ಸೋಮವಾರಪೇಟೆ: ಸಾರ್ವಜನಿಕ ಆಯುಧ ಪೂಜಾ ಆಚರಣಾ ಸಮಿತಿ ವತಿಯಿಂದ ಮಾದಾಪುರದ ಬಸ್ ನಿಲ್ದಾಣದಲ್ಲಿ ಆಯೋಜನೆಗೊಂಡಿದ್ದ ಆಯುಧ ಪೂಜೋತ್ಸವ ಸಮಾರಂಭ ಸಂಭ್ರಮದಿAದ ನಡೆಯಿತು.
ಕಾರ್ಯಕ್ರಮದಲ್ಲಿ ಚಿತ್ರ ತಾರೆಯರಾದ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ದಂಪತಿಗಳ ಜೋಡಿ ನೆರೆದಿದ್ದವರನ್ನು ಮೋಡಿ ಮಾಡಿತು. ನೃತ್ಯ, ಡೈಲಾಗ್ಗಳ ಮೂಲಕ ತಾರಾ ಜೋಡಿ ಎಲ್ಲರನ್ನು ರಂಜಿಸಿತು. ಇದರೊಂದಿಗೆ ಚಿತ್ರ ನಿರ್ಮಾಪಕ ಮತ್ತು ನಟ ಆದ್ಯ ತಿಮ್ಮಯ್ಯ ಅವರ ಅಭಿನಯ, ನೃತ್ಯಗಳು ಗಮನ ಸೆಳೆದವು.
ಸಮಾರಂಭವನ್ನು ಶಾಸಕ ಡಾ. ಮಂಥರ್ ಗೌಡ ಉದ್ಘಾಟಿಸಿ, ಹಬ್ಬಾಚರಣೆಗಳು ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗುತ್ತವೆ. ಸಾಮೂಹಿಕ ಆಚರಣೆಗಳಿಂದ ಸಾಮರಸ್ಯ ವೃದ್ಧಿಸುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರ ನೀಡಲಾಗುವುದು ಎಂದರು.
ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕ್ರೀಡೆ ಮತ್ತು ಹಬ್ಬಗಳು ಸಂಭ್ರಮದ ವೇದಿಕೆಯಾಗಿವೆ. ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅರಿತುಕೊಳ್ಳಲು ಹಬ್ಬಗಳು ಸಹಕಾರಿಯಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಬಿ.ಸಿ. ರಮೇಶ್ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಮನು ಬಿದ್ದಪ್ಪ, ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಉತ್ತಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಆಯುಧ ಪೂಜೋತ್ಸವ ಅಂಗವಾಗಿ ವರ್ಕ್ಶಾಪ್, ಕಚೇರಿ ಮತ್ತು ಸಂಘ-ಸAಸ್ಥೆಗಳ ಕಟ್ಟಡ, ಅಂಗಡಿ ಮಳಿಗೆ, ವಾಹನ, ಆಟೋ ರಿಕ್ಷಾ, ಮಕ್ಕಳ ಮಂಟಪ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ನಂತರ ಝೇಂಕಾರ್ ವಾದ್ಯ ಗೋಷ್ಠಿ ತಂಡದಿAದ ಆರ್ಕೆಸ್ಟಾç, ಸರಿಗಮಪ, ಝೀ ಕನ್ನಡ, ಕರ್ಸ್ ಕನ್ನಡ ಖ್ಯಾತಿಯ ಕಲಾವಿದರಿಂದ ಹಾಡು, ನೃತ್ಯ ಕಾರ್ಯಕ್ರಮ ಜನಮನಸೂರೆಗೊಂಡಿತು. ಜ್ಯೋತಿ, ಸತೀಶ್ಕುಮಾರ್, ಶರಣ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.ಗೌಡಳ್ಳಿ ಶ್ರೀ ನವ ದುರ್ಗಾ ಪರಮೇಶ್ವರಿ ದೇವಿ
ಮುಳ್ಳೂರು: ನವರಾತ್ರಿ ಮತ್ತು ವಿಜಯ ದಶಮಿ ಹಬ್ಬದ ಪ್ರಯುಕ್ತ ಸಮೀಪದ ಗೌಡಳ್ಳಿ ಗ್ರಾಮದಲ್ಲಿರುವ ಶ್ರೀ ನವ ದುರ್ಗಾ ಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಕಳೆದ ೯ ದಿನಗಳಿಂದ ಪ್ರತಿದಿನ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿದ ಬಳಿಕ ಮಂಗಳವಾರ ರಾತ್ರಿ ನವರಾತ್ರಿ ವಿಶೇಷ ಪೂಜಾ ಕಾರ್ಯ ಸಂಪನ್ನಗೊAಡಿತು.
