ಸೋಮವಾರಪೇಟೆ, ಅ. ೨೬: ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ಖಚಿತ ಮಾಹಿತಿ ಪಡೆದ ಸೋಮವಾರಪೇಟೆ ಪೊಲೀಸರು ದಾಳಿ ನಡೆಸಿ, ಮದ್ಯದ ಪ್ಯಾಕೇಟ್‌ಗಳನ್ನು ವಶಪಡಿಸಿ ಕೊಂಡಿರುವ ಘಟನೆ ಬುಧವಾರ ಗೋಣಿಮರೂರು ಜಂಕ್ಷನ್‌ನಲ್ಲಿ ನಡೆದಿದೆ.

ಈರಪ್ಪ ಎಂಬುವರು ತಮ್ಮ ದಿನಸಿ ಅಂಗಡಿಯಲ್ಲಿ ಮಾರಾಟಕ್ಕೆ ಸಂಗ್ರಹಿಸಿಟ್ಟ ೯೦ ಎಂ.ಎಲ್.ನ ೩೩ ಮದ್ಯದ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಾರ್ವಜನಿಕರೊಬ್ಬರು ೧೧೨ ಸಂಖ್ಯೆಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಇನ್ಸ್ಪೆಕ್ಟರ್ ರಾಮಚಂದ್ರನಾಯಕ್ ತಿಳಿಸಿದ್ದಾರೆ.