ಮಡಿಕೇರಿ, ಅ. ೨೫ : ವಿಜಯದಶಮಿಯ ದಿನವಾದ ನಿನ್ನೆ ರಾತ್ರಿ ಮಂಜಿನ ನಗರಿಯಲ್ಲಿ ದೇವಲೋಕವೇ ಸೃಷ್ಟಿಯಾಗಿತ್ತು. ನಗರ ವ್ಯಾಪ್ತಿಯಲ್ಲಿ ನಡೆದ ದಶಮಂಟಪಗಳ ಶೋಭಾಯಾತ್ರೆ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತು. ಒಂದಕ್ಕೊAದು ವಿಭಿನ್ನ ರೀತಿಯಲ್ಲಿ ಬೇರೆ ಬೇರೆ ಕಥಾ ಸಾರಾಂಶಗಳನ್ನೊಳಗೊAಡು ತಯಾರಾಗಿದ್ದ ಮಂಟಪಗಳ ಶೋಭಾಯಾತ್ರೆಯಲ್ಲಿ ಕೋದಂಡ ರಾಮ ದೇವಾಲಯ ಪ್ರಥಮ, ಕೋಟೆ ಮಾರಿಯಮ್ಮ ಹಾಗೂ ಕೋಟೆ ಗಣಪತಿ ದೇವಾಲಯ ದ್ವಿತೀಯ, ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ತೃತೀಯ ಬಹುಮಾನ ಗಳಿಸಿತು.
ಕೋದಂಡ ರಾಮ ಮಂಟಪದ ಮಣಿಕಂಠನಿAದ ಮಹಿಷಿಯ ಶಾಪ ವಿಮೋಚನೆ ಕಥಾ ಸಾರಾಂಶ ಮೊದಲ ಬಹುಮಾನ ಪಡೆದರೆ, ಕೋಟೆ ಮಾರಿಯಮ್ಮ ದೇವಾಲಯದ ಪಂಚಮುಖಿ ಆಂಜನೇಯನಿAದ ಅಹಿರಾವಣ-ಮಹಿರಾವಣ ವಧೆ ಹಾಗೂ ಕೋಟೆ ಗಣಪತಿ ದೇವಾಲಯದ ಮಹಾ ಗಣಪತಿಯಿಂದ ಶತ ಮಹಿಷಿಯ ಸಂಹಾರ ಕಥಾ ಸಾರಾಂಶಗಳು ಎರಡನೇ ಬಹುಮಾನಕ್ಕೆ ಭಾಜನವಾಯಿತು. ಕರವಲೆ ಭಗವತಿ ದೇವಾಲಯದ ಉಗ್ರ ನರಸಿಂಹನಿAದ ಹಿರಣ್ಯಕಶ್ಯಪು ಸಂಹಾರ ಕಥಾ ಸಾರಾಂಶ ಮೂರನೇ ಬಹುಮಾನ ಗಳಿಸಿತು. ಮೊದಲ ಬಹುಮಾನ ಪಡೆದ ಮಂಟಪಕ್ಕೆ ೨೪ ಗ್ರಾಂ, ದ್ವಿತೀಯ ಬಹುಮಾನ ಪಡೆದ ಮಂಟಪಕ್ಕೆ ೨೦ ಗ್ರಾಂ, ತೃತೀಯ ಬಹುಮಾನ ಪಡೆದ ಮಂಟಪಕ್ಕೆ ೧೬ ಗ್ರಾಂ ಚಿನ್ನದ ನಾಣ್ಯ ಒಳಗೊಂಡ ಫಲಕವನ್ನು ಬಹುಮಾನವಾಗಿ ವಿತರಿಸಲಾಯಿತು. ಇದರೊಂದಿಗೆ ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಎಸ್.ಸಿ. ಸುಬ್ರಮಣಿ ಸ್ಮರಣಾರ್ಥ ಅವರ ಕುಟುಂಬದವರು ನೀಡಿದ ಮೊದಲ ಬಹುಮಾನ ಪಡೆದ ಮಂಟಪಕ್ಕೆ ರೂ. ೧೦ ಸಾವಿರ ನಗದು, ಎರಡನೇ ಬಹುಮಾನ ಪಡೆದ ಮಂಟಪಕ್ಕೆ ರೂ. ೭ ಸಾವಿರ ನಗದು, ಮೂರನೇ ಬಹುಮಾನ ಪಡೆದ ಮಂಟಪಕ್ಕೆ ರೂ. ೫ ಸಾವಿರ ನಗದು ಬಹುಮಾನ ವಿತರಿಸಲಾಯಿತು. ಉಳಿದ ಮಂಟಪಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ವೈಕುಂಠ ದರ್ಶನ ಕಥಾ ಸಾರಾಂಶದೊAದಿಗೆ ಪೇಟೆ ಶ್ರೀ ರಾಮಮಂದಿರ ದೇವಾಲಯ, ವಿಷ್ಣುವಿನಿಂದ ಮಧು ಕೈಟಬರ ಸಂಹಾರ ಕಥಾ ಸಾರಾಂಶದೊAದಿಗೆ ದೇಚೂರು ಶ್ರೀ ರಾಮಮಂದಿರ ದೇವಾಲಯ, ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಕಥಾ ಸಾರಾಂಶದೊAದಿಗೆ ಶ್ರೀ ಚೌಡೇಶ್ವರಿ ದೇವಾಲಯ, ಶಿವನಿಂದ ತ್ರಿಪುರಾಸುರರ ವಧೆ ಕಥಾ ಸಾರಾಂಶದೊAದಿಗೆ ಶ್ರೀ ಕಂಚಿಕಾಮಾಕ್ಷಿ ದೇವಾಲಯ, ಪರಶಿವನಿಂದ ಜಲಾಂಧರನ ಸಂಹಾರ ಕಥಾ ಸಾರಾಂಶದೊAದಿಗೆ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು. ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಶ್ರೀ ದುರ್ಗಾ ಸಪ್ತಶತಿ ಪುರಾಣದ ಕದಂಬ ಕೌಶಿಕೆ ಕಥಾ ಸಾರಾಂಶದೊAದಿಗೆ ಮಂಟಪವನ್ನು ಸಿದ್ಧಪಡಿಸಿತ್ತಾದರೂ ಪ್ರಭಾವಳಿ ಸಹಿತ ಟ್ರಾö್ಯಕ್ಟರ್ ಮಗುಚಿಬಿದ್ದ ಹಿನ್ನೆಲೆಯಲ್ಲಿ ತೀರ್ಪುಗಾರಿಕಾ
(ಮೊದಲ ಪುಟದಿಂದ) ಪ್ರದರ್ಶನದಲ್ಲಿ ಪಾಲ್ಗೊಳ್ಳಲಿಲ್ಲ. ಸಮಾಧಾನಕರ ಬಹುಮಾನವಾಗಿ ಬೆಳ್ಳಿ ಬಟ್ಟಲನ್ನು ನೀಡಲಾಯಿತು. ನಾಲ್ಕು ಕರಗ ದೇವಾಲಯಗಳಿಗೆ ಬೆಳ್ಳಿ ದೀಪಗಳನ್ನು ನೀಡಲಾಯಿತು.
ನಗರ ದಸರಾ ಸಮಿತಿ ಅಧ್ಯಕ್ಷೆ ಅನಿತಾಪೂವಯ್ಯ, ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷ ಟಿ.ಹೆಚ್. ಉದಯ ಕುಮಾರ್, ಪ್ರಮುಖರಾದ ಸತೀಶ್ ಪೈ, ಖಜಾಂಚಿ ಅರುಣ್ ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ನಗರಸಭಾ ಸದಸ್ಯೆ ಸಬಿತಾ, ಎಸ್.ಸಿ. ಮಹೇಶ್, ಅಲಂಕಾರ ಸಮಿತಿ ಅಧ್ಯಕ್ಷ ಮುನೀರ್ ಮಾಚರ್ ಮತ್ತಿತರರು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಹಾಜರಿದ್ದು ಬಹುಮಾನ ವಿತರಿಸಿದರು. ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಕಾರ್ಯಕ್ರಮ ನಿರ್ವಹಿಸಿದರು.
