ಸುಂಟಿಕೊಪ್ಪ, ಸೆ. ೧೭: ಇಲ್ಲಿನ ಶ್ರೀ ಗೌರಿ ಗಣೇಶೋತ್ಸವ ಸಮಿತಿಯ ವತಿಯಿಂದ ೫೯ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವ ನಡೆಯಲಿದೆ.

ತಾ.೧೮ ರ ಸೋಮವಾರದಿಂದ ತಾ.೨೨ರ ಬುಧವಾರದವರೆಗೆ ಸುಂಟಿಕೊಪ್ಪದ ಶ್ರೀ ಕೋದಂಡ ರಾಮಚಂದ್ರ ಮಂದಿರದಲ್ಲಿ ನಡೆಯಲಿದೆ. ಶ್ರೀ ಕೋದಂಡ ರಾಮಚಂದ್ರ ಮಂದಿರದ ಆವರಣವನ್ನು ವಿದ್ಯುತ್ ದೀಪ ಹಾಗೂ ಕೇಸರಿ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ.

೧೮ರ ಸೋಮವಾರ ಬೆಳಿಗ್ಗೆ ೮ ಗಂಟೆಗೆ ಪಟ್ಟೆಮನೆ ಗೌರಮ್ಮ ಬಾವಿಯಿಂದ ಗಂಗಾಜಲದೊAದಿಗೆ ಶ್ರೀ ಗೌರಿಯನ್ನು ತಂದು ಪ್ರತಿಷ್ಠಾಪನೆ ಮಾಡಲಾಗುವುದು ಮಂಗಳವಾರದAದು ಗಣಪತಿ ಹೋಮದ ನಂತರ ಶ್ರೀ ಗಣಪತಿಯನ್ನು ಪ್ರತಿಷ್ಠಾಪಿಸಿ ಸೆ.೨೭ ರ ಬುಧವಾರದಂದು ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದ ಮೆರವಣಿಗೆಯೊಂದಿಗೆ ವೈ.ಎಂ. ಉಲ್ಲಾಸ್ ಮತ್ತು ಕರುಂಬಯ್ಯನವರ ಕೆರೆಯಲ್ಲಿ ವಿಸರ್ಜಿಸಲಾಗುವುದೆಂದು ಸಮಿತಿಯ ಅಧ್ಯಕ್ಷ ವಿಘ್ನೇಶ್ ತಿಳಿಸಿದ್ದಾರೆ. ಪ್ರತಿನಿತ್ಯ ವಿಶೇಷ ಪೂಜೆಯೊಂದಿಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.

ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಪೊವ್ವದಿ ದೇವಾಲಯದಲ್ಲಿ ಗಣೇಶ ಚರ್ತುಥಿಯನ್ನು ಸೆ.೧೯ ರ ಮಂಗಳವಾರದAದು ಆಚರಿಸಲಾಗುವುದು. ಗಣಪತಿ ಹೋಮದೊಂದಿಗೆ ಗಣಪತಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

ಟ ಮಾದಾಪುರ ರಸ್ತೆಯಲ್ಲಿರುವ ವೃಕ್ಷೋದ್ಭವ ಶಕ್ತಿ ಗಣಪತಿ ದೇವಸ್ಥಾನದಲ್ಲಿ ತಾ. ೧೮ರ ಸೋಮವಾರ ಬೆಳಿಗ್ಗೆ ೧೦.೦೦ ಗಂಟೆಗೆ ಗೌರಿ ಪ್ರತಿಷ್ಠಾಪನೆ ಮತ್ತು ಗಣೇಶ ಚತುರ್ಥಿ ಪ್ರಯುಕ್ತ ೧೧.೩೦ ಗಂಟೆಗೆ ಗಣಪತಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಅಂದು ಸಂಜೆ ೪ ಗಂಟೆಗೆ ಪ್ರತಿಷ್ಠಾಪಿಸಿದ ಗೌರಿ ಮೂರ್ತಿಯನ್ನು ಹರದೂರು ಹೊಳೆಯಲ್ಲಿ ವಿಸರ್ಜಿಸಲಾಗುವುದು ಎಂದು ದೇವಾಲಯ ಉತ್ಸವ ಸಮಿತಿ ಅಧ್ಯಕ್ಷ ರಮೇಶ್ ತಿಳಿಸಿದ್ದಾರೆ.

ಟ ಕೆದಕಲ್ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳನೇ ಮೈಲು ಬಾಲಕರ ಭಕ್ತ ಮಂಡಳಿ( ಟೀಂ ಫ್ರೆಂಡ್ಸ್) ವತಿಯಿಂದ ೧೧ ನೇ ವರ್ಷದ ಗೌರಿ ಗಣೇಶೋತ್ಸವವು ಸೆ.೧೮ ರಂದು ಮಹಾದೇವ ಈಶ್ವರ ದೇವಾಲಯದಲ್ಲಿ ಆಚರಿಸಲಾಗುವುದು.

ಸೋಮವಾರ ಬೆಳಿಗ್ಗೆ ೮.೩೦ ಕ್ಕೆ ಗಣಪತಿ ಹೋಮದೊಂದಿಗೆ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ. ವಿಶೇಷ ಪೂಜೆ, ಮಹಾಪೂಜೆಯ ನಂತರ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.

ಮಧ್ಯಾಹ್ನ ೩ ಗಂಟೆಯ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ಬಳಿಕ ಅಲಂಕೃತ ಮಂಟಪದಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಯ ಮೆರವಣಿಗೆಯ ನಂತರ ಕೆರೆಯಲ್ಲಿ ವಿಸರ್ಜಿಸಲಾಗುವುದು.

