ಮಡಿಕೇರಿ, ಸೆ. ೧೬ : ಬೆಂಗಳೂರು - ಮೈಸೂರು ರಾಷ್ಟಿçÃಯ ಹೆದ್ದಾರಿಯಲ್ಲಿ ಕಳೆದ ಹಲವು ಸಮಯಗಳಿಂದ ಆಗಿಂದಾಗ್ಗೆ ದರೋಡೆ ಪ್ರಕರಣಗಳು ವರದಿಯಾಗು ತ್ತಿರುವುದು ಕೊಡಗಿನ ಜನರಲ್ಲಿ ಆತಂಕ ಸೃಷ್ಟಿಸಿದೆ. ಅಪರಿಚಿತರ ಈ ದುಷ್ಕೃತ್ಯಕ್ಕೆ ಕೊಡಗಿನ ಹಲವರೂ ಸಿಕ್ಕಿಹಾಕಿಕೊಂಡಿದ್ದು, ಹಣ - ಚಿನ್ನಾಭರಣ ಗಳನ್ನು ಕಳೆದುಕೊಂಡಿದ್ದಾರೆ. ಎಕ್ಸ್ಪ್ರೆಸ್‌ವೇಯಲ್ಲಿ ರಾತ್ರಿ ವೇಳೆ ಈ ಘಟನೆ ಹೆಚ್ಚುತ್ತಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಪ್ರಯಾಣಿಸುವುದೇ ಅಪಾಯಕಾರಿ ಎಂಬ ಆತಂಕ ಎದುರಾಗುತ್ತಿದೆ. ಕಳೆದ ಕೆಲವು ಸಮಯದಲ್ಲಿ ಇಂತಹ ಐದಾರು ಪ್ರಕರÀಣಗಳಲ್ಲಿ ಕೊಡಗಿನವರೇ ಬಲಿಪಶುಗಳಾಗಿದ್ದಾರೆ. ಕೆಲವು ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿದ್ದು ಇನ್ನೂ ಹಲವು ಪ್ರಕರಣಗಳ ಬಗ್ಗೆ ದರೋಡೆಗೆ ಒಳಗಾಗಿ ಪಾರಾಗಿ ಬಂದವರು ಪೊಲೀಸರಿಗೆ ದೂರನ್ನೇ ನೀಡದೆ ಬದುಕಿ ಬಂದಿದ್ದೇ ಹೆಚ್ಚು ಎಂಬAತೆ ಮೌನಕ್ಕೆ ಶರಣಾಗಿದ್ದಾರೆ ಎಂದು ಮಾತು ಕೇಳಿಬಂದಿದೆ.

ಇತ್ತೀಚೆಗಷ್ಟೇ ಭಾಗಮಂಡಲ ಮೂಲದವರಾದ ನಿವೃತ್ತ ಎ.ಎಸ್.ಐ.ಯೊಬ್ಬರು ಅಪರಿಚಿತರ ಸಂಚಿಗೆ ಸಿಲುಕಿ ರೂ. ೪೦ ಸಾವಿರ ಹಣ ಕಳೆದುಕೊಂಡಿದ್ದಾರೆ. ಇದೀಗ ಮೊನ್ನೆ ಮೊನ್ನೆಯಷ್ಟೆ ಟಿ.ಶೆಟ್ಟಿಗೇರಿಯವರಾದ ನವದಂಪತಿಗಳು ಕೊಡಗಿನತ್ತ ಆಗಮಿಸುತ್ತಿದ್ದಾಗ ಪೊಲೀಸರ ಹೆಸರಿನಲ್ಲಿ ಬಂದ ಆಗಂತುಕರು ರೂ. ೨ ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ಕಡಂಗ ಮೂಲದ ವ್ಯಕ್ತಿಯೊಬ್ಬರು ಇನೋವಾ ಕಾರಿನಲ್ಲಿ ಬರುತ್ತಿದ್ದ ಸಂದರ್ಭ ಇವರನ್ನೂ ಬೆದರಿಸಿ ಚಿನ್ನಾಭರಣ ಅಪಹರಿಸಲಾಗಿದೆ.

