ಚೆಯ್ಯಂಡಾಣೆ, ಸೆ. ೧೬ : ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯ ಅಂಗವಾಗಿ ಕೊಟ್ಟಮುಡಿ ಮರ್ಕಝುಲ್ ಹಿದಾಯ ವಿದ್ಯಾಸಂಸ್ಥೆ, ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ಜೆ ಎಮ್, ಎಸ್ ವೈ ಎಸ್, ಎಸ್ ಎಸ್ ಎಫ್, ಎಸ್ ಬಿಎಸ್ ಇದರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಮಿಲಾದ್ ಸಂದೇಶ ಜಾಥಾ ನಾಪೋಕ್ಲು ಪಟ್ಟಣದಲ್ಲಿ ನಡೆಯಿತು.
ಹಳೇ ತಾಲೂಕು ಪ್ರಾಥಮಿಕ ಶಾಲಾ ಮೈದಾನದಿಂದ ಆರಂಭಗೊAಡ ಜಾಥಾಕ್ಕೆ ಕೊಡಗು ಜಿಲ್ಲಾ ಜಂಮಿಯ್ಯತುಲ್ ಉಲಮಾ ಕೋಶಾಧಿಕಾರಿ ಉಸೈನ್ ಸಖಾಫಿ ಎಮ್ಮೆಮಾಡು ಚಾಲನೆ ನೀಡಿದರು.
ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್ ಎಸ್ ಎಫ್) ರಾಜ್ಯಾಧ್ಯಕ್ಷ ಹಫೀಜ್ ಸುಫ್ಯಾನ ಸಖಾಫಿ ಮಹಮ್ಮದ್ ಪೈಗಂಬರ್ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆಯಿತ್ತರು.
ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ ಮಾತನಾಡಿ, ಪ್ರವಾದಿಯವರ ಶಾಂತಿ ಸಂದೇಶವನ್ನು ನಾಡಿನ ಸಮಸ್ತ ಜನತೆಗೆ ಸಾರುವ ಸಲುವಾಗಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪಟ್ಟಣದ ಮುಖ್ಯ ಬೀದಿಗಳಲ್ಲಿ ನಡೆದ ಜಾಥಾ ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ಸಮಾಪ್ತಿಗೊಂಡಿತು. ಈ ಸಂದರ್ಭ ಸುನ್ನಿ ಜಂಯ್ಯತುಲ್ ಮುಹಲ್ಲಿಮೀನ್ ನಾಪೋಕ್ಲು ವಲಯ ಅಧ್ಯಕ್ಷ ಅಬ್ದುಲ್ಲಾ ಸಖಾಫಿ, ಮರ್ಕಝ್ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಯೂಸುಫ್ ಹಾಜಿ ಕೊಂಡಗೇರಿ, ಎಸ್. ಜೆ.ಎಂ. ಕಾರ್ಯದರ್ಶಿ ಹಂಸ ರಹ್ಮಾನಿ,ಸುಲೈಮಾನ್ ಸಖಾಫಿ, ಅಶ್ರಫ್ ಅಹ್ಸನಿ ಕಾಮಿಲ್ ಸಖಾಫಿ, ಸಿ.ಕೆ.ಅಹಮದ್ ಹಾಜಿ,ಹಮೀದ್ ಕಬಡಕ್ಕೇರಿ, ಮರ್ಕಝ್ ಪ್ರಾಂಶುಪಾಲ ಸಿಹಾಬುದ್ದೀನ್ ನೂರಾನಿ, ಮರ್ಕಝ್ ಕೋಶಾಧಿಕಾರಿ ಅಬ್ದುಲ್ಲಾ, ಅಬೂಬಕ್ಕರ್ ಸಖಾಫಿ, ಅರಾಫತ್ ನಾಪೋಕ್ಲು, ಸಿ.ಎಚ್. ಅಹಮದ್, ಅದ್ದು ಹಾಜಿ, ಮೊಯ್ದು ಕುಟ್ಟಿ ಹಾಜಿ ಕೊಳಕೇರಿ, ಸೇರಿದಂತೆ ಮತ್ತಿತರ ಪ್ರಮುಖರು, ಸಂಘಟನೆ ಕಾರ್ಯಕರ್ತರು ಹಾಗೂ ಮುಸಲ್ಮಾನ ಸಮುದಾಯದವರು ಪಾಲ್ಗೊಂಡಿದ್ದರು.