ಮಡಿಕೇರಿ, ಸೆ. ೧೭: ಎಂಎಸ್‌ಎAಇಡಿ ೨೦೦೬ ಕಾಯ್ದೆಯಡಿ ಯಾವುದೇ ಕೈಗಾರಿಕಾ, ಸೇವಾ ಚಟುವಟಿಕೆ ಘಟಕಗಳು ತಮ್ಮ ಉತ್ಪನ್ನ, ಸೇವೆಗಳನ್ನು ಮಾರಾಟ ಮಾಡಿದಲ್ಲಿ, ಖರೀದಿದಾರರು ಒಪ್ಪಂದದ ನಿಗದಿತ ಸಮಯದೊಳಗೆ ಮಾರಾಟಗಾರರಿಗೆ ಹಣವನ್ನು ಪಾವತಿ ಮಾಡದಿದ್ದಲ್ಲಿ, ಈ ಖರೀದಿದಾರರು ಅಸಲು ಮತ್ತು ಬಡ್ಡಿ (೩ ಪಟ್ಟು) ಮೊತ್ತವನ್ನು ಪಾವತಿಸಬೇಕಿದೆ.
ಆದ್ದರಿಂದ ಯಾವುದೇ ಕೈಗಾರಿಕಾ, ಸೇವಾ ಘಟಕಗಳು ಈ ಪ್ರಯೋಜನ ಪಡೆಯಲು ಎಂಎಸ್‌ಇಎಫ್ ಅಡಿ ಕೇಸ್‌ನ್ನು ದಾಖಲು ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ ಇಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.