ಮಡಿಕೇರಿ, ಅ. ೨೬: ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಕ್ಕೆ ದಿನಂಪ್ರತಿ ಭಕ್ತರು ಆಗಮಿಸು ತ್ತಿದ್ದು, ತಮ್ಮ ಕೈಂಕರ್ಯಗಳನ್ನು ನಡೆಸುತ್ತಿದ್ದಾರೆ. ಕಾವೇರಿ ತೀರ್ಥೋದ್ಭವದ ಬಳಿಕ ಕಿರು ಸಂಕ್ರಮಣದ ತನಕವೂ ಸ್ಥಳಿಕರು ಹೆಚ್ಚಾಗಿ ಕ್ಷೇತ್ರಕ್ಕೆ ಆಗಮಿಸುತ್ತಾರೆ.
ಪ್ರಸ್ತುತ ತಲಕಾವೇರಿಯಲ್ಲಿ ಕೊಡಗು ಏಕೀಕರಣ ರಂಗದ ಮೂಲಕ ಅನ್ನದಾನವೂ ಮುಂದುವರಿ ಯುತ್ತಿದೆ. ಈಗ ದಿನವೊಂದಕ್ಕೆ ಅಂದಾಜು ಮೂರರಿಂದ ಮೂರೂವರೆ ಕ್ವಿಂಟಾಲ್‌ನಷ್ಟು ಅಕ್ಕಿಯ ಬಳಕೆಯಾಗುತ್ತಿದೆ ಎಂದು ರಂಗದ ಪ್ರಮುಖರು ತಿಳಿಸಿದ್ದಾರೆ. ರಂಗದ ಪದಾಧಿಕಾರಿಗಳು ವೇಳಾಪಟ್ಟಿಯಂತೆ ಈ ಕಾರ್ಯದಲ್ಲಿ ತೊಡಗಿಸಿ ಕೊಳ್ಳುತ್ತಿದ್ದಾರೆ. ಬೆಳಗ್ಗಿನ ಉಪಹಾರ ಸೇರಿದಂತೆ ಅಪರಾಹ್ನ ೪ರ ತನಕ ಈ ಸೇವೆ ದಿನಂಪ್ರತಿ ನಡೆಯುತ್ತಿದೆ. ರಂಗದ ಅನ್ನದಾನ ಕಾರ್ಯಕ್ಕೆ ಹಲವರು ಸಹಕಾರ ನೀಡುತ್ತಿದ್ದಾರೆ. ಇನ್ನು ಭಾಗಮಂಡಲ ಭಗಂಡೇಶ್ವರ ಕ್ಷೇತ್ರದಲ್ಲೂ ನಿತ್ಯದಾಸೋಹ ಕಾರ್ಯ ಎಂದಿನAತೆ ಮುಂದುವರಿಯುತ್ತಿದೆ. ಇಲ್ಲಿ ಅಂದಾಜು ಒಂದರಿAದ ಒಂದೂವರೆ ಕ್ವಿಂಟಾಲ್‌ನಷ್ಟು ಅಕ್ಕಿಯ ದಾಸೋಹ ನಡೆಯುತ್ತಿರುವುದಾಗಿ ತಿಳಿದುಬಂದಿದೆ. ಕೊಡವ ಸಂಪ್ರದಾಯದAತೆ ತೀರ್ಥೋದ್ಭವದ ಬಳಿಕದ ೧೦ ದಿನದ ಪತ್ತಾಲೋದಿ ಕಾರ್ಯ ತಾ.೨೭ರಂದು (ಇಂದು) ಆಚರಿಸಲ್ಪಡಲಿದೆ. ಈ ಆಚರಣೆ ತಲಕಾವೇರಿ
(ಮೊದಲ ಪುಟದಿಂದ) ಕ್ಷೇತ್ರದಲ್ಲಿ ನಡೆಯುವುದಿಲ್ಲವಾದರೂ, ಜನಾಂಗದವರು ತಮ್ಮ ತಮ್ಮ ಕುಟುಂಬಗಳಲ್ಲಿ ಇದನ್ನು ಪಾಲಿಸುತ್ತಾರೆ. ತಾ. ೨೭ರಂದು (ಇಂದು) ಹಲವು ಕುಟುಂಬಗಳಲ್ಲಿ ಕಾರೋಣರಿಗೆ ಕೊಡುವ ಕಾರ್ಯ ನಡೆಯುತ್ತದೆ. ಇದರೊಂದಿಗೆ ಕೆಲವು ಶುಭ ಕಾರ್ಯಗಳಿಗೂ ಈ ದಿನ ವಿಶೇಷವೆಂದು ಹೇಳಲಾಗಿದೆ.
ಪಾಡಿ ಇಗ್ಗುತ್ತಪ್ಪ ಕ್ಷೇತ್ರದಲ್ಲಿಯೂ ದೇವತಕ್ಕರಾದ ಪರದಂಡ ಕುಟುಂಬದ ವತಿಯಿಂದ ತೊಲೆಯಾರ್ ೧೦ರ ಪತ್ತಾಲೋದಿ ವಿಶೇಷ ಕಾರ್ಯ ಜರುಗಲಿದ್ದು, ಇಲ್ಲಿಯೂ ಭಕ್ತರು ಪಾಲ್ಗೊಳ್ಳುತ್ತಾರೆ.