ಕೂಡಿಗೆ, ಅ. ೨೬: ಕೊಡಗು ಜಿಲ್ಲೆಗೆ ರಾಜ್ಯ ಮತ್ತು ಅಂತರರಾಜ್ಯ ಗಳಿಂದ ಪ್ರವಾಸಿಗರು ಹೆಚ್ಚು ಬರುತ್ತಿರುವ ಹಿನ್ನೆಲೆಯಲ್ಲಿ ಅದರಲ್ಲಿಯೂ ಹಾರಂಗಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿಯ ಅಣೆಕಟ್ಟೆಯ ಮುಂಭಾಗದಲ್ಲಿರುವ ಜಾಗದಲ್ಲಿ ಮೀನುಗಾರಿಕೆ ಇಲಾಖೆಯ ವತಿಯಿಂದ ಮತ್ಸಾö್ಯಲಯ (ಅಲಂಕಾರಿಕ ಮೀನು ವೀಕ್ಷಣಾ ಕೇಂದ್ರ) ಸ್ಥಾಪನೆ ಮಾಡುವ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ಎಸ್. ವೈದ್ಯ ಹೇಳಿದ್ದರು.
ಹಾರಂಗಿ ಜಲಾಶಯ ಬಳಿ ಇರುವ ಮೀನುಗಾರಿಕಾ ಇಲಾಖೆಯ ಮಹಾಶಿರ್ ಮೀನು ತಳಿ ಸಂವರ್ಧನಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮಾತನಾಡಿದರು.
ಮೀನುಗಾರಿಕೆ ಇಲಾಖೆಗೆ ಈ ಸಾಲಿನಲ್ಲಿ ಹೆಚ್ಚಿನ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು, ಅಲ್ಲದೆ ಹಾರಂಗಿಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಪೂರಕವಾದ ಕ್ರಿಯಾ ಯೋಜನಾ ಪಟ್ಟಿಯನ್ನು ತಯಾರಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅದರ ಅನುಗುಣವಾಗಿ ಕಾರ್ಯಸೂಚಿಯನ್ನು ಕೈಗೊಳ್ಳ ಲಾಗುವುದು ಎಂದರು.
ಹಾರAಗಿ ಮೀನು ಸಾಕಣೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು ಅಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಿ ಇಲಾಖೆಗೆ ಸಂಬAಧಿಸಿದ ಕುಂದು ಕೊರತೆಗಳನ್ನು ತಿಳಿದುಕೊಂಡು ಸ್ಥಳೀಯ ಸಾರ್ವಜನಿಕರ ಅಭಿಪ್ರಾಯಗಳನ್ನು ಆಲಿಸಿ ಕೇಂದ್ರದ ಅಭಿವೃದ್ಧಿಗೆ ಪೂರಕವಾಗಿ ಹಂತ ಹಂತವಾಗಿ ಅನುದಾನವನ್ನು ನೀಡಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ನAತರ ಮಾಧ್ಯಮದವರೊಡನೆ ಮಾತನಾಡಿದ ಸಚಿವರು, ಅಳಿವಿನ ಅಂಚಿನಲ್ಲಿರುವ ಮಹಾಶಿರ್ ತಳಿಯ ಮೀನಿನ ಮರು ಸಂತಾನೋತ್ಪತ್ತಿ ಹಾಗೂ ಅದರ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ರಾಜ್ಯದ ಎಲ್ಲೆಡೆ ಸಂಚರಿಸಿ ಮತ್ಸö್ಯಸಂವರ್ಧನೆಗೆ ಪೂರಕವಾಗಿ ಆಗಬೇಕಾದ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರಾಜ್ಯಕ್ಕೆ ಇತರೆಡೆಗಳಿಂದ ಮೀನು ಸರಬರಾಜು ಹೆಚ್ಚಾಗಿದೆ. ಮೀನು ಸೇವಿಸುವವರ ಸಂಖ್ಯೆಕೂಡ ವೃದ್ಧಿಸಿದೆ. ಸಮುದ್ರ ಮೀನಿನಂತೆ
(ಮೊದಲ ಪುಟದಿಂದ) ಸಿಹಿ ನೀರಿನ ಮೀನಿನ ಸಂತತಿ ಕೂಡ ವೃದ್ಧಿಸಿ ಎಲ್ಲೆಡೆ ವಿತರಿಸಲು ಕ್ರಮವಹಿಸಲಾಗುವುದು ಎಂದರು.
ಇದೇ ಸಂದರ್ಭ ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಸರ್ಕಾರಿ ಮತ್ಸಾö್ಯಲಯ ಸ್ಥಾಪಿಸುವ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ಸಚಿವ ಮಂಕಾಳ ಎಸ್. ವೈದ್ಯ ಅವರಿಗೆ ಕೋರಿಕೆ ಪತ್ರವನ್ನು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ನೀಡಿದರು.
ಹಾರಂಗಿ ಮೀನು ಮರಿ ಕೇಂದ್ರದಲ್ಲಿರುವ ಖಾಲಿ ಜಾಗದಲ್ಲಿ ಸರ್ಕಾರಿ ಮತ್ಸ್ಯಾಲಯ ಸ್ಥಾಪಿಸಲು ಕ್ರಮ ಕೈಗೊಂಡು ಕೊಡಗು ಜಿಲ್ಲೆಯ ಪ್ರವಾಸೋದ್ಯಮವನ್ನು ಬಲಪಡಿಸಲು ಕ್ರಮ ಕೈಗೊಳ್ಳಬೇಕಾಗಿ ಸಲ್ಲಿಸಲಾಯಿತು.
ಈ ಸಂದರ್ಭ ಕಾಂಗ್ರೆಸ್ ಪಕ್ಷದ ಮುಖಂಡರಾದ ವಿ.ಪಿ ಶಶಿಧರ್, ಪ್ರಮೋದ್ ಮುತ್ತಪ್ಪ, ಎಂ.ಕೆ.ದಿನೇಶ್, ಜೋಸೆಫ್ ವಿಕ್ಟರ್ ಸೋನ್ಸ್, ಕಿರಣ್ ಸೇರಿದಂತೆ ಮೀನುಗಾರಿಕೆ ಇಲಾಖೆಯ ಮೈಸೂರು ವಲಯದ ಜಿಂಟಿ ನಿರ್ದೇಶಕ ಆರ್.ಗಣೇಶ್, ಮೀನುಗಾರಿಕೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಸಿ.ಎಸ್. ಸಚಿನ್, ಹಾರಂಗಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ. ಎಸ್. ಎಂ. ಸಚಿನ್, ಸೋಮವಾರಪೇಟೆ ಸಹಾಯಕ ನಿರ್ದೇಶಕಿ ಕೆ.ಬಿ. ಮಿಲನ್, ಮಡಿಕೇರಿ ಸಹಾಯಕ ನಿರ್ದೇಶಕಿ ಸ್ನೇಹ, ಅಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.