ಕೂಡಿಗೆ, ಅ. ೨೬: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಕೆ.ಕೆ. ಹೇಮಂತ್ ಕುಮಾರ್ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಉಪಾ ಧ್ಯಕ್ಷರಾಗಿ ವಿ. ಬಸಪ್ಪ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಗೊಂಡಿದ್ದ ಕೃಷ್ಣಗೌಡ, ಎಸ್.ಆರ್. ಅರುಣ್ ರಾವ್, ನಾಗರಾಜ್, ರಮೇಶ್, ಎಸ್.ಎಸ್. ಕೃಷ್ಣ, ಕೆ.ಪಿ. ರಾಜು, ಕೆ.ಜೆ. ಕುಮಾರ್, ಕೆ.ಬಿ. ರಾಮಚಂದ್ರ, ಕೆ.ಟಿ. ಅರುಣ್ ಕುಮಾರ್, ಜಯಶ್ರೀ, ಕೆ.ಕೆ. ಪ್ರವಿತ್ರ ಹಾಜರಿದ್ದರು. ಚುನಾವಣಾ ಅಧಿಕಾರಿ ಯಾಗಿ ಸಹಕಾರ ಇಲಾಖೆಯ ಅಧಿಕಾರಿ ಪಿ.ಬಿ. ಮೋಹನ್, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಪಿ. ಮೀನಾ ಹಾಜರಿದ್ದರು. ನಂತರ ಸಂಘದ ಸದಸ್ಯರು, ರೈತರು, ವಿಜಯೋತ್ಸವ ಆಚರಿಸಿದರು.