ನವರಾತ್ರಿ ಪ್ರಯುಕ್ತ ನವ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿ ದಿನ ರಾತ್ರಿ ಅರ್ಚಕರು ವಿಶೇಷ ಪೂಜೆ ನೆರವೇರಿಸಿದರು. ಶ್ರೀ ದುರ್ಗಾದೇವಿ, ಆರ್ಯು ದುರ್ಗಾ ದೇವಿ, ಭಗವತಿ ದುರ್ಗಾ, ಕುಮಾರಿ ದುರ್ಗಾ, ಅಂಬಿಕಾ ದುರ್ಗಾ, ಮಹಿಷಾ ವರ್ಧಿನಿ ದುರ್ಗಾ, ಚಂಡಿಕಾ ದುರ್ಗಾ, ಸರಸ್ವತಿ ದುರ್ಗಾ, ವಾದ್ವೀಶ್ವರಿ ದುರ್ಗಾ ಈ ನವ ದೇವತೆಗಳಿಗೆ ಅರ್ಚಕರು ವಿಶೇಷ ಪೂಜಾ ವಿದಿವಿಧಾನ ನೆರವೇರಿಸಿದರು. ಸೋಮವಾರ ಆಯುಧ ಪೂಜೆ ಪ್ರಯುಕ್ತ ದೇವಸ್ಥಾನದಲ್ಲಿ ಸಾಮೂಹಿಕ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಮಂಗಳವಾರ ರಾತ್ರಿ ವಿಜಯ ದಶಮಿ ಪ್ರಯುಕ್ತ ದೇವಸ್ಥಾನದ ಆಸುಪಾಸಿನಲ್ಲಿರುವ ವಿವಿಧ ಪರಿವಾರುಗಳಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಸ್ಥಾನದಲ್ಲಿ ೯ ದಿನ ನಡೆದ ಪೂಜೆಯ ನವದೇವಿ ಕಲಶವನ್ನು ವಿಸರ್ಜನೆ ಮಾಡುವ ನವರಾತ್ರಿ ಪೂಜಾ ಕಾರ್ಯ ಸಂಪನ್ನಗೊAಡಿತು. ಈ ಸಂದರ್ಭದಲ್ಲಿ ನವ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಂಸ್ಥಾಪಕ ಅರ್ಚಕರಾಗಿದ್ದ ದಿ. ವೆಂಕಟರಮಣ ಆರ್ಚಾಯ ಅವರ ಗದ್ದುಗೆಗೆ ಪೂಜೆ ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವರೂಪ ಆಚಾರ್ಯ ನೇತೃತ್ವದಲ್ಲಿ ನವರಾತ್ರಿ ವಿಶೇಷ ಪೂಜಾ ಕಾರ್ಯ ನೆರವೇರಿತು.ಸೋಮವಾರಪೇಟೆ: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜನೆಗೊಂಡಿದ್ದ ಆಯುಧ ಪೂಜಾ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಡಾ. ಮಂಥರ್ ಗೌಡ ಉದ್ಘಾಟಿಸಿದರು. ನಂತರ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಸಂಘದ ಸದಸ್ಯರು ಸೌಹಾರ್ದತೆಯಿಂದ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿಯೂ ಹತ್ತು ಹಲವು ಸಮಾಜಮುಖಿ ಕಾರ್ಯ ಮಾಡಲು ಸಂಘದ ಸದಸ್ಯರು ಮುಂದಾಗಬೇಕು. ಸಂಘದ ವತಿಯಿಂದ ಮುಂದಿನ ಸಾಲಿನಲ್ಲಿ ನಡೆಸುವ ಆಯುಧಾ ಪೂಜಾ ಕಾರ್ಯಕ್ರಮಕ್ಕೆ ರೂ. ೧೦ ಲಕ್ಷ ಹಣ ನೀಡುವುದಾಗಿ ಭರವಸೆ ನೀಡಿದರು.
ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಡಿ. ಹರೀಶ್ ಮಾತನಾಡಿ, ಸಂಘದ ವತಿಯಿಂದ ಸಾಕಷ್ಟು ಸಮಾಜ ಸೇವೆಗಳನ್ನು ಮಾಡುವ ಮೂಲಕ ಸಂಘದಲ್ಲಿನ ಬದ್ಧತೆಯನ್ನು ತೋರಿಸುತ್ತಿದೆ. ಎಲ್ಲರೂ ಒಂದಾಗಿ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದೀರಿ. ಎಲ್ಲರೂ ಮುಂದಿನ ದಿನಗಳಲ್ಲಿಯೂ ಸಮಾಜಸೇವೆ ಮಾಡುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಜಿ. ಸುರೇಶ್ ವಹಿಸಿದ್ದರು. ವೇದಿಕೆಯಲ್ಲಿ ಮೈಸೂರು ಗೋಪಾಲಗೌಡ ಮೆಮೋರಿಯಲ್ ಆಸ್ಪತ್ರೆಯ ಡಾ. ಸುಶ್ರೂತ್, ಉದ್ಯಮಿ ಹರಪಳ್ಳಿ ರವೀಂದ್ರ, ಎಚ್.ಎಸ್. ಸುರೇಶ್, ಎನ್.ಎಸ್. ಜಯರಾಮ್, ಮಹೇಶ್ ತಿಮ್ಮಯ್ಯ, ವಿ.ಎಂ. ವಿಜಯ, ಎಸ್.ಬಿ. ಭರತ್ಕುಮಾರ್, ರತನ್ ಆಲೆಕಟ್ಟೆ, ಕೆ.ಎ. ಯಾಕೂಬ್ ಇದ್ದರು. ಇದೇ ಸಂದರ್ಭ ಉದ್ಯಮಿಗಳಾದ ಮಿಥುನ್ ಹಾನಗಲ್ಲು, ಗಿರೀಶ್ ಮಲ್ಲಪ್ಪ ಹಾಗೂ ರಾಜ್ಯ ಹಾಕಿ ತಂಡದ ಆಟಗಾರ್ತಿ ಕರ್ಕಳ್ಳಿ ಗ್ರಾಮದ ಪುಣ್ಯ ಅವರುಗಳನ್ನು ಸನ್ಮಾನಿಸಲಾಯಿತು.
ಬೆಳಿಗ್ಗೆ ನಡೆದ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ನಾಟ್ಯಕಲಾ ಅಕಾಡೆಮಿ ತಂಡ ಪ್ರಥಮ ಸ್ಥಾನ ಗಳಿಸಿತು. ದ ಗಾಡ್ ತಂಡ ದ್ವಿತೀಯ ಸ್ಥಾನ ಗಳಿಸಿತು. ಸೋಮವಾರಪೇಟೆ ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಶಾಲೆ ತೃತೀಯ ಸ್ಥಾನ ಗಳಿಸಿತು. ಸುಂಟಿಕೊಪ್ಪದ ಎನ್.ಕೆ. ಯುನೈಟೆಡ್ ಡ್ಯಾನ್ಸ್ ತಂಡ ಹಾಗೂ ಕುಶಾಲನಗರದ ಟೈಮ್ ಬ್ರೇರ್ಸ್ ತಂಡಗಳು ಸಮಾಧಾನಕರ ಬಹುಮಾನ ಪಡೆದವು. ವಿಜೇತ ತಂಡಗಳಿಗೆ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಯಿತು.ಮೂರ್ನಾಡು: ಮೂರ್ನಾಡು ವಿನಲ್ಲಿ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಅದ್ದೂರಿ ಆಯುಧ ಪೂಜಾ ಕಾರ್ಯಕ್ರಮವು ಅತಿ ವಿಜೃಂಭಣೆಯಿAದ ಜರುಗಿತು. ಇಲ್ಲಿನ ಪಾಂಡಾಣೆ ಶಾಲಾ ಮೈದಾನದಲ್ಲಿ ನಿರ್ಮಿಸಲಾದ ಭವ್ಯ ಬಯಲು ಅಲಂಕೃತ ವೇದಿಕೆಯಲ್ಲಿ ೩೦ನೇ ವರ್ಷದ ಆಯುಧ ಪೂಜೆಯ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅಲಂಕೃತ ವಾಹನಗಳಿಗೆ ಸಾಮೂಹಿಕ ಪೂಜೆಯನ್ನು ನೆರವೇರಿಸಲಾಯಿತು. ನಂತರ ಮುಖ್ಯ ರಸ್ತೆಯಲ್ಲಿ ಸಾಗಿದ ಮೆರವಣಿಗೆಯಲ್ಲಿ ವಿಶೇಷವಾಗಿ ಅಲಂಕೃತಗೊAಡ ವಾಹನಗಳಲ್ಲಿ ಚಂದ್ರಯಾನ-೩, ಮದ್ಯಪಾನದಿಂದ ಆಗುವ ಅಪಘಾತಗಳ ಸ್ತಬ್ದಚಿತ್ರಣ, ಐತಿಹಾಸಿಕ ಹಿನ್ನಲೆಯುಳ್ಳ ಶ್ರೀರಾಮನಿಂದ ರಾವಣದ ಸಂಹಾರ, ದುರ್ಗೆಯಿಂದ ದುರ್ಗಾಸುರನ ವಧೆ, ಶುಂಭನ ವಧೆ, ಶಿವಾಂಶನಿAದ ಕಾಲಾಂಶನ ವಧೆಯ ಚಿತ್ರಣಗಳು, ಭಾರತದ ಚಂದ್ರಯಾನ-೩ ಯಶಸ್ವಿ ಉಡಾವಣೆ ಹಾಗೂ ಸುರಕ್ಷಿತ ಲ್ಯಾಂಡಿAಗ್, ರೈತ ದೇಶದ ಬೆನ್ನುಲೆಬು, ಸರ್ಕಾರಿ ಶಾಲೆಗಳನ್ನು ಉಳಿಸಿ ಹೀಗೆ ಇನ್ನು ಹಲವಾರು ಸ್ತಬ್ದ ಚಿತ್ರಗಳು ಮತ್ತು ವಿಟ್ಲದ ಕಲಾ ರಸಿಕ ಆರ್ಟ್ಸ್ ಬೊಂಬೆ ಬಳಗದ ಗೊಂಬೆ ಕುಣಿತ ಮತ್ತು ವಾದ್ಯಗೋಷ್ಠಿಗಳು ವೀಕ್ಷಕರ ಗಮನ ಸೆಳೆದವು.
ಸಮಾರಂಭದಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಿರಿಯ ಮುಖ್ಯ ಶಿಕ್ಷಕಿ ವಿ.ಕೆ. ಲಲಿತ ಮಾತನಾಡಿ, ಸಂಘಟನೆ ಬರಿ ಮಾತಲ್ಲ, ಕಾರ್ಯಗತಗೊಂಡಾಗ ಮಾತ್ರ ಸಂಘಗಳು ಗಟ್ಟಿಗೊಳ್ಳುತ್ತದೆ. ಹಾಗೆಯೆ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಯಶಸ್ವಿ ಕಾಣಲು ಸಾಧ್ಯ. ಸರ್ಕಾರಿ ಶಾಲೆ ಮತ್ತು ಪಾಂಡಾಣೆ ಮೈದಾನಕ್ಕೆ ಸಂಬAಧಪಟ್ಟವರು ಹಾಗೂ ಸಂಘದ ಆಡಳಿತ ಮಂಡಳಿಯವರು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿದರೆ ಶಾಶ್ವತ ವೇದಿಕೆ ಕಾರ್ಯಗತಗೊಳ್ಳಲು ಸಾಧ್ಯವಾಗುತ್ತದೆ ಎಂದರು. ಮೂರ್ನಾಡಿನ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ದಂಬೆಕೊಡಿ ಕೆ. ಸುಬ್ರಮಣಿ ಮುಖ್ಯ ಅತಿಥಿಗಳ ಸ್ಥಾನದಿಂದ ಮಾತನಾಡಿ, ದುಷ್ಟರ ಸಂಹಾರವಾಗಿ ಶಿಷ್ಟರ ರಕ್ಷಣೆಯಾಗುವÀ ಈದಿನ ದುರ್ಗಾದೇವಿಯನ್ನು ಪೂಜಿಸುವ ಪುರಾಣ ಹಿನ್ನಲೆಯಿಂದ, ಆಯುಧಗಳಿಗೆ ಪೂಜೆಯನ್ನು ಮಾಡುವುದರೊಂದಿಗೆ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿ ಜನರ ಮನತಣಿಸುವ ಕಾರ್ಯಗಳು ಸಂಘಗಳಿAದ ಪ್ರಸ್ತುತದಲ್ಲಿ ಆಗುತ್ತಿದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಕರವಂಡ ಕೆ. ಸಜನ್ ಗಣಪತಿ ವಹಿಸಿದ್ದರು. ವೇದಿಕೆಯಲ್ಲಿ ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್. ಕುಶನ್ ರೈ ಪಂಚಾಯಿತಿ ಉಪಾಧ್ಯಕ್ಷೆ ಬಿ.ಎಸ್. ರೇಖಾ ಬಾಲು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ನ ವಿಜೇತ ರಾಹುಲ್ ರಾವ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಜಯ್ ಕುಮಾರ್, ಹಿಂದೂ ರುದ್ರಭೂಮಿಯ ಅಧ್ಯಕ್ಷ ಬಿ.