ಮಡಿಕೇರಿ, ಸೆ. ೧೬: ಕೇರಳದ ಕಣ್ಣನೂರಿನಲ್ಲಿ ನಡೆದ ದಕ್ಷಿಣ ಭಾರತದ ಮಾಸ್ರ‍್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಹಿರಿಯ ಕ್ರೀಡಾಪಟುಗಳು ಭಾಗವಹಿಸಿ ಅಮೋಘ ಸಾಧನೆ ಮಾಡಿ ವಿವಿಧ ಹಂತದ ಪದಕಗಳನ್ನು ಬಾಚಿಕೊಂಡಿದ್ದಾರೆ. .
೬೫ ವಯೋಮಾನ ಮೇಲ್ಪಟ್ಟ ವಿಭಾಗದ ೮೦೦ ಮೀ, ೧೫೦೦ ಮೀ, ೫ ಸಾವಿರ ಮೀ ಓಟ, ಮಿಕ್ಸೆಡ್ ರಿಲೆ ಓಟದಲ್ಲಿ ನಂದಿನೆರವAಡ ಟಿಪ್ಪು ಬಿದ್ದಪ್ಪ ಚಿನ್ನದ ಪದಕ, ೫೫ ವಯೋಮಾನ ಮೇಲ್ಪಟ್ಟ ೧೫೦೦ ಮೀ, ೫ ಸಾವಿರ ಮೀ, ಮಿಕ್ಸೆಡ್ ರಿಲೆ ಓಟ, ಟ್ರಿಪಲ್ ಜಂಪ್ ವಿಭಾಗದಲ್ಲಿ ಸೂದನ ಡಾಲಿ ೩ ಚಿನ್ನ, ೧ ಕಂಚು, ೪೫ ವಯೋಮಾನ ಮೇಲ್ಪಟ್ಟ ೧೫೦೦ ಮೀ, ೫ ಸಾವಿರ ಮೀಟ, ೮೦೦ ಮೀ, ಮಿಕ್ಸೆಡ್ ರಿಲೇ ಓಟದಲ್ಲಿ ಟಿ.ಹೆಚ್. ಗಣೇಶ್ ೨ ಚಿನ್ನ, ತಲಾ ೧ ಬೆಳ್ಳಿ ಹಾಗೂ ಕಂಚು, ೩೦ ವಯೋಮಾನ ಮೇಲ್ಪಟ್ಟ ೪೦೦ ಮೀ, ೮೦೦ ಮೀ, ೧೫೦೦ ಮೀ ಓಟ, ಮಿಕ್ಸೆಡ್ ರಿಲೆಯಲ್ಲಿ ಪ್ರಸಾದ್ ಎಳ್ಮೆಕಾಲು ತಲಾ ೨ ಚಿನ್ನ, ಬೆಳ್ಳಿ, ೮೦ ವಯೋಮಾನ ಮೇಲ್ಪಟ್ಟ ವಿಭಾಗದಲ್ಲಿ ೨೦೦ ಮೀ, ೪೦೦ ಮೀ, ೧೦೦ ಮೀ ಓಟದಲ್ಲಿ ಪೆಮ್ಮಂಡ ಅಪ್ಪಯ್ಯ ೨ ಚಿನ್ನ, ೧ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