ಕೊಡಗಿನವರು ಮಾತ್ರವಲ್ಲದೆ ಇನ್ನಷ್ಟು ಜನರೂ ಈ ಹೆದ್ದಾರಿಯಲ್ಲಿ ದುಷ್ಕರ್ಮಿಗಳ ಕೃತ್ಯಕ್ಕೆ ಸಿಲುಕಿ ಹಣ, ಆಭರಣ ಕಳೆದುಕೊಳ್ಳುತ್ತಿರುವ ಘಟನೆಗಳು ಆಗಿಂದಾಗ್ಗೆ ವರದಿಯಾಗುತ್ತಿವೆ. ಕೆಲವು ಮೂಲಗಳ ಪ್ರಕಾರ ಬೆಂಗಳೂರು ಕಡೆಗೆ ಹಾಗೂ ಬೆಂಗಳೂರಿನಿAದ ಕೊಡಗಿನತ್ತ ಬರುವ ವಾಹನಗಳನ್ನು ‘ಟಾರ್ಗೆಟ್’ ಮಾಡಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ಕೊಡಗಿನ ಹಲವಷ್ಟು ಯುವಕ-ಯುವತಿಯರು, ಜನರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ವಾರಾಂತ್ಯ ಅಥವಾ ರಜಾ ದಿನಗಳಲ್ಲಿ ಜಿಲ್ಲೆಗೆ ಆಗಮಿಸುವುದೂ - ಹಿಂತಿರುಗುವುದೂ ಹೆಚ್ಚಾಗಿರುತ್ತದೆ. ಪ್ರಯಾಣದ ವೇಳೆ ಪ್ರಯಾಣಿಕರು ಇದೀಗ ಹೆಚ್ಚು ಜಾಗ್ರತೆ ವಹಿಸಬೇಕಾಗಿದೆ. ಎಕ್ಸ್ಪ್ರೆಸ್‌ವೇನಲ್ಲಿ ದ್ವಿಚಕ್ರ ವಾಹನದಲ್ಲೇ ಅವಕಾಶವಿಲ್ಲವಾದರೂ ಕೆಲವು ಕೃತ್ಯಗಳನ್ನು ದ್ವಿಚಕ್ರ ವಾಹನದಲ್ಲೇ ಆಗಮಿಸಿರುವ ಆಗಂತುಕರು ನಡೆಸಿದ್ದಾರೆ ಎಂಬದೂ ಗಂಭೀರ ವಿಚಾರವಾಗಿದೆ.

ಈ ಬಗ್ಗೆ ಜಿಲ್ಲೆಯ ಸಂಸದರು, ಶಾಸಕರು, ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ ಇಂತಹ ದುಷ್ಕೃತ್ಯಗಳು ನಡೆಯದಂತೆ ಇಲಾಖೆ ಕಠಿಣ ಕ್ರಮ ವಹಿಸಲು ಆಗ್ರಹಿಸಬೇಕಿದೆ ಎಂಬದಾಗಿ ಜಿಲ್ಲೆಯ ಹಲವರು ಮನವಿ ಮಾಡಿದ್ದಾರೆ. ಪೊಲೀಸ್ ಇಲಾಖೆಯೂ ಹೆದ್ದಾರಿ ರಸ್ತೆಯಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಿ ಜನರು ದರೋಡೆಗೆ ಒಳಗಾಗುವುದನ್ನು ತಡೆಹಿಡಿಯಬೇಕಾಗಿದೆ ಎಂದು ಜನರು ಒತ್ತಾಯಿಸಿದ್ದಾರೆ.

ಪೊಲೀಸ್ ಉನ್ನತಾಧಿಕಾರಿಗಳ ಜತೆ ಚರ್ಚೆ

ದರೋಡೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದ್ದು ಇದು ಗಂಭೀರ ವಿಚಾರವಾಗಿದೆ. ಈ ಬಗ್ಗೆ ರಾಜ್ಯ ಪೊಲೀಸ್ ಉನ್ನತಾಧಿಕಾರಿಗಳ ಜತೆ ಚರ್ಚಿಸಲಾಗುವುದು, ಸೂಕ್ತ ತನಿಖೆ ಹಾಗೂ ಮುಂದೆ ಇಂತಹ ಕೃತ್ಯಕ್ಕೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲು ಸರಕಾರವೂ ಮುಂದಾಗಲಿದೆ ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.