ಕೆದಕಲ್ ಗ್ರಾಮ ಪಂಚಾಯಿತಿಯ ಹೊರೂರು ಮಠದ ಸಾರ್ವಜನಿಕ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಸೆ.೧೯ ರ ಮಂಗಳವಾರ ಬೆಳಿಗ್ಗೆ ೭ ಗಂಟೆಗೆ ನಡೆಯುವ ಗಣಹೋಮದ ನಂತರ ಗೌರಿ ಗಣೇಶ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ.

ಅಂದು ಬೆಳಿಗ್ಗೆ ಸ್ಥಳ ಶುದ್ಧೀಕರಣ, ಬೆಳಿಗ್ಗೆ ೭ಕ್ಕೆ ಗಣಹೋಮ, ೮.೩೦ಕ್ಕೆ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ, ೯ ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.

ತಾ.೨೧ ರಂದು ಬೆಳಿಗ್ಗೆ ೧೧ ಕ್ಕೆ ವಿಶೇಷ ಪೂಜೆ, ೧೨.೩೦ ಕ್ಕೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಅಂದು ಸಂಜೆ ೪ ಗಂಟೆಯ ನಂತರ ವಿದ್ಯುತ್ ದೀಪ ಅಲಂಕೃತ ಭವ್ಯ ಮಂಟಪದಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನಡೆದು ನಂತರ ಸ್ಥಳೀಯ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟ ಮರಗೋಡು: ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ೨೮ನೇ ವರ್ಷದ ಗೌರಿ ಗಣೇಶೋತ್ಸವ ಆಚರಣೆ ತಾ.೧೯ರಂದು ದೇವಾಲಯದಲ್ಲಿ ನಡೆಯಲಿದೆ.

ಬೆಳಿಗ್ಗೆ ೭.೩೦ಕ್ಕೆ ಗಣಪತಿ ಹೋಮ, ೯ಕ್ಕೆ ನಿತ್ಯ ಪೂಜೆ, ೧೦.೪೦ಕ್ಕೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ, ೧೨.೩೦ಕ್ಕೆ ಮಹಾಪೂಜೆ, ಪ್ರಸಾದ ವಿನಿಯೋಗ ಮಧ್ಯಾಹ್ನ ೨ ಗಂಟೆಯಿAದ ಸಂಜೆ ೪.೪೫ರ ತನಕ ಪೂಜಾ ಕಾರ್ಯಕ್ರಮ, ಸಂಜೆ ೫.೩೦ಕ್ಕೆ ಮಹಾಪೂಜೆ, ಪ್ರಸಾದ ವಿನಿಯೋಗ ನಡೆದು ನಂತರ ಅಲಂಕೃತ ಮಂಟಪದಲ್ಲಿ ಗಣಪತಿ ಮೂರ್ತಿ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಟ ಕೂಡಿಗೆ: ಕೂಡಿಗೆ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ, ಹಾಗೂ ಶ್ರೀ ದಂಡಿನಮ್ಮ , ಬಸವೇಶ್ವರ ಸೇವಾ ಸಮಿತಿಯ ವತಿಯಿಂದ ಕೂಡಿಗೆ ಸರ್ಕಲ್ ಬಳಿ ಇರುವ ಗಣಪತಿ ಪೆಂಡಾಲ್ ಆವರಣದಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಮೂರು ದಿನಗಳವರೆಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ. ಗಿರೀಶ್ ತಿಳಿಸಿದ್ದಾರೆ.

ಮೂರು ದಿನಗಳ ಹಬ್ಬ ಆಚರಣೆಯ ಪ್ರಯುಕ್ತವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಣಪತಿ ಪೆಂಡಾಲ್ ಸಭಾಂಗಣದಲ್ಲಿ ನಡೆಯಲಿವೆ ಎಂದು ಸಮಿತಿಯ ಕಾರ್ಯದರ್ಶಿ ಗುರುಪಾದಸ್ವಾಮಿ ಆರಾಧ್ಯ ತಿಳಿಸಿದ್ದಾರೆ.

ಟ ಅಮ್ಮತ್ತಿ : ಕಾರ್ಮಾಡುವಿನ ಗಜಾನನ ಗೆಳೆಯರ ಬಳಗದ ವತಿಯಿಂದ ಪ್ರಥಮ ವರ್ಷದ ಗೌರಿ ಗಣೇಶ ಹಬ್ಬವನ್ನು ಅಮ್ಮತ್ತಿ ಕಾರ್ಮಾಡುವಿನಲ್ಲಿ ಆಚರಿಸಲಾಗುವುದೆಂದು ಸಮಿತಿ ಪ್ರಮುಖರು ತಿಳಿಸಿದ್ದಾರೆ.

ಅಮ್ಮತ್ತಿಯ ಮಾರುಕಟ್ಟೆ ಬಳಿಯಲ್ಲಿ ನಿರ್ಮಿಸಲಾಗುವ ಭವ್ಯ ಮಂಟಪದಲ್ಲಿ ಗಣೇಶ ಮೂರ್ತಿಯನ್ನು ತಾ.೧೯ ರಂದು ಪ್ರತಿಷ್ಠಾಪಿಸಿ ತಾ.೩೦ರಂದು ವಿಸರ್ಜನೆ ಮಾಡಲಾಗುತ್ತದೆ. ಪ್ರತಿಷ್ಠಾಪನೆಯ ದಿನದಿಂದ ವಿಸರ್ಜನೆಯವರೆಗೆ ಗಣೇಶೋತ್ಸವದ ಅಂಗವಾಗಿ ರಾತ್ರಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ, ಮ್ಯಾಜಿಕ್ ಶೋ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಬಿ.ಆರ್. ಮಂಜುನಾಥ್ ತಿಳಿಸಿದ್ದಾರೆ.