ಕೂಡಿಗೆ, ಅ. ೨೬: ಹಾಸನ-ಕುಶಾಲನಗರ ಹೆದ್ದಾರಿಗೆ ಹೊಂದಿಕೊAಡAತೆ ಇರುವ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಇಂಡಸ್ಟಿçಯಲ್ ಏರಿಯಾದ ಜಂಕ್ಷನ್ ಬಳಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮತ್ತು ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕಾಶಿನಾಥ್ ಅವರು ಜಂಟಿ ಪರಿಶೀಲನೆ ಮಾಡಿದರು.

ಈ ಸಂದರ್ಭ ಸಂಚಾರಿ ಠಾಣಾಧಿಕಾರಿ ಕಾಶಿನಾಥ್ ಅವರು ಪದೇ ಪದೇ ಅಪಘಾತವಾಗಲು ಪ್ರಮುಖ ಕಾರಣಗಳ ಬಗ್ಗೆ ಅಧ್ಯಕ್ಷರಿಗೆ ಮಾಹಿತಿ ನೀಡಿದರು.

ಈ ಸಂದರ್ಭ ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಇಂಡಸ್ಟಿçಯಲ್ ಏರಿಯಾದ ಜಂಕ್ಷನ್ ಬಳಿ ೪ ಪ್ರಮುಖ ರಸ್ತೆಗಳು ಸೇರುವ ಜಂಕ್ಷನ್ ಇದ್ದು, ಇಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುತ್ತದೆ.

ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುರಿAದ ಕೂಡ್ಲೂರು ಇಂಡಸ್ಟಿçಯಲ್ ಏರಿಯಾ ಜಂಕ್ಷನ್ ಬಳಿ ನಾಲ್ಕು ಕಡೆ ರಸ್ತೆ ಕಾಣುವಂತೆ ಪ್ರಕಾಶಮಾನವಾದ (ಸೋಡಿಯಂ) ದೀಪಗಳನ್ನು ಅಳವಡಿಸುವ ಮುಖಾಂತರ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಪಂಚಾಯಿತಿ ನೌಕರ ಅವಿನಾಶ್, ಸಂಚಾರಿ ಠಾಣೆಯ ಅಧಿಕಾರಿ ವರ್ಗದವರು ಹಾಜರಿದ್ದರು.