ಎಸ್. ಅರುಣ್ ರೈ (ಬಾಬಾ), ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಗೌರವ ಅಧ್ಯಕ್ಷ ಎನ್.ಕೆ. ಕಂಞರಾಮ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ನೆರವಂಡ ಎನ್. ಅನೂಪ್ ಉತ್ತಯ್ಯ, ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಟಿ. ಹರೀಶ್, ಮೂರ್ನಾಡು ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಮುಂಡAಡ ಪವಿ ಸೋಮಣ್ಣ, ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಕಂಬೀರAಡ ಕೆ. ಸತೀಶ್ ಮುತ್ತಪ್ಪ, ಬಂಟರ ಸಂಘದ ಅಧ್ಯಕ್ಷ ಚಂದಶೇಖರ್ ರೈ, ತೊತ್ತಿಯಂಡ ಬೆಳ್ಳಿಯ್ಯಪ್ಪ, ಸಂಘದ ಉಪಾಧ್ಯಕ್ಷ ಅಶ್ವಥ್ ರೈ, ಕಾರ್ಯದರ್ಶಿ ಎನ್.ಎನ್. ಶರಣು, ಖಜಾಂಚಿ ಹೆಚ್.ಹೆಚ್. ಜಯಂತ್ ಕುಮಾರ್, ಸಹ ಕಾರ್ಯದರ್ಶಿ ದಿನೇಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಇಲ್ಲಿನ ನಿವೃತ್ತ ಸುಬೇದಾರ್ ಮೇಜರ್ ಬೈರಿಕುಂದಿರ ಉತ್ತಪ್ಪ, ನಿವೃತ್ತ ದೈಹಿಕ ಶಿಕ್ಷಕ ಅವರೆಮಾದಂಡ ಜಿ. ಗಣೇಶ್, ಬಲಮುರಿಯ ನಿವೃತ್ತ ಕರ್ನಲ್ ತೊತ್ತಿಯಂಡ ಬಿ. ಸಬಿತ ಅವರನ್ನು ಸಂಘದ ವತಿಯಿಂದ ಸನ್ಮಾನಿಸ ಲಾಯಿತು. ಅಲಂಕೃತಗೊAಡ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ, ಆರು ಚಕ್ರ ವಾಹನಗಳು ಮತ್ತು ಅಂಗಡಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನ ಹಾಗೂ ಪಾರಿ ತೋಷಕಗಳನ್ನು ಮುಖ್ಯ ಅತಿಥಿಗಳು ವಿತರಿಸಿದರು. ತೃಶ ಕಾವೇರಪ್ಪ ಪ್ರಾರ್ಥಿಸಿ, ಎನ್.ಎನ್. ಶರಣು ಪ್ರಾಸ್ತಾವಿಕ ನುಡಿಯಾಡಿ, ಅಶ್ವಥ್ ರೈ ಸ್ವಾಗತಿಸಿ, ಸೀಮಾ ಸಜನ್ ಮತ್ತು ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಂಘದ ವತಿಯಿಂದ ನೆರೆದಿದ್ದ ಎಲ್ಲಾ ಸಾರ್ವ ಜನಿಕರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಂತರ ರಾಹುಲ್ ರಾವ್ ಮತ್ತು ತಂಡದ ನೃತ್ಯ, ಭಾರತೀಯ ನೃತ್ಯ ಕಲಾ ಶಾಲೆಯ ಕಲಾವಿದರ ನೃತ್ಯಗಳು ಮತ್ತು ಸ್ಥಳೀಯ ಮಕ್ಕಳ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಪ್ರೇಕ್ಷಕರ ಮನಸೂರೆಗೊಂಡವು.