೫೫ ವಯೋಮಾನ ಮೇಲ್ಪಟ್ಟ ೮೦೦ ಮೀ, ೧೫೦೦ ಮೀ ಓಟದಲ್ಲಿ ತಲಾ ೧ ಚಿನ್ನ ಹಾಗೂ ಬೆಳ್ಳಿಯನ್ನು ಅಮೆ ಜನಾರ್ಧನ್, ೧೧೦ ಮೀ ಹರ್ಡಲ್ಸ್ನಲ್ಲಿ ಪಟ್ರಪಂಡ ಚಂಗಪ್ಪ ಸೋಮೇಶ್ ೧ ಬೆಳ್ಳಿ, ಭಾರದ ಗುಂಡು ಎಸೆತದಲ್ಲಿ ಬಲ್ಯಮಿದೇರಿರ ಪ್ರಕಾಶ್ ೧ ಕಂಚು, ೪೫ ವಯೋಮಾನ ಮೇಲ್ಪಟ್ಟ ೧೦೦, ೨೦೦ ಮೀ ಓಟದಲ್ಲಿ ಕಟ್ಟೆಮನೆ ಹನಿ ಸೋಮಯ್ಯ ೨ ಬೆಳ್ಳಿ, ೫೦ ವಯೋಮಾನ ಮೇಲ್ಪಟ್ಟ ಡಿಸ್ಕಸ್ ಥ್ರೋ, ಜಾವಲಿನ್ ಥ್ರೋ, ೧೦೦ ಮೀ ಓಟದಲ್ಲಿ ಕೆ.ವಿ. ರಾಮಕೃಷ್ಣ ೨ ಬೆಳ್ಳಿ, ೧ ಕಂಚು, ೧೫೦೦ ಮೀ ಓಟದಲ್ಲಿ ಕೇಚಮಾಡ ವಿಫು ತಮ್ಮಯ್ಯ ೧ ಚಿನ್ನ, ೫ ಕಿ.ಮೀ. ನಡಿಗೆಯಲ್ಲಿ ಚಕ್ಕೆರ ಚಂದ್ರಪ್ರಕಾಶ್ ೧ ಬೆಳ್ಳಿ, ೫೦ ಮೇಲ್ಪಟ್ಟ ವೇಗ ನಡಿಗೆಯಲ್ಲಿ ಇಟ್ಟಿರ ಪೊನ್ನಣ್ಣ ೧ ಕಂಚು ಗಳಿಸಿಕೊಂಡಿದ್ದಾರೆ.
೫೫ ವಯೋಮಾನ ಮೇಲ್ಪಟ್ಟ ೪೦೦ ಮೀ, ೧೦೦ ಮೀ, ೨೦೦ ಮೀ ಓಟ, ಮಿಕ್ಸೆಡ್ ರಿಲೇಯಲ್ಲಿ ವಸಂತಿ ಬಂಗಾರುಮನೆ ೨ ಚಿನ್ನ, ೨ ಬೆಳ್ಳಿ, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, ಭಾರದ ಗುಂಡು ಎಸೆತದಲ್ಲಿ ಪಾಸುರ ಇಂದಿರಾ ಮುತ್ತಣ್ಣ ೨ ಬೆಳ್ಳಿ, ೧ ಕಂಚು, ೪೫ ಮೇಲ್ಪಟ್ಟ ೫ ಕಿ.ಮೀ.ನಡಿಗೆ, ೧೫೦೦ ಮೀಟರ್ ಓಟದಲ್ಲಿ ಮೀದೇರಿರ ಕವಿತಾ ರಾಮು ತಲಾ ೧ ಚಿನ್ನ, ಬೆಳ್ಳಿ, ೩೫ ಮೇಲ್ಪಟ್ಟ ಜಾವಲಿನ್ ಥ್ರೋ, ಹ್ಯಾಮರ್ ಥ್ರೋ, ಭಾರದ ಗುಂಡು ಎಸೆತದಲ್ಲಿ ಮನೆಯಪಂಡ ದೇಚಮ್ಮ ಕಾಳಪ್ಪ ೩ ಬೆಳ್ಳಿ, ೬೦ ಮೇಲ್ಪಟ್ಟ ಭಾರದ ಗುಂಡು ಎಸೆತ, ಡಿಸ್ಕಸ್ ಥ್ರೋ, ಜಾವಲಿನ್ ಥ್ರೋನಲ್ಲಿ ಚೇಮಿರ ಸೀತಮ್ಮ ೨ ಚಿನ್ನ, ೧ ಕಂಚು ತಮ್ಮದಾಗಿಸಿ ಕೊಂಡು ಸಾಧನೆ ಮಾಡಿದ್ದಾರೆ.