-ಉಜ್ವಲ್ ರಂಜಿತ್
ತೀರ್ಪುಗಾರಿಕೆ ವಿರುದ್ಧ ಅಸಮಾಧಾನ
ದಶಮಂಟಪಗಳ ತೀರ್ಪುಗಾರಿಕೆಗೆ ಸಂಬAಧಿಸಿದAತೆ ಗಾಂಧಿ ಮೈದಾನದ ವೇದಿಕೆಯಲ್ಲಿ ಕೆಲ ಮಂಟಪಗಳು ಅಸಮಾಧಾನ ಹೊರ ಹಾಕಿದ ಘಟನೆ ನಡೆಯಿತು. ತೃತೀಯ ಬಹುಮಾನ ಪಡೆದ ಕರವಲೆ ಭಗವತಿ ದೇವಾಲಯ ಸಮಿತಿ ಸದಸ್ಯರು ವೇದಿಕೆಯಲ್ಲೇ ಮೋಸ, ಮೋಸ ಎಂದು ಕೂಗಾಡಿ ದಶಮಂಟಪ ಸಮಿತಿ ವಿರುದ್ಧ ಧಿಕ್ಕಾರ ಕೂಗಿ ಅಸಮಾಧಾನ ವ್ಯಕ್ತಪಡಿಸಿದರೆ, ದ್ವಿತೀಯ ಬಹುಮಾನ ಪಡೆದ ಕೋಟೆ ಗಣಪತಿ ದೇವಾಲಯ ಸಮಿತಿ ಸದಸ್ಯರು ದಸರಾ ಸಮಿತಿ ನೀಡುವ ಬಹುಮಾನವನ್ನು ತಿರಸ್ಕರಿಸಿ ಆಕ್ರೋಶ ಹೊರ ಹಾಕಿದರು. ವೇದಿಕೆಯಲ್ಲಿ ಪರಸ್ಪರ ನಿಂದನೆ ತಳ್ಳಾಟ ನಡೆಯಿತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಯಾಗಿಸಿದರು.
೫೦ನೇ ವರ್ಷದ ಸಂಭ್ರಮದಲ್ಲಿದ್ದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ದಸರಾ ಸಮಿತಿ ಮಂಟಪದ ಒಂದು ಟ್ರಾö್ಯಕ್ಟರ್ ದಿಢೀರ್ ಮಗುಚಿದ ಪರಿಣಾಮ ಪ್ರಭಾವಳಿ ನೆಲಕ್ಕೆ ಉರುಳಿ ಬಿತ್ತು.
ದೇವಾಲಯದಿಂದ ಹೊರಟು ಪ್ರದರ್ಶನಕ್ಕೆಂದು ಕಾವೇರಿ ಕಲಾಕ್ಷೇತ್ರ ಮುಂಭಾಗ ಬರುವ ವೇಳೆಯಲ್ಲಿ ಡಿಸಿಸಿ ಬ್ಯಾಂಕ್ನ ಇಳಿಜಾರಿನಲ್ಲಿ
ತೂಕದ ಅಸಮತೋಲನದಿಂದ ಟ್ರ್ಯಾಕ್ಟರ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಪ್ರಭಾವಳಿ ಹಾಗೂ ದೇವಿಯ ಬೃಹತ್ ಕಲಾಕೃತಿ ಕೆಳಗೆ ಬಿದ್ದಿದೆ.
ಈ ಸಂದರ್ಭ ರಸ್ತೆ ಬದಿಯಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆಗೆ ದಾಖಲಿಸಲಾಯಿತು. ನೆರೆದಿದ್ದ ಮಂದಿ ಘಟನೆ ಸಂದರ್ಭ ಓಡಿ ಅಪಾಯದಿಂದ
ಪಾರಾಗಿದ್ದಾರೆ.
ರೂ. ೨೫ ಲಕ್ಷ ವೆಚ್ಚದಲ್ಲಿ ಮಂಟಪ ನಿರ್ಮಿಸಲಾಗಿತ್ತು. ಬೃಹತ್ ಕಲಾಕೃತಿಗಳು ಮಂಟಪದಲ್ಲಿದ್ದವು. ಘಟನೆಯಿಂದ ಸಮಿತಿ ಕಂಗಾಲಾಗಿ ಸದಸ್ಯರು ಕಣ್ಣೀರು ಹಾಕಿದರು. ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.