ಸುಂಟಿಕೊಪ್ಪ, ಸೆ. ೧೬: ಸುಂಟಿಕೊಪ್ಪದ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಸಂವಿಧಾನ ಪೀಠಿಕೆ ವಾಚನದ ಪ್ರತಿಜ್ಞೆಯನ್ನು ಶಿಕ್ಷಕರುಗಳು ವಿದ್ಯಾರ್ಥಿಗಳಿಗೆ ಬೋಧಿಸಿದರು.
ಭಾರತದ ಸಂವಿಧಾನದ ಪ್ರಮುಖ ವಿಧಿ ವಿಧಾನದ ಆಶಯಗಳನ್ನು ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕ ಬಾಲಕೃಷ್ಣ ಅವರು ಮನನ ಮಾಡಿಕೊಟ್ಟರು. ಈ ಸಂದರ್ಭ ಸಹ ಶಿಕ್ಷಕರಾದ ಪ್ರಕಾಶ್, ಎಸ್. ಪ್ರಕಾಶ್, ಲಿಯೋನ, ಆರ್. ಚಿತ್ರಾ, ಶಾಂತ ಹೆಗಡೆ, ಜಯಶ್ರೀ ಮತ್ತಿತರರು ಇದ್ದರು.