ಚಿತ್ರ-ವರದಿ : ಟಿ.ಸಿ. ನಾಗರಾಜ್, ಮೂರ್ನಾಡು.ಸೋಮವಾರಪೇಟೆ: ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಶರನ್ನವರಾತ್ರಿ ಉತ್ಸವ ವಿದ್ಯುಕ್ತ ತೆರೆ ಕಂಡಿತು.
ದೇವಿಯ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ, ಪಟ್ಟಣದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮಹಿಳೆಯರಾದಿಯಾಗಿ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವೀರಗಾಸೆ, ಡೊಳ್ಳುಕುಣಿತ, ಗೊಂಬೆ ಕುಣಿತ ಜನರನ್ನು ಆಕರ್ಷಿಸಿತು. ಸಂಜೆ ಆನೆಕೆರೆಯಲ್ಲಿ ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಯಿತು.
ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಕಾರ್ಯದರ್ಶಿ ಎಸ್.ಡಿ. ವಿಜೇತ್ ಪದಾಧಿಕಾರಿಗಳಾದ ಸತೀಶ್, ಶ್ಯಾಂಸುAದರ್, ಎಸ್.ಆರ್. ಸೋಮೇಶ್, ಹರೀಶ್, ಎಲ್.ಎಂ. ಪ್ರೇಮಾ ಮತ್ತಿತರರು ಇದ್ದರು.
ಶ್ರೀ ಬಸವೇಶ್ವರ ದೇವಾಲಯದಲ್ಲಿ: ಇಲ್ಲಿನ ಬಸವೇಶ್ವರ ಸೇವಾಲಯದಲ್ಲಿ ವೀರಶೈವ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ದೇವಾಲಯದಲ್ಲಿ ದುರ್ಗಾಹೋಮ ನಡೆಯಿತು.
ಈ ಸಂದರ್ಭ ಉಪಸ್ಥಿತರಿದ್ದ ದೊಡ್ಡಬಳ್ಳಾಪುರದ ನಿಶ್ಚಲ ದೇಶಿ ಕೇಂದ್ರದ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ನಮ್ಮದಿ ದೊರುಕುವುದು. ಇಂತಹ ಪೂಜಾ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಸಮಾಜದ ಯಜಮಾನ ಬಿ.ಪಿ. ಶಿವಕುಮಾರ್, ಶೆಟ್ರು ಬಿ.ಆರ್. ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜು, ವಿವಿಧ ಘಟಕಗಳ ಪದಾಧಿಕಾರಿಗಳು, ಸಮಾಜ ಬಾಂಧವರು ಇದ್ದರು. ಶರನ್ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ದುರ್ಗಾದೇವಿಗೆ ನಿಂಬೆಹಣ್ಣಿನ ಅಲಂಕಾರ ಮತ್ತು ¸ ಅಡಿಕೆ ಅಲಂಕಾರ ಮಾಡಲಾಗಿತ್ತು. ಬನ್ನಿ ಕಡಿಯುವುದರೊಂದಿಗೆ ಉತ್ಸವ ಮೂರ್ತಿಯನ್ನು ಆನೆಕೆರೆಯಲ್ಲಿ ವಿಸರ್ಜಿಸಲಾಯಿತು.ಶನಿವಾರಸಂತೆ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ವರ್ಗದವರು ನವರಾತ್ರಿ ಹಬ್ಬದ ಪ್ರಯುಕ್ತ ಆಯುಧ ಪೂಜಾ ಕಾರ್ಯಕ್ರಮವನ್ನು ಸಂಭ್ರಮ-ಸಡಗರದಿAದ ಆಚರಿಸಿದರು.
