ಮಡಿಕೇರಿ, ಸೆ. ೧೬ : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ೯ ಪ್ರಧಾನ ಹಕ್ಕೊತ್ತಾಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಆರಂಭಿಸಿರುವ ಪಾದಯಾತ್ರೆ ಎರಡನೇ ದಿನವಾದ ಇಂದು ಹೊದ್ದೂರು-ಬೆಟ್ಟಗೇರಿ, ಕಗ್ಗೋಡ್ಲು ನಾಡ್ ಮಂದ್-ಹಾಕ ತ್ತೂರು ಮತ್ತು ಮಡಿಕೇರಿ ನಗರದ ಮಿಡ್ಲ್ ಗ್ರೌಂಡ್ ಮಂದ್‌ನಲ್ಲಿ ನಡೆಯಿತು.
ವಿವಿಧೆಡೆ ಕೊಡವ ಜನಜಾಗೃತಿ ಭಾಷಣ ಮಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ದೇಶದ ಸಂವಿಧಾನದಡಿ ನ್ಯಾಯಯುತ ಹಕ್ಕುಗಳನ್ನು ಪಡೆಯಲು ಅತ್ಯಂತ ಸೂಕ್ಷö್ಮ ಜನಾಂಗವಾದ ಕೊಡವರು ಅರ್ಹರಾಗಿದ್ದಾರೆ. ಹಕ್ಕುಗಳ ಬಗ್ಗೆ ಕೊಡವರು ಜಾಗೃತರಾಗಬೇಕು ಎಂದು ಕರೆ ನೀಡಿದರು.
ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಮೂಲಕ ಕೊಡವರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸಿಎನ್‌ಸಿಯ ಹೋರಾಟಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ವಾಂಚೀರ ಉಮಾ ಅಪ್ಪಯ್ಯ, ಚೌರಿರ ರತಿ ದೇವಯ್ಯ, ಚೌರಿರ ಕಾವೇರಿ ಪೂವಯ್ಯ, ಚೌರಿರ ಸುಧ ಜವಾಹರ್, ಚೌರಿರ ರೋಹಿಣಿ ಪ್ರಕಾಶ್, ಚೌರಿರ ಸಬಿತ, ಮಂಡೇಪAಡ ಜಾಜಿ ಅಪ್ಪಯ್ಯ, ಚೌರಿರ ಶಲಿನ ಜಗತ್, ಅಮ್ಮಾಟಂಡ ದೇಚಮ್ಮ, ಮಂಞÂರ ವೇಣು ಕುಮಾರ್, ಕೂಪದಿರ ಪುಷ್ಪ, ರಾಮು ಅಮ್ಮಾಟಂಡ, ಪಾರ್ವತಿ ಅಮ್ಮಾಟಂಡ, ಸರಸ್ವತಿ ಅಮ್ಮಾಟಂಡ, ಅಮ್ಮಾಟಂಡ ರತಿ, ಬಿದ್ದಂಡ ಗಂಗಮ್ಮ, ಮಂಞÂರ ಶಿಲ್ಪ ಕುಟ್ಟಪ್ಪ, ಅಮ್ಮಾಟಂಡ ಜೋತಿ ಬೋಪಣ್ಣ, ಅಮ್ಮಾಟಂಡ ಝೀನ ಮೇದಪ್ಪ, ಅಮ್ಮಾಟಂಡ ವಿಂದ್ಯಾ ದೇವಯ್ಯ ಮತ್ತಿತರರು ಭಾಗವಹಿಸಿದ್ದರು.
ತಾ. ೧೭ ರಂದು (ಇಂದು) ಬೆಳಿಗ್ಗೆ ೯.೩೦ ಗಂಟೆಗೆ ಕಾಲೂರು, ಮಧ್ಯಾಹ್ನ ೧೨ ಗಂಟೆಗೆ ಮುಕ್ಕೋಡ್ಲುವಿನಲ್ಲಿ ಪಾದಯಾತ್ರೆ ನಡೆಯುತ್ತದೆ.