಶರೀರವನ್ನು ಬರಮಾಡಿಕೊಂಡರು. ಅಯ್ಯಂಗೇರಿ ಗ್ರಾಮ ಪಂಚಾಯಿತಿ ವತಿಯಿಂದಲೂ ಗೌರವ ನಮನ ಸಲ್ಲಿಸಲಾಯಿತು.
ಸುನಿಲ್ ಕುಯ್ಯಮುಡಿ