ಸಿದ್ದಾಪುರ, ಸೆ. ೧೬: ಜಿಲ್ಲಾ ಕೇಂದ್ರ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಈ ಬಾರಿ ೩೭ ಕಡೆಗಳಲ್ಲಿ ವಿಘ್ನ ನಿವಾರಕನ ಆರಾಧನೆ ನಡೆಯಲಿದೆ. ಸಂಭ್ರಮವಾದ ಗಣೇಶ ಚತುರ್ಥಿಯ ಆಚರಣೆಗಾಗಿ ಈಗಾಗಲೇ ಉತ್ಸವ ಸಮಿತಿಗಳು ಭರದ ಸಿದ್ಧತೆ ಕೈಗೊಂಡಿವೆ.

ಮಹದೇವಪೇಟೆಯ ವಿನಾಯಕ ಯುವಕ ಮಿತ್ರ ಮಂಡಳಿ, ಬನ್ನಿಮಂಟಪದ ಸ್ವಸ್ತಿಕ್ ಯುವ ವೇದಿಕೆ, ಗಣಪತಿ ಬೀದಿಯ ಗಣಪತಿ ಯುವಕ ಸಂಘ, ಕೋಹಿನೂರು ರಸ್ತೆಯ ಹಿಂದೂ ಯುವ ಶಕ್ತಿ, ಹಳೇ ಖಾಸಗಿ ಬಸ್ ನಿಲ್ದಾಣದ ಸಾರ್ವಜನಿಕ ಗಣಪತಿ ಸೇವಾ ಸಮಿತಿ, ಮಲ್ಲಿಕಾರ್ಜುನ ನರಗದ ಜ್ಯೋತಿ ಯುವಕ ಸಂಘ, ವಿದ್ಯಾನಗರದ ಶ್ರೀ ಶಕ್ತಿ ಗಣಪತಿ ದೇವಾಲಯ ಸೇವಾ ಸಮಿತಿ, ಕಾನ್ವೆಂಟ್ ಜಂಕ್ಷನ್‌ನ ಮಹಾಗಣಪತಿ ಸೇವಾ ಸಮಿತಿ, ಚಾಮುಂಡೇಶ್ವರಿ ನಗರದ ಕೇಸರಿ ಯುವಕ ಸಂಘ, ಗೌಳಿಬೀದಿ ಗಣೇಶೋತ್ಸವ ಸಮಿತಿ, ಹೊಸಬಡಾವಣೆಯ ಪ್ರಸನ್ನ ಗಣಪತಿ ಯುವಕ ಸಮಿತಿ, ಕೆಎಸ್‌ಆರ್‌ಟಿಸಿ ಡಿಪೋ, ಜಿ.ಟಿ. ವೃತ್ತದ ಧಾರ್ಮಿಕ್ ಯುವ ವೇದಿಕೆ, ಕನ್ನಂಡಬಾಣೆಯ ದೃಷ್ಟಿ ಗಣಪತಿ ಯುವಕ ಸಂಘ ಹಾಗೂ ಮಹಾ ವಿಷ್ಣು ಯುವ ಸಂಘ, ದೇಚೂರು ವಿಧ್ಯಾವಾರಿದಿ ಯುವಕ ಮಿತ್ರ ಮಂಡಳಿ, ಸಂಪಿಗೆಕಟ್ಟೆ ಯುವಕ ಸಂಘ, ಪೆನ್‌ಷನ್ ಲೇನ್‌ನ ನಾಗಶಿವ ಭಕ್ತ ಯುವಕ ಸಂಘ ಉತ್ಸವ ಸಮಿತಿಗಳು ವಿನಾಯಕನ ಪತ್ರಿಷ್ಠಾಪನೆಗೆ ತಯಾರಿ ನಡೆಸಿವೆ. ಇವುಗಳಲ್ಲದೆ ಭಗವತಿ ನಗರದ ಭಗವತಿ ಯುವಕ ಸಂಘ, ಎಫ್‌ಎಂಸಿ ಕಾಲೇಜು ಹಿಂಭಾಗದ ವಿನಾಯಕ ಬಾಲಕ ಭಕ್ತಮಂಡಳಿ, ಐಟಿಐ ಜಂಕ್ಷನ್‌ನ ಮೈತ್ರಿ

(ಮೊದಲ ಪುಟದಿಂದ) ವಿಘ್ನೇಶ್ವರ ಯುವಕ ಸಂಘ, ಜ್ಯೋತಿನಗರದ ಶಿವಶಕ್ತಿ ಯುವಕ ಸಂಘ, ಮೆಸ್ಕಾಂ ಗಣೇಶೋತ್ಸವ ಸಮಿತಿ, ಪೌರನೌಕರರ ಸಂಘ, ಸುದರ್ಶನ ಬಡಾವಣೆಯ ಮುನೀಶ್ವರ ಯುವಕ ಸಂಘ, ಬಾಹ್ಮಣರ ಬೀದಿಯ ಓಂಕಾರ್ ಯುವ ವೇದಿಕೆ, ರಾಘವೇಂದ್ರ ದೇವಾಲಯ ಗಣಪತಿ ಕಲಾ ನಗರ ಸಮಿತಿ, ಮ್ಯಾನ್ಸ್ ಕಾಂಪೌAಡ್‌ನ ಭದ್ರಕಾಳಿ ದೇವಾಲಯ ಸಮಿತಿ, ಪೊಲೀಸ್ ವಸತಿ ಗೃಹದ ವಿಘ್ನೇಶ್ವರ ಮಿತ್ರ ಮಂಡಳಿ, ಚೌಡೇಶ್ವರಿ ದೇವಾಲಯ, ತ್ಯಾಗರಾಜ ಕಾಲೋನಿಯ ಅಭಿಷ್ಠಪ್ರದ ಗಣಪತಿ ಯುವಕ ಸಂಘ, ಚಾಮುಂಡೇಶ್ವರಿ ನಗರದ ಸಿದ್ಧಿ ವಿನಾಯಕ ಯುವಕ ಮಿತ್ರ ಮಂಡಳಿ, ಪುಟಾಣಿ ನಗರದ ಉದ್ಧವ ವಿನಾಯಕ ಸೇವಾ ಸಮಿತಿ, ಚೈನ್‌ಗೇಟ್‌ನ ವಿದ್ಯಾ ವಿನಾಯಕ ಯುವಕ ಮಂಡಳಿ, ಅಶೋಕಪುರ ಗಣಪತಿ ಸೇವಾ ಸಮಿತಿ, ಶಾಂತಿನಿಕೇತನ ಯುವಕ ಸಂಘ, ಮಹದೇವಪೇಟೆಯ ಗಣೇಶ ಬಾಲಕ ಭಕ್ತ ಮಂಡಳಿ ಈ ಸಮಿತಿಗಳು ಕೂಡ ಗಣೇಶನ ಆರಾಧನೆಗೆ ಸಿದ್ಧತೆ ಕೈಗೊಂಡಿವೆ.

ವಿಸರ್ಜನೆ : ತಾ. ೧೯ರಂದು ೧೮ ಉತ್ಸವ ಸಮಿತಿಗಳ ಗಣಪತಿ ಮೂರ್ತಿಗಳು ವಿಸರ್ಜಿಸಲ್ಪಡಲಿವೆ. ತಾ. ೨೧ರಂದು ೧೧, ತಾ.೨೨ ರಂದು ೧, ತಾ.೨೩ರಂದು ೪, ತಾ. ೨೭ ರಂದು ೧, ಅ.೧ ರಂದು ೧, ಅ.೩ರಂದು ೧ ಉತ್ಸವ ಸಮಿತಿಗಳ ಉತ್ಸವ ಮೂರ್ತಿಗಳ ವಿಸರ್ಜನೆ ನೆರವೇರಲಿವೆ.