ವೀರಾಜಪೇಟೆ, ಅ. ೨೬: ಕೊಡವ ಸಮಾಜದ ಒಕ್ಕೂಟದ ಅಧೀನದಲ್ಲಿ ಬಾಳುಗೋಡುವಿನಲ್ಲಿ ನವೆಂಬರ್ ೧೬ ರಿಂದ ೧೯ ರವರೆಗೆ ಅಂತರ ಕೊಡವ ಸಮಾಜಗಳ ನಡುವೆ ಹಾಕಿ, ಹಗ್ಗಜಗ್ಗಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಭಾರದ ಗುಂಡು ಎಸೆತ ಸ್ಪರ್ಧೆ ನಡುವೆ ಕೊಡವ ನಮ್ಮೆ ನಡೆಯಲಿದೆ ಎಂದು ಒಕ್ಕೂಟದ ಕ್ರೀಡಾ ಸಮಿತಿಯ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ ಹೇಳಿದರು.
ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಸಮಾಜಗಳ ಒಕ್ಕೂಟ ಅಧೀನದಲ್ಲಿ ೩೩ ಕೊಡವ ಸಮಾಜಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ಪೈಪೋಟಿಗಳು ಅಂತರ ಕೊಡವ ಸಮಾಜಗಳ ನಡುವೆ ನಡೆಯಲಿದೆ.
ಹಗ್ಗಜಗ್ಗಾಟ ೯ ಜನರಿಗೆ ಮಾತ್ರ ಸೀಮಿತರಾಗಿರುತ್ತದೆ. ಭಾರದ ಗುಂಡು ಎಸೆತ ಹಾಗೂ ಹಗ್ಗಜಗ್ಗಾಟಕ್ಕೆ ಒಂದು ಸಮಾಜದಿಂದ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ತೆಂಗಿನಕಾಯಿಗೆ ಗುಂಡು ಹೊಡೆಯವ ಸ್ಪರ್ಧೆಯನ್ನು ಹೊರತುಪಡಿಸಿ ಉಳಿದೆಲ್ಲಾ ಸ್ಫರ್ಧೆಗಳಲ್ಲಿ ಭಾಗವಹಿಸುವ ಸಮಾಜಗಳು ನವೆಂಬರ್ ೧೦ ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ.
ಮಹಿಳೆ ಹಾಗೂ ಪುರುಷರಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯವ ಪೈಪೋಟಿಗಳು ನವೆಂಬರ್ ೧೮ ರಂದು ನಡೆಯಲಿದೆ. ಹಗ್ಗಜಗ್ಗಾಟದ ಫೈನಲ್ ಪಂದ್ಯಾಟ ೧೯ ರಂದು ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಕ್ರೀಡಾ ಸಮತಿ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ ೯೪೮೦೦೦೩೯೦೨, ಒಕ್ಕೂಟ ಕ್ರೀಡಾ ಸಮಿತಿ ಸಂಚಾಲಕ ಕಂಬೀರAಡ ಕಿಟ್ಟು ಕಾಳಪ್ಪ, ೯೯೭೨೩೮೯೮೭೩ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಒಕ್ಕೂಟ ಕ್ರೀಡಾ ಸಮಿತಿ ಸಂಚಾಲಕ ಕಂಬೀರAಡ ಕಿಟ್ಟು ಕಾಳಪ್ಪ, ಕ್ರೀಡಾ ಸಮಿತಿ ಕಾರ್ಯದರ್ಶಿ ಕೋಟೆರ ರಘು ಕಾರ್ಯಪ್ಪ, ಹಗ್ಗಜಗ್ಗಾಟ ಕ್ರೀಡಾ ಸಮಿತಿ ಸಂಚಾಲಕ ಬೊಳ್ಳಿಯಂಗಡ ದಾದು ಪೂವಯ್ಯ, ಕ್ರೀಡಾ ಸಮಿತಿ ನಿರ್ದೇಶಕ ದೊರೆ ಪೂಣಚ್ಚ ಉಪಸ್ಥಿತರಿದ್ದರು.