ಆರೋಗ್ಯ ಕೇಂದ್ರದ ಯಂತ್ರೋಪಕರಣಗಳು, ೨ ಆಂಬುಲೆನ್ಸ್ಗಳು ಹಾಗೂ ಸಿಬ್ಬಂದಿಗಳ ವಾಹನಗಳನ್ನು ಬಾಳೆ ಗಿಡ ಹಾಗೂ ಹೂವಿನಿಂದ ಅಲಂಕರಿಸಿ ಪೂಜಿಸಿದರು. ಅರ್ಚಕ ಪ್ರಕಾಶ್ಚಂದ್ರ ವಿಧ್ಯುಕ್ತವಾಗಿ ಪೂಜೆ ಸಲ್ಲಿಸಿದರು. ತೀರ್ಥ-ಪ್ರಸಾದ ವಿನಿಯೋಗ, ಸಿಹಿ ಹಂಚಲಾಯಿತು. ಸಿಬ್ಬಂದಿಗಳಾದ ನವೀನ್, ಪ್ರವೀಣ್, ಸರಸ್ವತಿ, ವಿಮಲಾ, ಶ್ವೇತಾ, ರಶೀದ್, ಸತ್ಯನಾರಾಯಣ್, ವೇದಮೂರ್ತಿ, ಶಿವಕುಮಾರ್, ಶ್ರೀನಿವಾಸ್, ದೇವರಾಜ್, ಧರ್ಮ, ವಿಜೇತ್, ಸಚಿನ್ ಇತರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕಡAಗ: ಪಟ್ಟಣದಲ್ಲಿರುವ ಶ್ರೀ ಬಲಮುರಿ ಮಹಾ ಗಣಪತಿ ದೇವಸ್ಥಾನದಲ್ಲಿ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಗಣಪತಿ ದೇವಾಲಯದ ಅರ್ಚಕರಾದ ಸ್ವಾಮಿ ಕಿರಣ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಗ್ರಾಮದ ನೂರಕ್ಕಿಂತ ಹೆಚ್ಚು ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಸೋಮವಾರಪೇಟೆ: ಸಮೀಪದ ಕಿಬ್ಬೆಟ್ಟ ಗ್ರಾಮದ ಶ್ರೀ ಭಗವತಿ ದೇವಾಲಯದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಕಳೆದ ೯ ದಿನಗಳಿಂದ ಪೂಜಿಸಿದ್ದ ಉತ್ಸವ ಮೂರ್ತಿಯನ್ನು ಹಾರಂಗಿ ನದಿಯಲ್ಲಿ ವಿಸರ್ಜಿಸ ಲಾಯಿತು. ಪ್ರಧಾನ ಅರ್ಚಕ ಮಧು ಅವರ ಪೌರೋಹಿತ್ವದಲ್ಲಿ ನವದುರ್ಗಾ ಮಾತೆಗೆ ೯ ದಿನಗಳ ಕಾಲ ವಿಶೇಷ ಪೂಜೆ, ಹೋಮ ನಡೆಯಿತು. ಪ್ರಮುಖರಾದ ಉದಯ ಕುಮಾರ, ಮಧು, ಗಣಪತಿ, ರವಿ, ಮರ್ವಿನ್, ಕುಶಾಲಪ್ಪ, ಮುರುಳಿ, ಜಗದೀಶ್ ಸೇರಿದಂತೆ ಇತರರು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.ಕುಶಾಲನಗರ: ಕುಶಾಲನಗರ ಮಹಿಳಾ ಸಮಾಜ ಆವರಣದಲ್ಲಿ ದಸರಾ ಅಂಗವಾಗಿ ಗೊಂಬೆ ಪ್ರದರ್ಶನ ಹಮ್ಮಿಕೊಳ್ಳಲಾಯಿತು.ಕುಶಾಲನಗರ: ಕುಶಾಲನಗರ ಕನ್ನಿಕಾ ಪರಮೇಶ್ವರಿ ದೇವಾಲಯ ದಲ್ಲಿ ವಾಸವಿ ಯುವತಿಯರ ಸಂಘದ ಆಶ್ರಯದಲ್ಲಿ ದಸರಾ ಅಂಗವಾಗಿ ಗೊಂಬೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ನವರಾತ್ರಿ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.ಸುಂಟಿಕೊಪ್ಪ: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ಅದ್ದೂರಿ ಆಯುಧ ಪೂಜಾ ಸಮಾರಂಭದ ಅಂಗವಾಗಿ ವಿವಿಧ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಿಗೆ ಬಹು ಮಾನಗಳನ್ನು ವಿತರಿಸಲಾಯಿತು.
ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ಆಯುಧ ಪೂಜೆ ಸಮಾರಂಭ ಪ್ರಯುಕ್ತ ಏರ್ಪಡಿಸಲಾಗಿದ್ದ ವರ್ಕ್ ಶಾಪ್ ಅಲಂಕಾರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶಬರಿ ಆಟೋ ವರ್ಕ್ಸ್ ಪಡೆದುಕೊಂಡಿದೆ. ವೆಂಕಟರಮಣ ಟಯರ್ ವರ್ಕ್ಸ್ ದ್ವಿತೀಯ ಬಹುಮಾನ ಪಡೆದಿದೆ.
ಕಚೇರಿ ಅಲಂಕಾರ ಸ್ಪರ್ಧೆಯಲ್ಲಿ ಕೆ.ಇ.ಬಿ. ಪ್ರಥಮ, ಪೊಲೀಸ್ ಠಾಣೆ ದ್ವಿತೀಯ ಮತ್ತು ಗ್ರಾಮ ಪಂಚಾಯಿತಿ ಕಚೇರಿ ತೃತೀಯ ಬಹುಮಾನ ಗಳಿಸಿದೆ.
ಅಂಗಡಿ ಅಲಂಕಾರ ಸ್ಪರ್ಧೆಯಲ್ಲಿ ಶ್ರೀಮಾನ್ ಎಂಟರ್ಪ್ರೆöÊಸಸ್ ಪ್ರಥಮ ಬಹುಮಾನವನ್ನು ಪಡೆದು ಕೊಂಡಿದ್ದರೆ, ಅಶ್ರಫ್ ಸ್ಟೂಡೆಂಟ್ ಕಾರ್ನರ್ ದ್ವಿತೀಯ ಬಹುಮಾನಕ್ಕೆ ಭಾಜನವಾಗಿದೆ.
ಲಘು ವಾಹನ ಅಲಂಕಾರ ಸ್ಪರ್ಧೆಯಲ್ಲಿ ಆನಂದ ಪ್ರಥಮ, ನಾಗಪ್ಪ ದ್ವಿತೀಯ ಮತ್ತು ಪಟ್ಟೆಮನೆ ಹರ್ಷ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಶಿವಮಣಿ ಅವರು ಆಟೋ ರಿಕ್ಷಾ ಅಲಂಕಾರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿಕೊಂಡರು.ತರಕಾರಿ ಅಲಂಕಾರ
ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣದ ಶ್ರೀ ಬಸವೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಉತ್ಸವದಲ್ಲಿ ಶೀ ದುರ್ಗಾದೇವಿಗೆ ತರಕಾರಿ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿ ಸಲಾಯಿತು.ವೀಳ್ಯದೆಲೆ ಅಲಂಕಾರ
ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣದ ಶ್ರೀ ಸೋಮೇಶ್ವರ ದೇವಾಲಯದ ಶ್ರೀ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ಯೋಜನೆ ಗೊಂಡಿರುವ ಶರನ್ನವರಾತ್ರಿ ಉತ್ಸವ ದಲ್ಲಿ ಶ್ರೀ ಶಕ್ತಿ ಪಾರ್ವತಿ ದೇವಿಗೆ ವೀಳ್ಯದೆಲೆ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು.