ಮಡಿಕೇರಿ, ಸೆ. ೧೬: ವೀರಾಜಪೇಟೆ ವಲಯದ, ವೀರಾಜಪೇಟೆ ಶಾಖೆ ಹಾಗೂ ಅಮ್ಮತ್ತಿ ಶಾಖೆಗೆ ಒಳಪಡುವ ಕುಕ್ಲೂರು, ಐಮಂಗಲ, ಮಗ್ಗುಲ, ಪುದುಕೋಟೆ, ದೇವಣಗೇರಿ, ಚಂಬೆಬೆಳ್ಳೂರು, ಕಾವಾಡಿ, ಕಣ್ಣಂಗಾಲ, ಬೆಳ್ಳರಿಮಾಡು, ಮೈತಾಡಿ, ಚಾಮಿಯಾಲ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ತಾ. ೧೭ ಮತ್ತು ೧೮ರಂದು ಮರಳಿ ಕಾಡಿಗಟ್ಟುವ ಕಾರ್ಯಾಚರಣೆ ನಡೆಯಲಿದೆ.

ತೋಟದ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸಿ, ಗ್ರಾಮಸ್ಥರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇದ್ದು, ಕಾಡಾನೆ ಕಾರ್ಯಾಚರಣೆಗೆ ಇಲಾಖೆಯೊಂದಿಗೆ ಸಹಕರಿಸಿ, ಕಾರ್ಯಾಚರಣೆ ವೇಳೆ ಸಾರ್ವಜನಿಕರು ಪಟಾಕಿಗಳನ್ನು ಸಿಡಿಸಬಾರದೆÀಂದು ವಲಯ ಅರಣ್ಯಾಧಿಕಾರಿ ಮನವಿ ಮಾಡಿದ್ದಾರೆ.