ಮಡಿಕೇರಿ, ಅ. ೨೬: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಹಾಗೂ ಗೋಣಿಕೊಪ್ಪ ದಸರಾ ಉತ್ಸವದಲ್ಲಿ ವಿಜಯದಶಮಿಯಂದು ಮಂಟಪಗಳಲ್ಲಿ ಡಿಜೆ ಬಳಕೆ ಸಂದರ್ಭ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಡಿಕೇರಿಯ ೧೦ ಮಂಟಪ ಹಾಗೂ ಗೋಣಿಕೊಪ್ಪದ ೩ ಮಂಟಪಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಡಿಕೇರಿಯ ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿಕಾಮಾಕ್ಷಿ, ಕುಂದುರುಮೊಟ್ಟೆ, ಕರವಲೆ ಭಗವತಿ, ಪೇಟೆ ರಾಮಮಂದಿರ, ದೇಚೂರು ರಾಮಮಂದಿರ, ಕೋದಂಡರಾಮ, ಚೌಡೇಶ್ವರಿ, ಕೋಟೆಗಣಪತಿ ಮಂಟಪಗಳು ಹಾಗೂ ಗೋಣಿಕೊಪ್ಪಲಿನ ನವಚೇತನ ದಸರಾ ಸಮಿತಿ, ಯುವ ದಸರಾ ಸಮಿತಿ, ಶಾರದಾಂಭ ದಸರಾ ಸಮಿತಿ ಸೇರಿ ಒಟ್ಟು ೧೩ ಮಂಟಪಗಳ ಅಧ್ಯಕ್ಷರು ಹಾಗೂ ಸಮಿತಿಯವರ ಮೇಲೆ ಮಡಿಕೇರಿ ನಗರ ಠಾಣೆ ಹಾಗೂ ಗೋಣಿಕೊಪ್ಪ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಡಿಜೆ ಬಳಕೆಗೆ ಸಂಬAಧಿಸಿದAತೆ ಸುಪ್ರೀಂಕೋರ್ಟ್ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಆದರೆ ಜಿಲ್ಲೆಯಲ್ಲಿ ದಸರಾ ವೇಳೆ ಈ ಷರತ್ತುಗಳು ಉಲ್ಲಂಘನೆ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಈ ಬಾರಿ ನ್ಯಾಯಾಲಯದ ನಿಯಮಗಳು ಉಲ್ಲಂಘನೆ ಆಗದಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಎಚ್ಚರವಹಿಸಬೇಕು. ಇಲ್ಲವಾದರೆ ಕಾನೂನು ಹೋರಾಟ ಮಾಡುವುದಾಗಿ ಹೈಕೋರ್ಟ್ ವಕೀಲ, ವಾಯ್ಸ್ ಆಫ್ ಪಬ್ಲಿಕ್‌ನ ಪ್ರಮುಖರಾದ ಎನ್.ಪಿ. ಅಮೃತೇಶ್ ಅವರು ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಮಂಟಪ ಸಮಿತಿಗಳ ಪ್ರಮುಖರ ಸಭೆ ನಡೆಸಿ ಡಿಜೆ ಬಳಕೆ ಸಂಬAಧ ನ್ಯಾಯಾಲಯ ಆದೇಶಿಸಿರುವ ಶಬ್ಧ ಪ್ರಮಾಣದ ಮಿತಿ ಹಾಗೂ ಸಮಯದ ಮಿತಿಯ ಬಗ್ಗೆ ಮನವರಿಕೆ ಮಾಡಿ ನಿಯಮ ಉಲ್ಲಂಘಿಸದAತೆ ಸೂಚಿಸಿತ್ತು.